ಕರ್ನಾಟಕ

karnataka

ETV Bharat / bharat

ಟ್ರಂಪ್ ಸೋಲಿನಿಂದ ಭಾರತೀಯರು ಪಾಠ ಕಲಿತರೆ ಉತ್ತಮ: ಶಿವಸೇನೆ - ಸಮ್ನಾದಲ್ಲಿ ಟ್ರಂಪ್ ಸೋಲಿನ ಬಗ್ಗೆ ಹೇಳಿಕೆ

ಭಾರತವು 'ನಮಸ್ತೆ ಟ್ರಂಪ್' ಅನ್ನು ಹೇಗೇ ಆಯೋಜಿಸಿದರೂ, ಅಮೆರಿಕದ ಸಂವೇದನಾಶೀಲ ಜನರು ಟ್ರಂಪ್‌ಗೆ 'ಬೈ - ಬೈ' ಎಂದು ಹೇಳುವ ಮೂಲಕ ತಮ್ಮ ತಪ್ಪು ಸರಿಪಡಿಸಿದ್ದಾರೆ ಎಂದು ಶಿವಸೇನೆ ಹೇಳಿದೆ.

It would be good if India learns something from Trump's defeat
ಟ್ರಂಪ್ ಸೋಲಿನಿಂದ ಭಾರತೀಯರು ಪಾಠ ಕಲಿತರೆ ಉತ್ತಮ

By

Published : Nov 9, 2020, 9:31 AM IST

ಮುಂಬೈ (ಮಹಾರಾಷ್ಟ್ರ):ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತ ಏನಾದರು ಪಾಠ ಕಲಿತರೆ ಒಳ್ಳೆಯದು ಎಂದು ಶಿವಸೇನೆ, ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಹೇಳಿದೆ.

ಪಕ್ಷದ ಮುಖವಾಣಿ 'ಸಾಮ್ನಾ' ಮೂಲಕ ಶಿವಸೇನೆ, "ಅಧ್ಯಕ್ಷ ಟ್ರಂಪ್ ಎಂದಿಗೂ ದೇಶದ ಮುಖ್ಯಸ್ಥ ಸ್ಥಾನಕ್ಕೆ ಅರ್ಹರಲ್ಲ. ಅಮೆರಿಕ ಜನರು ಟ್ರಂಪ್ ಬಗ್ಗೆ ಮಾಡಿದ ತಪ್ಪನ್ನು ಕೇವಲ ನಾಲ್ಕು ವರ್ಷಗಳಲ್ಲಿ ಸರಿಪಡಿಸಿದ್ದಾರೆ. ಟ್ರಂಪ್​ಗೆ ಕನಿಷ್ಠ ಒಂದು ಭರವಸೆಯನ್ನೂ ಸಹ ಪೂರೈಸಲು ಸಾಧ್ಯವಾಗಲಿಲ್ಲ. ನಾವು ಟ್ರಂಪ್ ಸೋಲಿನಿಂದ ಏನನ್ನಾದರು ಕಲಿತರೆ ಒಳ್ಳೆಯದು" ಎಂದಿದೆ.

ಅಮೆರಿಕದಲ್ಲಿ ನಿರುದ್ಯೋಗ ಸಾಂಕ್ರಾಮಿಕವು ಕೋವಿಡ್​ಗಿಂತ ಹೆಚ್ಚಾಗಿದೆ. ಹೇಗಾದರೂ, ಟ್ರಂಪ್ ಪರಿಹಾರವನ್ನು ಕಂಡುಕೊಳ್ಳುವ ಬದಲು, ರಾಜಕೀಯದ ಜಪ ಮಾಡಿದ್ರು ಎಂದು ಶಿವಸೇನೆ ಹೇಳಿದೆ.

"ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಸ್ಪಷ್ಟವಾಗಿ ಸೋತಿದೆ. ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನು ಹೊರತುಪಡಿಸಿ ಪರ್ಯಾಯ ಆಯ್ಕೆಗಳಿಲ್ಲ ಎಂಬ ಭ್ರಮೆಯಲ್ಲಿರುವ ನಾಯಕರನ್ನು ತೆಗೆದುಹಾಕುವ ಕೆಲಸವನ್ನು ಜನು ಮಾಡಬೇಕಿದೆ" ಎಂದು ಶಿವಸೇನೆ ಹೇಳಿದೆ.

ಟ್ರಂಪ್ ಸೋಲು ಒಪ್ಪಿಕೊಂಡಿಲ್ಲ, ಮತದಾನದ ಹಗರಣದ ಬಗ್ಗೆ ಅವರು 'ಹಾಸ್ಯಾಸ್ಪದ' ಆರೋಪಗಳನ್ನು ಮಾಡಿದ್ದಾರೆ. "ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು. ತಪ್ಪು ಮನುಷ್ಯನೊಂದಿಗೆ ನಿಲ್ಲುವುದು ನಮ್ಮ ಸಂಸ್ಕೃತಿಯಲ್ಲ. ಆದರೆ, ಇನ್ನೂ ಅದನ್ನೇ ಮಾಡಲಾಗುತ್ತಿದೆ. ಬೈಡನ್ ಅಮೆರಿಕದ ಅಧ್ಯಕ್ಷರಾಗುತ್ತಾರೆ" ಎಂದು ಶಿವಸೇನೆ ಹೇಳಿದೆ.

"ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಟ್ರಂಪ್ ಆಕೆಯ ಸಾಧನೆಯನ್ನು ಖಂಡಿಸಿದರು, ಅವರು ಮಹಿಳೆಯನ್ನು ಗೌರವಿಸಲಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸಿದರು" ಎಂದಿದೆ.

ಭಾರತವು 'ನಮಸ್ತೆ ಟ್ರಂಪ್' ಅನ್ನು ಹೇಗೆ ಆಯೋಜಿಸಿದರೂ, ಅಮೆರಿಕದ ಸಂವೇದನಾಶೀಲ ಜನರು ಟ್ರಂಪ್‌ಗೆ 'ಬೈ-ಬೈ' ಎಂದು ಹೇಳುವ ಮೂಲಕ ತಮ್ಮ ತಪ್ಪು ಸರಿಪಡಿಸಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ, ನಿತೀಶ್ ಕುಮಾರ್ ಸೇರಿದಂತೆ ಇತರ ನಾಯಕರು ಯುವ ತೇಜಸ್ವಿ ಯಾದವ್ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲ" ಎಂದು ಹೇಳಿದೆ.

ABOUT THE AUTHOR

...view details