ಚೆನ್ನೈ (ತಮಿಳುನಾಡು):ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲೆ ಪಿಎಂಕೆ ಪಕ್ಷ ಹೆಚ್ಚಿನ ಒತ್ತಡ ಹೇರಿತ್ತೇ ಹೊರತು ಡಿಎಂಕೆ ಅಲ್ಲ. ಜಯಲಲಿತಾ ಅವರ ಸಾವಿನ ಪ್ರಕರಣ ಸಂಬಂಧ ಡಿಎಂಕೆ ಪಕ್ಷ ಕಾನೂನಿನಡಿ ಪ್ರಕರಣ ದಾಖಲಿಸಿ ತನಿಖೆಗೆ ಆಗ್ರಹಿಸಿತ್ತು. ಆದರೆ, ಪಿಎಂಕೆ ಹೆಚ್ಚಿನ ಒತ್ತಡವನ್ನು ಹೇರಿತ್ತು ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಆರೋಪಿಸಿದರು.
ಚೆನ್ನೈನ ಅನ್ನಾ ಅರಿವಲಯಂನಲ್ಲಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಮತ್ತು ರಾಜ್ಯ ಪರಿಷತ್ ಸದಸ್ಯ ಎನ್.ಆರ್.ಇಲಾಂಗೊ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಿಎಂಕೆ ವಿರುದ್ಧ ಗುಡುಗಿದರು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರು ಎಲ್ಲೆಲ್ಲಿ ಪ್ರಚಾರ ಹೋಗುತ್ತಿದ್ದರೋ ಅಲ್ಲೆಲ್ಲ ಸುಳ್ಳಿನ ಕಟ್ಟು ಕತೆಗಳನ್ನು ಹೇಳುತ್ತಿದ್ದಾರೆ. ಜಯಲಲಿತಾ ಅವರು ಸಾವಿಗೆ ಡಿಎಂಕೆ ಕಾರಣ. ಡಿಎಂಕೆ ಅವರ ನ್ಯಾಯಾಲಯದ ಪ್ರಕರಣಗಳಿಂದ ಖಿನ್ನತೆಗೆ ಒಳಗಾಗಿ ನಿಧನ ಹೊಂದಿದರು ಎಂದು ಆರೋಪಿಸಿದ್ದಾರೆ.