ಕರ್ನಾಟಕ

karnataka

ETV Bharat / bharat

ಹೊಸ ಐಟಿ ನಿಯಮಗಳು ಬಳಕೆದಾರರನ್ನು ರಕ್ಷಿಸುತ್ತವೆ: ಸ್ವದೇಶಿ ‘ಕೂ’ ಆ್ಯಪ್‌ನಲ್ಲಿ ಕೇಂದ್ರ ಸಚಿವರ ಫಸ್ಟ್ ಪೋಸ್ಟ್​

ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಷ್ಠಾನ ಮತ್ತು ಅನುಸರಣೆಯನ್ನು ಪರಿಶೀಲಿಸಲಾಗಿದೆ. ಹೊಸ ಐಟಿ ನಿಯಮಗಳು ಭಾರತದಲ್ಲಿ ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

IT Rules 2021 Empowering, Protecting Users: Minister
‘ಕೂ’ ನಲ್ಲಿ ಅಶ್ವಿನಿ ವೈಷ್ಣವ್ ಫಸ್ಟ್ ಪೋಸ್ಟ್​

By

Published : Jul 11, 2021, 7:17 PM IST

ನವದೆಹಲಿ:ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳು ಬಳಕೆದಾರರನ್ನು ಸಬಲೀಕರಣಗೊಳಿಸುತ್ತಿವೆ ಮತ್ತು ರಕ್ಷಿಸುತ್ತಿವೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಹೊಸ ಐಟಿ ನಿಯಮಗಳು ಭಾರತದಲ್ಲಿ ಸುರಕ್ಷಿತ ಮತ್ತು ಹೆಚ್ಚು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ. ನನ್ನ ಸಹೋದ್ಯೋಗಿ ಐಟಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಷ್ಠಾನ ಮತ್ತು ಅನುಸರಣೆಯನ್ನು ಪರಿಶೀಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅಳವಡಿಸುವಿಕೆ ಬಗ್ಗೆ ಚರ್ಚಿಸಿದ್ದೇನೆ ಎಂದು ಅಶ್ವಿನಿ ವೈಷ್ಣವ್ Koo(ದೇಶೀಯ ಸಾಮಾಜಿಕ ಜಾಲತಾಣ) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಮಾರ್ಗಸೂಚಿಗಳು ಬಳಕೆದಾರರನ್ನು ಸಬಲೀಕರಣಗೊಳಿಸುತ್ತಿವೆ ಮತ್ತು ರಕ್ಷಿಸುತ್ತಿವೆ. ಭಾರತದಲ್ಲಿ ಸುರಕ್ಷಿತ ಮತ್ತು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

ಮೇ 25 ರಿಂದ ಜಾರಿಗೆ ಬಂದ ಹೊಸ ನಿಯಮಗಳು ಬಳಕೆದಾರರಿಂದ ದೂರುಗಳನ್ನು ಪರಿಹರಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಆದೇಶ ನೀಡುತ್ತದೆ. ಭಾರತದಲ್ಲಿ 50 ಲಕ್ಷ ಬಳಕೆದಾರರನ್ನು ಹೊಂದಿರುವ ಯಾವುದೇ ಸಾಮಾಜಿಕ ಜಾಲತಾಣ ಮೂರು ರೀತಿಯ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಕ ಮಾಡಬೇಕಾಗಿತ್ತು. ಮುಖ್ಯ ಅನುಸರಣಾ ಅಧಿಕಾರಿ, ನೋಡಲ್​ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಬೇಕಾಗಿತ್ತು .ಇವರೆಲ್ಲರೂ ಭಾರತದಲ್ಲಿ ವಾಸಿಸುವವರಾಗಿರಬೇಕು.

ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾದ ಆರೋಪ ಎದುರಿಸುತ್ತಿದ್ದ ಟ್ವಿಟರ್, ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್​ ಪ್ರಕಾಶ್ ಅವ​​ರನ್ನು ಭಾನುವಾರ ನೇಮಕ ಮಾಡಿದೆ.

ಬಿಜೆಪಿ ಹಿರಿಯ ಮುಖಂಡ ರವಿಶಂಕರ್ ಪ್ರಸಾದ್ ಬಳಿಕ ಮಾಜಿ ಐಎಎಸ್ ಅಧಿಕಾರಿ, ಒಡಿಶಾ ಬಿಜೆಪಿ ನಾಯಕ ಅಶ್ವಿನಿ ವೈಷ್ಣವ್ ಅವ​ರನ್ನು ನೂತನ ಐಟಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಈ ಮಧ್ಯೆ ಭಾರತದ ಕೂ ಆ್ಯಪ್​ಗೆ ಸಚಿವರು ಜುಲೈನಲ್ಲಿ ಕೂಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಇದೀಗ ಕೂನಲ್ಲಿ ಮೊದಲ ಪೋಸ್ಟ್ ಮಾಡಿದ್ದಾರೆ. ಕೂ ಅಪ್ಲಿಕೇಷನ್​ಗೆ ಸರ್ಕಾರದ ಬೆಂಬಲವನ್ನೂ ಸೂಚಿಸಿದ್ದಾರೆ.

ABOUT THE AUTHOR

...view details