ಕರ್ನಾಟಕ

karnataka

ETV Bharat / bharat

ಪ್ರಿಯಾಂಕಾ ಗಾಂಧಿ ಮಕ್ಕಳ ಇನ್​ಸ್ಟಾಗ್ರಾಮ್​ ಹ್ಯಾಕ್​ ಆರೋಪ.. ದೂರು ದಾಖಲಿಸಿಕೊಂಡ ಕೇಂದ್ರ ಸರ್ಕಾರ - ದೂರು ದಾಖಲಿಸಿಕೊಂಡ ಕೇಂದ್ರ ಸರ್ಕಾರ

ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಪಕ್ಷ ನಾಯಕರ ಫೋನ್​ ಕದ್ದಾಲಿಸಿದರೆ, ಕೇಂದ್ರ ಸರ್ಕಾರ ನನ್ನ ಮಕ್ಕಳ ಇನ್​ಸ್ಟಾಗ್ರಾಮ್​ ಖಾತೆಗಳನ್ನು ಹ್ಯಾಕ್​ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು..

Priyanka Gandhi
ಪ್ರಿಯಾಂಕಾ ಗಾಂಧಿ

By

Published : Dec 22, 2021, 3:00 PM IST

ನವದೆಹಲಿ :ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಿನ್ನೆಯಷ್ಟೇ ಅವರ ಮಕ್ಕಳ ಇನ್​ಸ್ಟಾಗ್ರಾಮ್​ ಖಾತೆಯನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ ಬೆನ್ನಲ್ಲೇ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ದೂರು ದಾಖಲಿಸಿಕೊಂಡಿದೆ.

ಉತ್ತರಪ್ರದೇಶ ಸರ್ಕಾರ ವಿಪಕ್ಷ ನಾಯಕರ ಫೋನ್​ ಕದ್ದಾಲಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಿನ್ನೆ ಲಖನೌನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಪಕ್ಷ ನಾಯಕರ ಫೋನ್​ ಕದ್ದಾಲಿಸಿದರೆ, ಕೇಂದ್ರ ಸರ್ಕಾರ ನನ್ನ ಮಕ್ಕಳ ಇನ್​ಸ್ಟಾಗ್ರಾಮ್​ ಖಾತೆಗಳನ್ನು ಹ್ಯಾಕ್​ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ನನ್ನ ಮಕ್ಕಳ ಇನ್​​ಸ್ಟಾಗ್ರಾಂ ಹ್ಯಾಕ್​ ಮಾಡಿದ್ದಾರೆ: ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

ಇದೀಗ ಕೇಂದ್ರ ಸರ್ಕಾರ ಪ್ರಿಯಾಂಕಾ ವಾದ್ರಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದೆ. ಅವರ ಹೇಳಿಕೆಯ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದೆ ಎಂದು ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details