ಕರ್ನಾಟಕ

karnataka

ETV Bharat / bharat

ಭಾರತದ ತಪ್ಪು ನಕಾಶೆ ಪ್ರಕಟಿಸಿದ್ದಕ್ಕೆ ಕೇಂದ್ರ ಚಾಟಿ: ಕ್ಷಮೆ ಕೋರಿದ ವಾಟ್ಸ್​ಆ್ಯಪ್ - whatsapp publish incorrect map of India

ತಪ್ಪಾದ ದೇಶದ ನಕಾಶೆಯನ್ನು ಪ್ರದರ್ಶಿಸಿದ ವಾಟ್ಸ್​ಆ್ಯಪ್​ ಅನ್ನು ಕೇಂದ್ರ ಐಟಿ ಸಚಿವ ರಾಜೀವ್​ ಚಂದ್ರಶೇಖರ್​ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸಂಸ್ಥೆ ತಪ್ಪಾದ ಟ್ವೀಟ್​ ಅಳಿಸಿ ಹಾಕಿದ್ದು ದೇಶದ ಕ್ಷಮೆಯಾಚಿಸಿದೆ.

incorrect-map-of-india
ವಾಟ್ಸ್​ಆ್ಯಪ್​ಗೆ ಕೇಂದ್ರ ಚಾಟಿ

By

Published : Jan 1, 2023, 2:06 PM IST

ನವದೆಹಲಿ:ತಪ್ಪಾದ ಭಾರತದ ನಕ್ಷೆಯುಳ್ಳ ವಿಡಿಯೋವನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡ ವಾಟ್ಸ್​ಆ್ಯಪ್​ಗೆ ಕೇಂದ್ರ ಸರ್ಕಾರ ಬಿಸಿ ಮುಟ್ಟಿಸಿದೆ. ಕೇಂದ್ರದ ಎಚ್ಚರಿಕೆಯ ಬಳಿಕ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಂಡ ಮೈಕ್ರೋಬ್ಲಾಗಿಂಗ್​ ಸಂಸ್ಥೆಯು ಟ್ವೀಟ್​ ಅಳಿಸಿದ್ದು ದೇಶದ ಕ್ಷಮೆ ಕೋರಿದೆ.

ಪಾಕ್​ ಆಕ್ರಮಿತ ಮತ್ತು ಚೀನಾ ಹಕ್ಕು ಸಾಧಿಸಿದ ಪ್ರದೇಶಗಳನ್ನು ಕೈಬಿಟ್ಟ ಭಾರತದ ನಕ್ಷೆಯನ್ನು ತೋರಿಸುವ ಭೂಪಟದ ವಿಡಿಯೋವನ್ನು ವಾಟ್ಸ್​ಆ್ಯಪ್​ ಹೊಸವರ್ಷದ ಮುನ್ನಾದಿನ ಶುಭಾಶಯ ಸಲ್ಲಿಸುವ ಟ್ವೀಟ್​ ಮಾಡಿತ್ತು. ಅದರಲ್ಲಿ ದೇಶದ ನಕಾಶೆ ತಪ್ಪಾಗಿರುವುದು ಕೇಂದ್ರ ಐಟಿ ಸಚಿವ ರಾಜೀವ್​ ಚಂದ್ರಶೇಖರ್​ ಅವರ ಗಮನಕ್ಕೆ ಬಂದಿದೆ.

ಈ ಬಗ್ಗೆ ಸಂಸ್ಥೆಗೆ ಟ್ವೀಟ್​ ಮೂಲಕವೇ ಎಚ್ಚರಿಕೆಯ ಮಾಹಿತಿ ನೀಡಿದ ಸಚಿವರು, 'ಭಾರತದಲ್ಲಿ ವ್ಯಾಪಾರ ಮಾಡುವ ಅಥವಾ ಮುಂದುವರಿಸಲು ಬಯಸುವ ಎಲ್ಲಾ ಸಾಮಾಜಿಕ ಮಾಧ್ಯಮಗಳು ದೇಶದ ಸರಿಯಾದ ನಕ್ಷೆಯನ್ನು ಬಳಸಬೇಕು' ಎಂದು ತಾಕೀತು ಮಾಡಿದ್ದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ವಾಟ್ಸ್​ಆ್ಯಪ್​, 'ಇದು ಉದ್ದೇಶಪೂರ್ವಕವಾಗಿ ಎಸಗಿದ ಪ್ರಮಾದವಲ್ಲ. ಇದನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು' ಎಂದು ಸಚಿವರಿಗೆ ಧನ್ಯವಾದ ಹೇಳಿದೆ. ತಕ್ಷಣವೇ ಪ್ರಮಾದವುಳ್ಳ ಟ್ವೀಟ್​ ಅಳಿಸಿ ಹಾಕಿ, ದೇಶಕ್ಕೆ ಕ್ಷಮೆ ಕೋರಿದೆ. ಅಲ್ಲದೇ, ಭವಿಷ್ಯದಲ್ಲಿ ಇದು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದೆ.

ಹಾಗಂತ, ಈ ಪ್ರಮಾದ ಇದೇ ಮೊದಲಲ್ಲ:ಕೆಲ ದಿನಗಳ ಹಿಂದೆ ಭಾರತದ ತಪ್ಪಾದ ನಕ್ಷೆಯನ್ನು ಜೂಮ್​ ಆ್ಯಪ್​ ಪ್ರದರ್ಶಿಸಿದ್ದಕ್ಕೆ ಕಂಪನಿಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಯುವಾನ್​ಗೆ ಸಚಿವ ರಾಜೀವ್​ ಚಂದ್ರಶೇಖರ್​ ಅವರು ಎಚ್ಚರಿಕೆ ನೀಡಿದ್ದರು. ತಕ್ಷಣವೇ ಜೂಮ್​ ಕಂಪನಿ ತಪ್ಪು ಸರಿ ಮಾಡಿಕೊಂಡಿತ್ತು. ನೀವು ಬಳಸುತ್ತಿರುವ ಭಾರತದ ನಕಾಶೆಯನ್ನು ಒಮ್ಮೆ ಸರಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ಸಚಿವರು ಕಂಪನಿಗೆ ಡಿಸೆಂಬರ್​ 28 ರಂದು ಟ್ವೀಟ್​ ಮಾಡಿ ಸೂಚಿಸಿದ್ದರು. ಎಚ್ಚೆತ್ತುಕೊಂಡ ಕಂಪನಿ ಪೋಸ್ಟ್​ ಅಳಿಸಿ ಹಾಕಿತ್ತು.

ಜೂನ್​ನಲ್ಲಿ ಟ್ವಿಟರ್​ ಕೂಡ ಭಾರತದ ನಕ್ಷೆಯನ್ನು ತಪ್ಪಾಗಿ ಪ್ರದರ್ಶಿಸಿ ಟ್ವೀಟ್​ ಮಾಡಿತ್ತು. ಇದು ಭಾರಿ ಟೀಕೆಗೆ ಗುರಿಯಾದ ಬಳಿಕ, ತಪ್ಪು ನಕ್ಷೆಯುಳ್ಳ ಪೋಸ್ಟ್​ ಅನ್ನು ಕಂಪನಿ ತೆಗೆದುಹಾಕಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ದೇಶದ ಬಗ್ಗೆ ಹರಡುತ್ತಿರುವ ದ್ವೇಷದ ಹೇಳಿಕೆ, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕಿತು. ಇಂತಹ ಸುದ್ದಿಗಳು ಹರಡದಂತೆ ಸಾಮಾಜಿಕ ಮಾಧ್ಯಮಗಳು ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಇದಕ್ಕೆ ನೀವೇ ಹೊಣೆಗಾರರು. ಈ ಸಮಸ್ಯೆ ನಿವಾರಣೆಗಾಗಿ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸರ್ಕಾರ ಸೂಚಿಸಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿನ ದೋಷಗಳ ವಿರುದ್ಧ ಬಳಕೆದಾರರ ದೂರುಗಳನ್ನು ಪರಿಹರಿಸುವ ವಿಧಾನದ ಮೇಲೆಯೇ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೇ ನೇಮಿಸಿದ ಸಮಿತಿ ಜಾರಿ ಬರುವಂತೆ 2022 ರ ಅಕ್ಟೋಬರ್​ನಲ್ಲಿ ಐಟಿ ನಿಯಮಗಳನ್ನು ಬಿಗಿಗೊಳಿಸಲಾಯಿತು.

ಇದನ್ನೂ ಓದಿ:ವರ್ಷದ ಮೊದಲ ದಿನವೇ ದರ ಏರಿಕೆ ಬಿಸಿ: ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ

ABOUT THE AUTHOR

...view details