ವಿಲ್ಲುಪುರಂ, ತಮಿಳೂನಾಡು: ಜಿಲ್ಲೆಯ ವನೂರಿನ ಪಕ್ಕದಲ್ಲಿರುವ ನಲ್ಲವೂರು ಗ್ರಾಮದ ಚಂದ್ರಶೇಖರನ್ (31) ಪದವೀಧರ. ಅವರು ಚೆನ್ನೈನಲ್ಲಿ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಗ್ರಾಮದ ಈಶ್ವರನ್ ಕೋಯಿಲ್ ಬೀದಿಯಲ್ಲಿ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡಿಸಿದ್ದಾರೆ. ಈ ರಸ್ತೆ ದುರಸ್ತಿ ಪಡಿಸಲು ಚಂದ್ರಶೇಖರನ್ ಮದುವೆಗೆಂದು ಕೂಡಿಟ್ಟಿದ್ದ 9.50 ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ.
ಎರಡು ದಶಕಗಳ ಹಿಂದೆ ನಿರ್ಮಿಸಿದ್ದ ರಸ್ತೆ ಹಾಳು:ನಾನು ಚೆನ್ನೈನ ಖಾಸಗಿ ಐಟಿ ಕಂಪನಿಯಲ್ಲಿ ಹಿರಿಯ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಳ್ಳಿಯ ಈಶ್ವರನ್ ಕೋಯಿಲ್ ಬೀದಿ ರಸ್ತೆಯನ್ನು 20 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಅದು ಈಗ ಬಳಸಲು ಸಾಧ್ಯವಾಗದಷ್ಟು ಹಾಳಾಗಿದೆ. ಇಲ್ಲಿನ ಜನಕ್ಕೆ ಈ ರಸ್ತೆ ಮೇಲೆ ನಡೆಯಲು ತುಂಬಾ ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ರಸ್ತೆ ದುರಸ್ತಿ ಮಾಡುವಂತೆ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಣದ ಕೊರತೆ ಇದೆ ಎಂದು ಹೇಳುವ ಮೂಲಕ ರಸ್ತೆ ದುರಸ್ತಿಗೆ ಹಿಂದೇಟು ಹಾಕಿದ್ದರು ಎಂದು ಚಂದ್ರಶೇಖರನ್ ಹೇಳಿದರು.
‘ನಮಕ್ಕು ನಾಮೆ’ ಯೋಜನೆಯಡಿ ಈ ರಸ್ತೆಯನ್ನು ದುರಸ್ತಿಗೊಳಿಸಬಹುದು ಎಂದು ಕೆಲವು ಸ್ನೇಹಿತರು ಸಲಹೆ ನೀಡಿದ ನಂತರ ನಾನು ವನೂರು ಜಿಲ್ಲಾ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಿದೆ. 50 ರಷ್ಟು ಹಣ ಕೊಡಲು ಒಪ್ಪಿಕೊಂಡರು. ಯೋಜನೆಯ ಅನ್ವಯ ಬಂದ ಶೇ 50 ರಷ್ಟು ಹಣಕ್ಕೆ ಚಂದ್ರಶೇಖರನ್ ಸಹ ಶೇ 50 ಹಣವನ್ನು ನೀಡಿ ಊರಿನ ರಸ್ತೆಯನ್ನ ಮಾಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ದುರಸ್ತಿ ಕಾರ್ಯಕ್ಕೆ ಮದುವೆಗೆ ಕೂಡಿಟ್ಟಿದ್ದ ಹಣ ಕೊಟ್ಟ ಐಟಿ ಉದ್ಯೋಗಸ್ಥ ಓದಿ:100 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಚೆನ್ನೈ ಮೂಲದ ಐಟಿ ಕಂಪನಿ
ರಸ್ತೆಗಾಗಿ ಮದುವೆಗೆ ಕೂಡಿಟ್ಟಿದ್ದ ಹಣ ಬಳಸಿದ ಯುವಕ: ರಸ್ತೆ ನಿರ್ಮಾಣಕ್ಕೆ 60ರಷ್ಟು ಹಣ ಸಂಗ್ರಹವಾಗಿತ್ತು. ಇನ್ನು 40 ರಷ್ಟು ಹಣ ಜೋಡಿಸುವ ಕಾರ್ಯಕ್ಕೆ ಮುಂದಾದಾಗ ನನ್ನ ಮದುವೆಗೆಂದು ಉಳಿಸಿದ್ದ 9.5 ಲಕ್ಷ ಹಣವನ್ನು ರಸ್ತೆ ನಿರ್ಮಾಣಕ್ಕೆ ನೀಡಲು ನಿರ್ಧರಿಸಿದೆ. ನಾನು ಅದನ್ನು ನನ್ನ ಪೋಷಕರಿಗೆ ಹೇಳಿದೆ. ಅವರಿಗೂ ರಸ್ತೆ ನಿರ್ಮಿಸುವ ಆಸಕ್ತಿ ಇದ್ದರೂ ‘ಸ್ಥಳೀಯ ರಾಜಕಾರಣಿಗಳಿಗೆ ಸಿಟ್ಟು ಬರುತ್ತೆ’ ಎಂಬ ಕೊಂಚ ಭಯವಿತ್ತು. ಅವರನ್ನು ಹುರಿದುಂಬಿಸಿ ರಸ್ತೆ ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಬಗ್ಗೆ ನಾನು ವಿಲ್ಲುಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸ್ನೇಹಿತ ಎಜುಮಲೈ ಅವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಿದರು.
ತಮಿಳುನಾಡು ಸರ್ಕಾರದ ನಮಕ್ಕು ನಾಮೆ ಯೋಜನೆಯಡಿ ಶೇ 100 ರಷ್ಟು ಕೊಡುಗೆಯೊಂದಿಗೆ ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲು ನನ್ನ ಸ್ನೇಹಿತ ಸಹಾಯ ಮಾಡಿದನು. ಕಳೆದ ಮಾರ್ಚ್ನಲ್ಲಿ 290 ಮೀಟರ್ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿಯನ್ನು ವನೂರು ಗ್ರಾಮಾಭಿವೃದ್ಧಿ ಅಧಿಕಾರಿಗಳು ಪ್ರತಿನಿತ್ಯ ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ಚಂದ್ರಶೇಖರ್ ಹೇಳಿದರು.
ದುರಸ್ತಿ ಕಾರ್ಯಕ್ಕೆ ಮದುವೆಗೆ ಕೂಡಿಟ್ಟಿದ್ದ ಹಣ ಕೊಟ್ಟ ಐಟಿ ಉದ್ಯೋಗಸ್ಥ ಈ ರಸ್ತೆ ನಿರ್ಮಿಸಲು ಜಿಲ್ಲಾಡಳಿತ ರೂ.10.50 ಲಕ್ಷ ವೆಚ್ಚ ಮಾಡಲು ಅನುಮತಿ ನೀಡಿದೆ. ಈ ಅನುಮತಿಯನ್ನು ಪಡೆಯಲು ನನಗೆ ಸಹಾಯ ಮಾಡಿದ್ದಕ್ಕಾಗಿ ವಿಲ್ಲುಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಮಸುಂದರಂ ಮತ್ತು ಸೆಲ್ವಗಣಪತಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಚಂದ್ರಶೇಖರ್ ಹೇಳಿದರು.
ಓದಿ:ಬೆಂಗಳೂರಲ್ಲಿ ಮುಗಿಯದ ರಸ್ತೆ ಗುಂಡಿ ಸಮಸ್ಯೆ.. ಹೊಸದಾಗಿ 4545 ರಸ್ತೆ ಗುಂಡಿಗಳು ಪತ್ತೆ