ಕರ್ನಾಟಕ

karnataka

ETV Bharat / bharat

ಲವ್​ ಮ್ಯಾಟರ್​.. ಡೆಂಟಲ್​ ವಿದ್ಯಾರ್ಥಿನಿಯನ್ನು ಬ್ಲೇಡ್​ನಿಂದ ಕತ್ತು ಕೊಯ್ದು ಟೆಕ್ಕಿ - ಲವ್​ ಮ್ಯಾಟರ್

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. ಐಟಿ ಉದ್ಯೋಗಿಯೊಬ್ಬ ದಂತ ವಿದ್ಯಾರ್ಥಿನಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಗರವನ್ನೇ ಬೆಚ್ಚಿ ಬೀಳಿಸಿದೆ.

IT employee murder dental student  murder dental student with a surgical blade  IT employee attempt suicide  murder dental student for refusing love  ಗುಂಟೂರು ಜಿಲ್ಲೆಯಲ್ಲಿ ಭೀಕರ ಕೊಲೆ  ಐಟಿ ಉದ್ಯೋಗಿಯೊಬ್ಬ ದಂತ ವಿದ್ಯಾರ್ಥಿನಿ  ದಂತ ವಿದ್ಯಾರ್ಥಿನಿಯನ್ನು ಕತ್ತು ಕೊಯ್ದು ಕೊಲೆ  ಕತ್ತು ಕೊಯ್ದು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನ  ವಿಜಯವಾಡದ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್  ಮಣಿಕೊಂಡದ ಸಾಫ್ಟ್‌ವೇರ್ ಉದ್ಯೋಗಿ ಜ್ಞಾನೇಶ್ವರ್​ ಪ್ರೇಮ ವಿವಾದದ ಹಿನ್ನೆಲೆ  ಪೊಲೀಸ್ ಠಾಣೆಯಲ್ಲಿ ದೂರು  ಸರ್ಜಿಕಲ್​ ಬ್ಲೇಡ್​ನಿಂದ ಕತ್ತು ಕೊಯ್ದು ಕೊಲೆ  ಕತ್ತು ಕೊಯ್ದು ಕೊಲೆ ಮಾಡಿದ ಐಟಿ ಉದ್ಯೋಗಿ
ದಂತ ವಿದ್ಯಾರ್ಥಿನಿಯನ್ನು ಸರ್ಜಿಕಲ್​ ಬ್ಲೇಡ್​ನಿಂದ ಕತ್ತು ಕೊಯ್ದು ಕೊಲೆ ಮಾಡಿದ ಐಟಿ ಉದ್ಯೋಗಿ

By

Published : Dec 6, 2022, 2:25 PM IST

ಗುಂಟೂರು(ಆಂಧ್ರಪ್ರದೇಶ):ಮೂರನೇ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಮೇಲೆ ಐಟಿ ಕಂಪನಿಯ ಉದ್ಯೋಗಿಯೋರ್ವ ಆಪರೇಷನ್​ಗೆ ಬಳಲಾಗುವ​ ಚಾಕುವಿನಿಂದ ದಾಳಿ ಮಾಡಿದ್ದಾನೆ. ಅಷ್ಟೇ ಅಲ್ಲ, ವಿದ್ಯಾರ್ಥಿನಿ ಕತ್ತು ಕೊಯ್ದು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಪೆದಕಕಣಿ ತಾಲೂಕಿನ ತಕ್ಕೆಲ್ಲಪಾಡು ಎಂಬಲ್ಲಿ ನಡೆದಿದೆ.

ಮೃತ ಕೊಲೆಯಾದ ವಿದ್ಯಾರ್ಥಿನಿಯನ್ನು ತಪಸ್ವಿ ಎಂದು ಗುರುತಿಸಲಾಗಿದ್ದು, ಆರೋಪಿ ಜ್ಞಾನೇಶ್ವರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾ ಜಿಲ್ಲೆಯ ಪಮಿಡಿಮುಕ್ಕಲ ತಾಲೂಕಿನ ಕೃಷ್ಣಾಪುರದವರಾದ ತಪಸ್ವಿ ವಿಜಯವಾಡದ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಓದುತ್ತಿದ್ದಾರೆ. ಆಕೆಯ ಪೋಷಕರು ಕೆಲಸದ ನಿಮಿತ್ತ ಮುಂಬೈನಲ್ಲಿ ಉಳಿದುಕೊಂಡರೆ, ತಪಸ್ವಿ ತಮ್ಮ ಚಿಕ್ಕಮ್ಮನೊಂದಿಗೆ ತಂಗಿದ್ದು, ಅಲ್ಲೇ ವ್ಯಾಸಂಗ ಮುಂದುವರಿಸಿದ್ದರು.

ಕೃಷ್ಣಾ ಜಿಲ್ಲೆಯ ಉಂಗುಟೂರು ತಾಲೂಕಿನ ಮಣಿಕೊಂಡದ ಸಾಫ್ಟ್‌ವೇರ್ ಉದ್ಯೋಗಿ ಜ್ಞಾನೇಶ್ವರ್​ ಮತ್ತು ತಪಸ್ವಿ ಪರಿಚಯ ಸಾಮಾಜಿಕ ಜಾಲತಾಣಗಳ ಮೂಲಕವಾಗಿದೆ. ಬಳಿಕ ಇವರ ಸ್ನೇಹ ಪ್ರೀತಿಗೆ ತಿರುಗಿದ್ದು, ಇಬ್ಬರೂ ಕೆಲಕಾಲ ಗನ್ನವರಂನಲ್ಲಿ ವಾಸವಿದ್ದರು. ಪ್ರೇಮ ವಿವಾದದ ಹಿನ್ನೆಲೆ ಜ್ಞಾನೇಶ್ವರ್ ವಿರುದ್ಧ ತಪಸ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಜ್ಞಾನೇಶ್ವರ್​ನಿಂದ ತಪಸ್ವಿ ಮತ್ತೆ ಸಮಸ್ಯೆ ಎದುರಿಸುತ್ತಿದ್ದರಂತೆ. ಈ ವಿಷಯವನ್ನು ತಕ್ಕೆಲ್ಪಾಡಿನಲ್ಲಿ ನೆಲೆಸಿರುವ ಸ್ನೇಹಿತೆಗೆ ತಿಳಿಸಿ ಬೇಸರ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ನೇಹಿತರು ಇಬ್ಬರ ಮಧ್ಯೆ ರಾಜಿ ಮಾಡಲು ಪ್ರಯತ್ನಿಸಿದರು. ಪ್ರೇಮ ಮುರಿದುಬಿದ್ದ ವಿಷಯಕ್ಕೆ ಬೇಸರಗೊಂಡಿದ್ದ ತಪಸ್ವಿ ಒಂದು ವಾರದಿಂದ ತನ್ನ ಸ್ನೇಹಿತೆಯ ಬಳಿಯೇ ತಂಗಿದ್ದರು. ಸೋಮವಾರ.. ಪ್ರೀತಿಯ ವಿಷಯದ ಬಗ್ಗೆ ಮಾತನಾಡಲು ಮೂವರು ಭೇಟಿಯಾಗಿದ್ದರು.

ಮೂವರು ಮಾತನಾಡಿಕೊಳ್ಳುತ್ತಿದ್ದಾಗ ಯುವಕ ಜ್ಞಾನೇಶ್ವರ್ ಯಾವಾಗ ಮದುವೆಯಾಗುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿ ತಪಸ್ವಿ ಮೇಲೆ ಸರ್ಜಿಕಲ್ ಬ್ಲೇಡ್​ನಿಂದ ಹಲ್ಲೆ ನಡೆಸಿದ್ದಾನೆ. ಗೆಳೆತಿ ಕಿರುಚುತ್ತಾ ಹೊರಗೆ ಹೋದಾಗ.. ತಪಸ್ವಿಯನ್ನು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಎಳೆದೊಯ್ದ ಜ್ಞಾನೇಶ್ವರ್ ಮನಬಂದಂತೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳೀಯರು ಬಾಗಿಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದ ತಪಸ್ವಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡ ಸಂತ್ರಸ್ತೆ ಗುಂಟೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ಪ್ರೇಮಿ ಮೇಲೆ ದಾಳಿ ಮಾಡಿದ ಯುವಕ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಆರೋಪಿಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಓದಿ:ಬೆಂಕಿ ಜೊತೆ ಸರಸ ಬೇಡ ಅಂದರೂ ಛಲ ಬಿಡದ ಗಟ್ಟಿಗಿತ್ತಿ; ದೇಶದ ಮೊದಲ ಮಹಿಳಾ ಫೈರ್​ ಫೈಟರ್​ ಈ ಹರ್ಷಿಣಿ

ABOUT THE AUTHOR

...view details