ನವದೆಹಲಿ :ಚೀನಾಗೆ ಭಾರತ ಇತ್ತೀಚೆಗಷ್ಟೇ ಸೆಮಿಕಂಡಕ್ಟರ್ ಚಿಪ್ ಮತ್ತು ಮೊಬೈಲ್ ಚಿಪ್ಗಳ ಖರೀದಿ ಮತ್ತು ರವಾನೆಗೆ ಬ್ರೇಕ್ ಹಾಕಿ ಶಾಕ್ ನೀಡಿತ್ತು. ಇದೀಗ ಚೀನಾ ಮೊಬೈಲ್ ಫೋನ್ಗಳ ತಯಾರಕರ ಜೊತೆ ವ್ಯವಹಾರ ನಡೆಸುವ ಸಂಸ್ಥೆಗಳ ಮೇಲೆ ತೆರಿಗೆ ವಂಚನೆ ಆರೋಪದಡಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಮತ್ತೊಮ್ಮೆ ಶಾಕ್ ನೀಡಿದೆ.
ಇದು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದಕ್ಷಿಣದ ರಾಜ್ಯಗಳ ಕೆಲವೆಡೆಗಳಲ್ಲಿ ಇರುವ ಚೀನಾದ ಜೊತೆ ಮೊಬೈಲ್ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.