ಕರ್ನಾಟಕ

karnataka

ತೆರಿಗೆ ವಂಚನೆ ಆರೋಪ: ಧರ್ಮ ಬೋಧಕ ಪಾಲ್ ದಿನಕರನ್​ಗೆ ಐಟಿ ಸಮನ್ಸ್

By

Published : Jan 23, 2021, 12:24 PM IST

ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ತಮಿಳುನಾಡಿನಾದ್ಯಂತ ಜೀಸಸ್ ಕಾಲ್ಸ್ ಸಂಸ್ಥೆಗೆ ಸಂಬಂಧಪಟ್ಟ 28 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ಸಂಬಂಧ ಧರ್ಮ ಬೋಧಕ ಪಾಲ್ ದಿನಕರನ್ ಅವರಿಗೆ ಐಟಿ ಇಲಾಖೆ ಸಮನ್ಸ್​ ನೀಡಿದೆ.

ಧರ್ಮ ಬೋಧಕ ಪಾಲ್ ದಿನಕರನ್​ಗೆ ಐಟಿ ಸಮನ್ಸ್
ಧರ್ಮ ಬೋಧಕ ಪಾಲ್ ದಿನಕರನ್​ಗೆ ಐಟಿ ಸಮನ್ಸ್

ಚೆನ್ನೈ (ತಮಿಳುನಾಡು): ಮುಂದಿನ ವಾರದೊಳಗೆ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಐಟಿ ಇಲಾಖೆ ಧರ್ಮ ಬೋಧಕ ಪಾಲ್ ದಿನಕರನ್​ಗೆ ಸಮನ್ಸ್​ ನೀಡಿದೆ.

ಮೂಲಗಳ ಪ್ರಕಾರ, ಐಟಿ ತಂಡವು ಕಾರುಣ್ಯ ವಿಶ್ವವಿದ್ಯಾಲಯದಿಂದ 5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ವಿದೇಶದಲ್ಲಿ ಹೂಡಿಕೆ ಮಾಡಿದ 120 ಕೋಟಿ ರೂ. ಬಹಿರಂಗಪಡಿಸದ ಆದಾಯವನ್ನು ಸಹ ಪತ್ತೆ ಮಾಡಿದೆ.

ಇದನ್ನೂ ಓದಿ:ತಮಿಳುನಾಡಿನಾದ್ಯಂತ 28 ಕಡೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ

ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ತಮಿಳುನಾಡಿನಾದ್ಯಂತ ಜೀಸಸ್ ಕಾಲ್ಸ್ ಸಂಸ್ಥೆಗೆ ಸಂಬಂಧಪಟ್ಟ 28 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ದಿವಂಗತ ಡಿಜಿಎಸ್​ ದಿನಕರನ್​​ ಈ 'ಜೀಸಸ್ ಕಾಲ್ಸ್' ಸಂಸ್ಥೆ ಸ್ಥಾಪಿಸಿದರು. ಪ್ರಸ್ತುತ ಅವರ ಪುತ್ರ ಪಾಲ್​ ದಿನಕರನ್ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದಿನಕರನ್​​ ಪ್ರಮುಖ ಧರ್ಮ ಪ್ರಚಾರಕರಾಗಿದ್ದಾರೆ.

ABOUT THE AUTHOR

...view details