ಕರ್ನಾಟಕ

karnataka

ETV Bharat / bharat

ನೊಕ್ಕು ಕೂಲಿಗೆ ಡಿಮಾಂಡ್ : ಇಸ್ರೋದ ಟ್ರಕ್​ಗೆ ಸಂಕಷ್ಟ - ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ

ನೊಕ್ಕು ಕೂಲಿ ಪದವನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಿದರೆ ಗಮನಿಸುವ ವೇತನ ಎಂಬ ಅರ್ಥ ಪಡೆಯುತ್ತದೆ. ಕಾರ್ಮಿಕ ಸಂಘಟನೆಗಳು ತಾವು ಟ್ರಕ್ ಅಥವಾ ಇತರ ಸರಕು ವಾಹನಗಳಿಂದ ಬರುವ ಸರಕುಗಳನ್ನು ಗಮನಿಸಿ, ಅವುಗಳ ಲೋಡಿಂಗ್ ಮತ್ತು ಅನ್​ಲೋಡಿಂಗ್ ಮೇಲೆ ಶುಲ್ಕ ವಿಧಿಸುತ್ತಾರೆ..

ISRO truck blocked demanding 'nokku-kooli'
ನೊಕ್ಕು ಕೂಲಿಗೆ ಡಿಮಾಂಡ್, ಇಸ್ರೋದ ಟ್ರಕ್ ತಡೆದ ಕಾರ್ಮಿಕರು.!

By

Published : Sep 5, 2021, 8:41 PM IST

ತಿರುವನಂತಪುರಂ(ಕೇರಳ) :ಕೆಲವು ದಿನಗಳ ಹಿಂದೆ ಕೇರಳದಲ್ಲಿ ಚಾಲ್ತಿಯಲ್ಲಿದ್ದ ಕಾನೂನುಬಾಹಿರ ಪದ್ಧತಿಯಾದ 'ನೊಕ್ಕು ಕೂಲಿ'ಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಕೇರಳ ಹೈಕೋರ್ಟ್​ ಅಲ್ಲಿನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ​ಆದರೆ, ಈಗ ಇಸ್ರೋದ ಟ್ರಕ್ 'ನೊಕ್ಕು ಕೂಲಿ' ಪದ್ಧತಿಗೆ ಸಿಕ್ಕು ಸಂಕಷ್ಟ ಅನುಭವಿಸಿದ ಘಟನೆ ನಡೆದಿದೆ.

ಕೇರಳದ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್​ಎಸ್​ಸಿ) ಇಸ್ರೋದಿಂದ ಕೆಲವು ಸಾಮಗ್ರಿಗಳನ್ನು ಹೊತ್ತ ಟ್ರಕ್ ಬಂದಿತ್ತು. ಈ ವೇಳೆ ಹಲವು ಕಾರ್ಮಿಕ ಸಂಘಟನೆಗಳ ಸದಸ್ಯರು ಅಲ್ಲಿಗೆ ಧಾವಿಸಿ, ನೊಕ್ಕು ಕೂಲಿಗೆ ಆಗ್ರಹಿಸಿದ್ದಾರೆ.

ಈ ವಿಷಯ ಗೊತ್ತಾದ ಇಸ್ರೋದ ಸಂಸ್ಥೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರು ಕಾರ್ಮಿಕ ಸಂಘಟನೆಗಳ ಸದಸ್ಯರನ್ನು ಮನವೊಲಿಸಿ, ವಾಪಸ್ ಕಳುಹಿಸಿ, ಸಮಸ್ಯೆ ಬಗೆಹರಿಸಿದ್ದಾರೆ.

ನೊಕ್ಕು ಕೂಲಿ ಬಗ್ಗೆ..

ನೊಕ್ಕು ಕೂಲಿ ಪದವನ್ನು ಕನ್ನಡಕ್ಕೆ ಯಥಾವತ್ತಾಗಿ ತರ್ಜುಮೆ ಮಾಡಿದರೆ ಗಮನಿಸುವ ವೇತನ ಎಂಬ ಅರ್ಥ ಪಡೆಯುತ್ತದೆ. ಕಾರ್ಮಿಕ ಸಂಘಟನೆಗಳು ತಾವು ಟ್ರಕ್ ಅಥವಾ ಇತರ ಸರಕು ವಾಹನಗಳಿಂದ ಬರುವ ಸರಕುಗಳನ್ನು ಗಮನಿಸಿ, ಅವುಗಳ ಲೋಡಿಂಗ್ ಮತ್ತು ಅನ್​ಲೋಡಿಂಗ್ ಮೇಲೆ ಶುಲ್ಕ ವಿಧಿಸುತ್ತಾರೆ.

ಕೆಲಸ ಮಾಡದಿದ್ದರೂ ಹಣ ವಸೂಲಿ ಮಾಡುವ ಇದು ಸುಲಿಗೆಯಾಗುತ್ತದೆ. ಇದನ್ನು ನಿರ್ಮೂಲನೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೊಲ್ಲಂ ಮೂಲದ ಉದ್ಯಮಿಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಸರ್ಕಾರ ಕಟ್ಟುನಿಟ್ಟಾಗಿ ನೊಕ್ಕು ಕೂಲಿಯನ್ನು ನಿಷೇಧ ಮಾಡಬೇಕೆಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಇದಕ್ಕೂ ಮೊದಲು 2018ರ ಮೇ 1ರಂದು ಕೇರಳ ರಾಜ್ಯ ಸರ್ಕಾರ ನೊಕ್ಕು ಕೂಲಿಯನ್ನು ನಿಷೇಧ ಮಾಡಿತ್ತು.

ಇದನ್ನೂ ಓದಿ:ವೆಲ್ಲೂರಿನಲ್ಲಿ ಕಳ್ಳತನ ತಡೆಗೆ Unique Idea.. ಗೂಗಲ್ ಡಾಕ್, ಕ್ಯೂಆರ್ ಕೋಡ್​ನಿಂದ ನಿಮ್ಮ ಮನೆ ಸೇಫ್​..

ABOUT THE AUTHOR

...view details