ಕರ್ನಾಟಕ

karnataka

ETV Bharat / bharat

ಹೊಸ ಪರೀಕ್ಷಾ ಕೇಂದ್ರದಲ್ಲಿ ಇಸ್ರೋದ ಸೆಮಿ-ಕ್ರಯೋಜೆನಿಕ್​ ಎಂಜಿನ್​ ಪರೀಕ್ಷೆ ಯಶಸ್ವಿ - ಈಟಿವಿ ಭಾರತ ಕನ್ನಡ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೊಸ ಪರೀಕ್ಷಾ ಕೇಂದ್ರದಲ್ಲಿ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ ಪರೀಕ್ಷೆ ನಡೆಸಿದೆ.

isro-tests-semi-cryogenic-engine-at-new-facility
ಹೊಸ ಪರೀಕ್ಷಾ ಕೇಂದ್ರದಲ್ಲಿ ಇಸ್ರೋದ ಸೆಮಿ-ಕ್ರಯೋಜೆನಿಕ್​ ಎಂಜಿನ್​ ಪರೀಕ್ಷೆ ಯಶಸ್ವಿ

By

Published : May 11, 2023, 11:53 PM IST

ಚೆನ್ನೈ (ತಮಿಳುನಾಡು): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ತನ್ನ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ ಮಧ್ಯಂತರ ರಚನೆಯ ಮೊದಲ ಸಂಯೋಜಿತ ಪರೀಕ್ಷೆಯನ್ನು ಹೊಸ ಪರೀಕ್ಷಾ ಕೇಂದ್ರದಲ್ಲಿ ನಡೆಸಿದೆ. ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ (ಐಪಿಆರ್​ಸಿ)ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪರೀಕ್ಷಾ ಕೇಂದ್ರದಲ್ಲಿ 2,000 ಕಿಲೋ ನ್ಯೂಟನ್ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮಧ್ಯಂತರ ಸಂರಚನೆಯನ್ನು ಪವರ್ ಹೆಡ್ ಟೆಸ್ಟ್ ಆರ್ಟಿಕಲ್ (ಪಿಹೆಚ್​ಟಿಎ)ನಂತೆ ರೂಪಿಸಲಾಗಿದ್ದು, ಈ ರಚನೆಯು ಥ್ರಸ್ಟ್ ಚೇಂಬರನ್ನು ಹೊರತುಪಡಿಸಿ ಎಲ್ಲಾ ಎಂಜಿನ್ ಸಿಸ್ಟಮ್​​ಗಳನ್ನು ಒಳಗೊಂಡಿದೆ ಎಂದು ಇಸ್ರೋ ಹೇಳಿದೆ. ಪ್ರಥಮ ಪರೀಕ್ಷಾ ಸರಣಿಯಲ್ಲಿ ಕಡಿಮೆ ಒತ್ತಡ ಮತ್ತು ಅಧಿಕ ಒತ್ತಡದ ಟರ್ಬೊಪಂಪ್‌ಗಳು, ಗ್ಯಾಸ್ ಜನರೇಟರ್ ಮತ್ತು ನಿಯಂತ್ರಣ ಘಟಕಗಳನ್ನು ಒಳಗೊಂಡಂತೆ ಪ್ರೊಪೆಲ್ಲಂಟ್ ಫೀಡ್ ಸಿಸ್ಟಮ್‌ನ ವಿನ್ಯಾಸವನ್ನು ಮೌಲ್ಯೀಕರಿಸಲು ಪರೀಕ್ಷೆಯನ್ನು ನಡೆಸಲಾಗಿದೆ ಎಂದು ತಿಳಿಸಿದೆ.

ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್​ (ಎಲ್​​ಪಿಎಸ್​ಸಿ) ಭಾರತೀಯ ಉದ್ಯಮವು ಸೇರಿಕೊಂಡು 2000 ಕೆಎನ್​​ ಥ್ರಸ್ಟ್‌ನೊಂದಿಗೆ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ ಅಭಿವೃದ್ಧಿ ಮತ್ತು ವಿನ್ಯಾಸ ಮಾಡಿದೆ. ಭವಿಷ್ಯದ ವಾಹನಗಳ ಉಡಾವಣಾ ಹಂತಗಳಿಗೆ ಇದು ಶಕ್ತಿ ನೀಡುತ್ತದೆ. ಇವುಗಳು ಲಿಕ್ವಿಡ್ ಆಕ್ಸಿಜನ್ (ಎಲ್​ಓಎಕ್ಸ್​​) ಮತ್ತು ಕೆರೋಸಿನ್​ ಪ್ರೊಪೆಲ್ಲಂಟ್ ಸಂಯೋಜನೆ ಮೇಲೆ ಕೆಲಸ ಮಾಡುತ್ತದೆ.

ಮೇ 10ರಂದು ಇಸ್ರೋ ಸೆಮಿ- ಕ್ರಯೋಜನಿಕ್​​ ಇಂಜಿನ್​​ನ ಪರೀಕ್ಷೆ ನಡೆಸಿದ್ದು, ಸಂಪೂರ್ಣವಾಗಿ ಇಂಜಿನನ್ನು ​​ಸಂಯೋಜಿಸಿರುವುದು ಒಂದು ಪ್ರಮುಖ ಮೈಲಿಗಲ್ಲು ಎಂದು ಇಸ್ರೋ ಅಭಿಪ್ರಾಯ ಪಟ್ಟಿದೆ. ಈ ಪರೀಕ್ಷೆಯು ಸುಮಾರು 15 ಗಂಟೆಗಳ ಕಾಲ ನಡೆದಿದೆ. ಈ ಮೂಲಕ ಇಂಜಿನ್​ನ ಕಾರ್ಯಾಚರಣೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಪೂರೈಸಲಾಗಿದೆ. ಇಂಜಿನ್​ ಪೂರಕ ಪರೀಕ್ಷೆಯು ಮುಂದಿನ ವಿವಿಧ ಕಾರ್ಯಾಚರಣೆಗಳಿಗೆ ಸಹಕಾರಿಯಾಗಲಿದೆ ಎಂದು ಇಸ್ರೋ ಹೇಳಿದೆ.

ಮಹೇಂದ್ರಗಿರಿಯ ಐಪಿಆರ್​ಸಿಯಲ್ಲಿನ ಹೊಸ ಪರೀಕ್ಷಾ ಕೇಂದ್ರವು 2,600 ಕೆಎನ್​ ಥ್ರಸ್ಟ್‌ವರೆಗಿನ ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಸಂಪೂರ್ಣ ಸಂಯೋಜಿತ ಸೆಮಿ ಕ್ರಯೋಜೆನಿಕ್ ಎಂಜಿನ್​ನ ಪರೀಕ್ಷೆಗೆ ಮತ್ತು ವಿವಿಧ ಹಂತಗಳ ಪರೀಕ್ಷೆಗೂ ಇದು ಸಹಕಾರಿಯಾಗಿದೆ. ಈ ಪರೀಕ್ಷೆಯು ಪರೀಕ್ಷಾ ಕೇಂದ್ರದ ಸಾಮರ್ಥ್ಯ ಮತ್ತು ಪವರ್ ಹೆಡ್ ಟೆಸ್ಟ್ ನ ಕಾರ್ಯಕ್ಷಮತೆಯನ್ನು ಮೊದಲ ಪ್ರಯತ್ನದಲ್ಲಿಯೇ ಪ್ರದರ್ಶಿಸಿದೆ.

ಇದನ್ನೂ ಓದಿ :ಭಾರತದ ಟ್ಯಾಬ್ಲೆಟ್ ಮಾರುಕಟ್ಟೆ ಶೇ 30ರಷ್ಟು ಕುಸಿತ: 5ಜಿ ಟ್ಯಾಬ್ಲೆಟ್ ಮಾರಾಟ ಏರಿಕೆ

ABOUT THE AUTHOR

...view details