ಕರ್ನಾಟಕ

karnataka

ETV Bharat / bharat

ಇಸ್ರೊ ಬೇಹುಗಾರಿಕೆ ಕೇಸ್: ಕೇರಳ ಹೈಕೋರ್ಟ್ ಜಾಮೀನು ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್

ಈ ಪ್ರಕರಣ ಆರೋಪಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದ್ದ ಸಿಬಿಐ, ನಿರೀಕ್ಷಣಾ ಜಾಮೀನು ನೀಡುವುದರಿಂದ ಪ್ರಕರಣದ ತನಿಖೆ ಹಳಿತಪ್ಪಬಹುದು ಎಂದು ಹೇಳಿತ್ತು.

ಇಸ್ರೊ ಬೇಹುಗಾರಿಕೆ ಪ್ರಕರಣ: ಜಾಮೀನು ನೀಡಿದ್ದ ಕೇರಳ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್
ISRO spying case: Kerala High Court cancels bail order

By

Published : Dec 2, 2022, 1:39 PM IST

ನವ ದೆಹಲಿ: ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ 1994 ರ ಇಸ್ರೋ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಗುಜರಾತ್ ಮಾಜಿ ಡಿಜಿಪಿ ಆರ್ ಬಿ ಶ್ರೀಕುಮಾರ್, ಕೇರಳದ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳಾದ ಎಸ್ ವಿಜಯನ್ ಮತ್ತು ತಂಪಿ ಎಸ್ ದುರ್ಗಾ ದತ್ ಮತ್ತು ನಿವೃತ್ತ ಗುಪ್ತಚರ ಅಧಿಕಾರಿ ಪಿ ಎಸ್ ಜಯಪ್ರಕಾಶ್ ಅವರಿಗೆ ಜಾಮೀನು ನೀಡಿರುವ ಕೇರಳ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ.

ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಮತ್ತೆ ಹೈಕೋರ್ಟ್‌ಗೆ ಹಿಂತಿರುಗಿಸಿದ್ದು, ನಾಲ್ಕು ವಾರಗಳಲ್ಲಿ ವಿಷಯವನ್ನು ಬಗೆಹರಿಸುವಂತೆ ನಿರ್ಧರಿಸುವಂತೆ ಸೂಚಿಸಿದೆ.

ಎಲ್ಲ ಮೇಲ್ಮನವಿಗಳನ್ನು ಅಂಗೀಕರಿಸಲಾಗಿದೆ. ಹೈಕೋರ್ಟ್ ಜಾರಿಗೊಳಿಸಿದ ನಿರೀಕ್ಷಣಾ ಜಾಮೀನು ಆದೇಶಗಳನ್ನು ರದ್ದುಗೊಳಿಸಲಾಗಿದೆ. ಎಲ್ಲಾ ವಿಷಯಗಳನ್ನು ಅದರ ಮಹತ್ವಕ್ಕೆ ತಕ್ಕಂತೆ ಹೊಸದಾಗಿ ನಿರ್ಧರಿಸಲು ಹೈಕೋರ್ಟ್​ಗೆ ಹಿಂತಿರುಗಿಸಲಾಗುತ್ತಿದೆ. ಈ ನ್ಯಾಯಾಲಯವು ಎರಡೂ ಪಕ್ಷಗಳ ಮೆರಿಟ್​ ಬಗ್ಗೆ ಏನನ್ನೂ ನಿರ್ಧರಿಸಿಲ್ಲ ಎಂದು ಪೀಠ ಹೇಳಿದೆ.

ಅಂತಿಮವಾಗಿ ಹೈಕೋರ್ಟ್ ಆದೇಶಗಳನ್ನು ನೀಡಲಿದೆ. ಈ ಆದೇಶದ ದಿನಾಂಕದಿಂದ ನಾಲ್ಕು ವಾರಗಳೊಳಗೆ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಶೀಘ್ರವಾಗಿ ನಿರ್ಧರಿಸುವಂತೆ ನಾವು ಹೈಕೋರ್ಟ್‌ಗೆ ವಿನಂತಿಸುತ್ತೇವೆ ಎಂದು ಪೀಠ ಹೇಳಿತು. ಇಂದಿನಿಂದ ಒಂದು ವಾರದೊಳಗೆ ಸಂಬಂಧಪಟ್ಟ ಪೀಠದ ಮುಂದೆ ಜಾಮೀನು ಅರ್ಜಿಗಳನ್ನು ಇರಿಸುವಂತೆ ಉಚ್ಚ ನ್ಯಾಯಾಲಯವು ಹೈಕೋರ್ಟ್‌ನ ರಜಿಸ್ಟ್ರಾರ್​ಗೆ ಸೂಚಿಸಿದೆ.

ಅಲ್ಲಿಯವರೆಗೆ ಮಧ್ಯಂತರ ವ್ಯವಸ್ಥೆಯ ಮೂಲಕ ಮತ್ತು ಹಕ್ಕುಗಳಿಗೆ ಯಾವುದೇ ಧಕ್ಕೆಯಾಗದಂತೆ, ಐದು ವಾರಗಳ ಅವಧಿಗೆ ಮತ್ತು ಜಾಮೀನು ಅರ್ಜಿಗಳನ್ನು ಅಂತಿಮವಾಗಿ ಹೈಕೋರ್ಟ್ ನಿರ್ಧರಿಸುವವರೆಗೆ, ಪ್ರತಿವಾದಿಗಳು ತನಿಖೆಗೆ ಸಹಕರಿಸಿದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆರೋಪಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿದ್ದ ಸಿಬಿಐ, ನಿರೀಕ್ಷಣಾ ಜಾಮೀನು ನೀಡುವುದರಿಂದ ಪ್ರಕರಣದ ತನಿಖೆ ಹಳಿತಪ್ಪಬಹುದು ಎಂದು ಹೇಳಿತ್ತು. ಕೆಲ ವಿಜ್ಞಾನಿಗಳಿಗೆ ಚಿತ್ರಹಿಂಸೆ ನೀಡಲಾಗಿತ್ತು ಮತ್ತು ಇದರಿಂದ ಕ್ರಯೋಜೆನಿಕ್ ಎಂಜಿನ್ ಅಭಿವೃದ್ಧಿಯ ಕಾರ್ಯಕ್ಕೆ ಬಹುತೇಕ ಎರಡು ದಶಕಗಳಷ್ಟು ಹಿನ್ನಡೆಯಾಗಿತ್ತು ಎಂದು ಸಿಬಿಐ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು.

ಇದನ್ನೂ ಓದಿ: ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್‌ ಯಶಸ್ವಿ ಉಡಾವಣೆ..

ABOUT THE AUTHOR

...view details