ಕರ್ನಾಟಕ

karnataka

ETV Bharat / bharat

'ಭಾರತೀಯ ಬಾಹ್ಯಾಕಾಶ ನಿಲ್ದಾಣ'ದತ್ತ ಇಸ್ರೋ ದಾಪುಗಾಲು, ಆಗಸಕ್ಕೆ ಫ್ಯುಯಲ್​ ಸೆಲ್​

ISRO: ಹೊಸ ವರ್ಷದ ಮೊದಲ ದಿನವೇ ಇಸ್ರೋದ ಎಕ್ಸ್ ಪೋಸ್ಯಾಟ್ ಉಡಾವಣೆ ಯಶಸ್ವಿಯಾಗಿದೆ. ಇದರ ಭಾಗವಾಗಿ ಇಸ್ರೋ ಫ್ಯುಯಲ್​ ಸೆಲ್‌ವೊಂದನ್ನು ಆಗಸಕ್ಕೆ ಕಳುಹಿಸಿದೆ. ಆಗಸದಲ್ಲಿ ನಿರ್ಮಾಣವಾಗಲಿರುವ ಭಾರತದ ಭವಿಷ್ಯದ ಬಾಹ್ಯಾಕಾಶ ನಿಲ್ದಾಣಕ್ಕೆ ಇದು ನಿರ್ಣಾಯಕವಾಗಲಿದೆ.

isro launches fuel cell  bharat space station  ಫ್ಯುಯಲ್​ ಸೆಲ್​ ಭಾರತೀಯ ಬಾಹ್ಯಾಕಾಶ ನಿಲ್ದಾಣ
'ಭಾರತೀಯ ಬಾಹ್ಯಾಕಾಶ ನಿಲ್ದಾಣ'ಕ್ಕೆ ಹೆಜ್ಜೆ ಹಾಕಿದ ಇಸ್ರೋ, ಆಗಸಕ್ಕೆ ಫ್ಯುಯಲ್​ ಸೆಲ್​

By ETV Bharat Karnataka Team

Published : Jan 1, 2024, 1:45 PM IST

ಶ್ರೀಹರಿಕೋಟ(ಆಂಧ್ರಪ್ರದೇಶ):ಭವಿಷ್ಯದಲ್ಲಿ ಭಾರತವು ಭೂಮಿಯ ಕಕ್ಷೆಯಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ಈ ಕ್ರಮದಲ್ಲಿ, ಇಸ್ರೋ ಇತ್ತೀಚೆಗೆ ಬಾಹ್ಯಾಕಾಶದಲ್ಲಿ ಪ್ರಮುಖ ಶಕ್ತಿ ಸಂಪನ್ಮೂಲಗಳ ಬಳಕೆಯನ್ನು ಪ್ರಯೋಗಿಸಿದೆ. ಹೊಚ್ಚ ಹೊಸ ಇಂಧನ ಕೋಶವನ್ನು ಸೋಮವಾರ ಕಡಿಮೆ ಭೂ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋ ಈ ಹೊಸ ವರ್ಷವನ್ನು PSLV-C58 ಯಶಸ್ವಿ ಉಡಾವಣೆಯೊಂದಿಗೆ ತನ್ನ ಕಾರ್ಯವನ್ನು ಪ್ರಾರಂಭಿಸಿತು. X-ray Polarimeter ಉಪಗ್ರಹವನ್ನು (XPoSat) ಇಂದು ಈ ವಾಹಕದೊಂದಿಗೆ ಉಡಾವಣೆ ಮಾಡಲಾಯಿತು. ಅದೇ ವಾಹಕವು ಅಂತಿಮ ಹಂತದಲ್ಲಿ ಇನ್ನೂ ಹತ್ತು ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಸಾಗಿಸಿತು ಮತ್ತು ಅವುಗಳನ್ನು ಸ್ಥಿರ ಕಕ್ಷೆಗೆ ಸೇರಿಸಿತು. ಇವುಗಳಲ್ಲಿ ಒಂದು ಇಂಧನ ಕೋಶ ಪವರ್ ಸಿಸ್ಟಮ್ (FCPS). ಇದನ್ನು ಪಿಎಸ್‌ಎಲ್‌ವಿ ಆರ್ಬಿಟಲ್ ಎಕ್ಸ್‌ಪರಿಮೆಂಟಲ್ ಮಾಡ್ಯೂಲ್‌ನ (ಪಿಒಇಎಂ) ಭಾಗವಾಗಿ ಆಗಸಕ್ಕೆ ಕಳುಹಿಸಲಾಗಿದೆ.

ಈ ಇಂಧನ ಕೋಶ ತಂತ್ರಜ್ಞಾನವನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಸಮರ್ಥ ಮತ್ತು ಸಮರ್ಥನೀಯ ಶಕ್ತಿಯ ಮೂಲವನ್ನು ಭಾರತಕ್ಕೆ ಒದಗಿಸಲು ಇದು ಉಪಯುಕ್ತವಾಗಿದೆ ಎಂದು ಇಸ್ರೋ ಬಹಿರಂಗಪಡಿಸಿದೆ. ಈ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ಕ್ರಿಯೆಯ ಮೂಲಕ ರಾಸಾಯನಿಕ ಶಕ್ತಿಯನ್ನು ನೇರವಾಗಿ ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದು ದೀರ್ಘಕಾಲದವರೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆಂಟ್ ಪೂರೈಸುತ್ತದೆ. ಉಡಾವಣೆಯು ಭಾರತದ ಭವಿಷ್ಯದ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಮುಖ ಹೆಜ್ಜೆಯಾಗಿದೆ.

ಆಗಸದಲ್ಲಿ ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಕೇಂದ್ರವು ಈಗಾಗಲೇ ಪ್ರಯತ್ನಗಳನ್ನು ಪ್ರಾರಂಭಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರೂ ಈ ಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ಈ ಬಾಹ್ಯಾಕಾಶ ನಿಲ್ದಾಣ ಲಭ್ಯವಾಗುವಂತೆ ಮಾಡುವ ಗುರಿಯನ್ನು ವಿಜ್ಞಾನಿಗಳಿಗೆ ಸೂಚಿಸಿದ್ದರು.

ಇದು ಆರಂಭವಷ್ಟೇ: ಇಂದಿನ ಉಡಾವಣೆಯಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಮಾತನಾಡಿ, PSLV ಉಡಾವಣೆಯ ಯಶಸ್ಸಿನೊಂದಿಗೆ ನಾವು ಈ ಹೊಸ ವರ್ಷವನ್ನು ಪ್ರಾರಂಭಿಸಿದ್ದೇವೆ. ಈ ವಾಹಕದಿಂದ ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಆರಂಭವಷ್ಟೇ. ಈ ವರ್ಷ ಇನ್ನಷ್ಟು ಪ್ರಮುಖ ಪ್ರಯೋಗಗಳಿವೆ. ಈ 2024.. ಮಿಷನ್ ಗಗನಯಾನ ವರ್ಷವಾಗಲಿದೆ ಎಂದು ಸೋಮನಾಥ್ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆದ ಇಸ್ರೋ: 'ಎಕ್ಸ್‌ಪೋಸ್ಯಾಟ್‌' ಉಡ್ಡಯನ ಯಶಸ್ವಿ

ABOUT THE AUTHOR

...view details