ಕರ್ನಾಟಕ

karnataka

ETV Bharat / bharat

ಅಸ್ಟ್ರೋಸ್ಯಾಟ್​ ಡೇಟಾದ ಕುರಿತ ವೈಜ್ಞಾನಿಕ ಸಂಶೋಧನೆಗೆ ಇಸ್ರೋ ಆಹ್ವಾನ - ಅಸ್ಟ್ರೋಸ್ಯಾಟ್​ನ ಆರ್ಕೈವಲ್ ಡೇಟಾ

ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಪ್ರಸ್ತಾವನೆಗಳನ್ನು ಸಲ್ಲಿಸಬಹುದು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಲಾಗಿದೆ..

ISRO invites scientific research proposals on AstroSat data
ಅಸ್ಟ್ರೋಸ್ಯಾಟ್​ ಡೇಟಾದ ಕುರಿತ ವೈಜ್ಞಾನಿಕ ಸಂಶೋಧನೆಗೆ ಇಸ್ರೋ ಆಹ್ವಾನ

By

Published : Apr 20, 2021, 7:26 PM IST

ಚೆನ್ನೈ :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ರಾಷ್ಟ್ರದ ಖಗೋಳ ವಿಜ್ಞಾನಿಗಳಿಗೆ ಬಂಪರ್​ ಅವಕಾಶವೊಂದನ್ನು ನೀಡುತ್ತಿದ್ದಾರೆ. ಖಗೋಳ ವಿಜ್ಞಾನಕ್ಕೆ ಮೀಸಲಾಗಿರುವ ಭಾರತದ ಮೊದಲ ಉಪಗ್ರಹ ಅಸ್ಟ್ರೋಸ್ಯಾಟ್ ಆರ್ಕೈವಲ್ ಡೇಟಾವನ್ನು ಬಳಸುವುದು ಮತ್ತು ವೈಜ್ಞಾನಿಕ ಸಂಶೋಧನೆಗೆ ಪ್ರಸ್ತಾವನೆಗಳನ್ನು ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ.

ಅಸ್ಟ್ರೋಸ್ಯಾಟ್​ ಸೆಪ್ಟೆಂಬರ್ 28, 2015ರಂದು ಉಡಾವಣೆಯಾದ ಖಗೋಳವಿಜ್ಞಾನಕ್ಕೆ ಮೀಸಲಾಗಿರುವ ಭಾರತದ ಮೊದಲ ಉಪಗ್ರಹವಾಗಿದೆ. ಇದು ಬಹು-ತರಂಗಾಂತರ ಉಪಗ್ರಹವಾಗಿದೆ. ಎಕ್ಸ್-ರೇ ಅಂತಹ ಬಹು ತರಂಗಾಂತರದಲ್ಲಿರುವ ವಸ್ತುಗಳನ್ನು ಪತ್ತೆ ಹಚ್ಚುತ್ತದೆ.

ಐದು ವೈಜ್ಞಾನಿಕ ಪೇಲೋಡ್‌ಗಳನ್ನು ಅಸ್ಟ್ರೋಸ್ಯಾಟ್‌ನಲ್ಲಿ ಉಡಾವಣೆ ಮಾಡಲಾಗಿದೆ. ಉಡಾವಣೆಯಾದ ಆರು ತಿಂಗಳ ನಂತರ ಬಹು ತರಂಗಾಂತರ ಅವಲೋಕನಗಳನ್ನು ಇದು ಪ್ರಾರಂಭಿಸಿತು ಮತ್ತು ಅಲ್ಟ್ರಾವೈಲೆಟ್​ನಿಂದ ಹೈ ಎನರ್ಜಿ ಎಕ್ಸ್‌ರೇಗಳಿಗೆ ವಿಶ್ವ ದರ್ಜೆಯ ಡೇಟಾವನ್ನು ಒದಗಿಸುತ್ತದೆ. ಅಸ್ಟ್ರೋಸ್ಯಾಟ್ ಡೇಟಾವನ್ನು ಸೆಪ್ಟೆಂಬರ್ 26, 2018ರಂದು ಸಾರ್ವಜನಿಕರಿಗೆ ತೆರೆಯಲಾಯಿತು.

ಎಲ್ಲಾ ಪೇಲೋಡ್‌ಗಳ ಡೇಟಾ, ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಯುವಿಐಟಿ), ಸಾಫ್ಟ್ ಎಕ್ಸ್‌ರೇ ಟೆಲಿಸ್ಕೋಪ್ (ಎಸ್‌ಎಕ್ಸ್‌ಟಿ), ದೊಡ್ಡ ಪ್ರದೇಶ ಎಕ್ಸ್‌ರೇ ಪ್ರಮಾಣಾನುಗುಣ ಕೌಂಟರ್ (ಎಲ್‌ಎಕ್ಸ್‌ಪಿಸಿ), ಕ್ಯಾಡ್ಮಿಯಮ್ ಜಿಂಕ್​ ಟೆಲ್ಲುರೈಡ್ (ಸಿಜೆಡ್​ಟಿ) ಮತ್ತು ಸ್ಕ್ಯಾನಿಂಗ್ ಸ್ಕೈ ಮಾನಿಟರ್ (ಎಸ್‌ಎಸ್‌ಎಂ) ಪ್ರಪಂಚದಾದ್ಯಂತ ಇರುವ ಇದರ ಬಳಕೆದಾರರು.

ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ, ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಪ್ರಸ್ತಾವನೆಗಳನ್ನು ಸಲ್ಲಿಸಬಹುದು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details