ಕೊಚ್ಚಿ (ಕೇರಳ) : ದೇಶದ ಪ್ರತಿಷ್ಟಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರತಿದಿನ 100 ಕ್ಕೂ ಹೆಚ್ಚು ಸೈಬರ್ ದಾಳಿಗಳನ್ನು ಎದುರಿಸುತ್ತಿದೆ. ಅಲ್ಟ್ರಾ- ಆಧುನಿಕ ಸಾಫ್ಟ್‌ವೇರ್ ಮತ್ತು ಚಿಪ್ ಬಳಸುವ ರಾಕೆಟ್ ತಂತ್ರಜ್ಞಾನದಲ್ಲಿ ಸೈಬರ್ ದಾಳಿಯ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ, ಇಂತಹ ದಾಳಿಗಳನ್ನು ಎದುರಿಸಲು ನಮ್ಮ ಸಂಸ್ಥೆಯು ದೃಢವಾದ ಸೈಬರ್ ಸೆಕ್ಯುರಿಟಿ ನೆಟ್‌ವರ್ಕ್ ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಶನಿವಾರ ನಡೆದ ಎರಡು ದಿನಗಳ ಅಂತರರಾಷ್ಟ್ರೀಯ ಸೈಬರ್ ಸಮ್ಮೇಳನದ 16 ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವೂ ಕೂಡ ಅಪ್‌ಡೇಟ್ ಆಗಬೇಕು. ಸಾಫ್ಟ್‌ವೇರ್ ಹೊರತುಪಡಿಸಿ ರಾಕೆಟ್‌ನೊಳಗಿನ ಹಾರ್ಡ್‌ವೇರ್ ಚಿಪ್‌ಗಳ ಸುರಕ್ಷತೆಯ ಬಗ್ಗೆಯೂ ಸಂಸ್ಥೆ ಗಮನಹರಿಸಲಾಗುತ್ತಿದೆ. ಇದಕ್ಕಾಗಿ ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ" ಎಂದರು.
"ಈ ಹಿಂದೆ ನಾವು ಉಪಗ್ರಹವನ್ನು ಮೇಲ್ವಿಚಾರಣೆ ಮಾಡಲು ಸಾಫ್ಟ್‌ವೇರ್ ಸಿದ್ಧಪಡಿಸುತ್ತಿದ್ದೆವು. ಈಗ ಅದೇ ಕೆಲಸವನ್ನು ಅನೇಕ ಉಪಗ್ರಹಗಳಿಗೆ ಮಾಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾಗುತ್ತಿದೆ, ನಾವು ಅದಕ್ಕೆ ತಕ್ಕಂತೆ ನವೀಕರಿಸಬೇಕಾಗುತ್ತದೆ. ಸಾಮಾನ್ಯ ಜನರ ದೈನಂದಿನ ದಿನಚರಿಗೆ ಸಹಾಯ ಮಾಡುವ ಅನೇಕ ಉಪಗ್ರಹಗಳಿವೆ. ಇವೆಲ್ಲವನ್ನು ವಿವಿಧ ರೀತಿಯ ಸಾಫ್ಟ್‌ವೇರ್‌ಗಳು ನಿಯಂತ್ರಿಸುತ್ತವೆ. ಇದನ್ನೆಲ್ಲಾ ರಕ್ಷಿಸಲು ಸೈಬರ್ ಭದ್ರತೆ ಬಹಳ ಮುಖ್ಯ" ಎಂದು ತಿಳಿಸಿದರು.
ಇದನ್ನೂ ಓದಿ :ವಿಜ್ಞಾನ - ನಂಬಿಕೆ ಎರಡೂ ವಿಭಿನ್ನ ವಿಷಯಗಳು ; ಇಸ್ರೊ ಅಧ್ಯಕ್ಷ ಸೋಮನಾಥ್
"ಸುಧಾರಿತ ತಂತ್ರಜ್ಞಾನವು ನಮಗೆ ವರದಾನ ಮತ್ತು ಬೆದರಿಕೆಯಾಗಿದೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಸೈಬರ್ ಅಪರಾಧದ ಸವಾಲುಗಳನ್ನು ಎದುರಿಸಬಹುದು. ಇದಕ್ಕಾಗಿ ಉತ್ತಮ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ" ಎಂದು ಅವರು ಹೇಳಿದರು.