ಕರ್ನಾಟಕ

karnataka

ETV Bharat / bharat

ಇಸ್ರೋ ಬೇಹುಗಾರಿಕೆ ಪ್ರಕರಣ: 18 ಅಧಿಕಾರಿಗಳೇ ಇಲ್ಲಿ ಆರೋಪಿಗಳು!

ಗೂಢಚರ್ಯೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಆರೋಪಿಯನ್ನಾಗಿ ಮಾಡಿ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಕೇರಳ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ಪ್ರಕರಣದ ಆರೋಪಿಗಳೆಂದು ಪರಿಗಣಿಸಲಾಗಿದೆ.

ISRO espionage case
ಇಸ್ರೋ ಬೇಹುಗಾರಿಕೆ ಪ್ರಕರಣ

By

Published : Jun 24, 2021, 4:06 PM IST

Updated : Jun 24, 2021, 4:19 PM IST

ತಿರುವನಂತಪುರಂ(ಕೇರಳ):ಇಸ್ರೋ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್, ಐಬಿ ಆರ್​.ಬಿ. ಶ್ರೀಕುಮಾರ್ ಮತ್ತು ಎಸ್​ಪಿ ಕೆ.ಕೆ. ಜೋಶುವಾ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 18 ಜನರನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ.

ಗೂಢಚರ್ಯೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಆರೋಪಿಯನ್ನಾಗಿ ಮಾಡಿ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಕೇರಳ ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳನ್ನು ಪ್ರಕರಣದ ಆರೋಪಿಗಳೆಂದು ಪರಿಗಣಿಸಲಾಗಿದೆ.

ಎಸ್ ವಿಜಯನ್, ಪ್ರಕರಣದ ಸಮಯದಲ್ಲಿ ಪೆಟ್ಟಾ ಸಿಐ ಆಗಿದ್ದರಿಂದ ಅವರನ್ನು ಮೊದಲ ಆರೋಪಿಯನ್ನಾಗಿ (ಎ1) ಮಾಡಲಾಗಿದೆ. ಆಗಿನ ಪೆಟ್ಟಾ ಎಸ್‌ಐ ಥಾಂಪಿ ಎಸ್ ದುರ್ಗಾಥತ್ 2ನೇ ಆರೋಪಿ. ತಿರುವನಂತಪುರಂ ನಗರದ ಮಾಜಿ ಪೊಲೀಸ್ ಆಯುಕ್ತ ಬಿ.ಆರ್. ರಾಜೀವನ್ ಮೂರನೇ ಆರೋಪಿ. ಮಾಜಿ ಡಿಐಜಿ ಸಿಬಿ ಮ್ಯಾಥ್ಯೂಸ್ ನಾಲ್ಕನೇ ಆರೋಪಿ ಮತ್ತು ಡಿವೈಎಸ್ಪಿ ಕೆ ಕೆ ಜೋಶುವಾ ಅವರನ್ನು ಐದನೇ ಆರೋಪಿಯನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ:ರೇಖಾ ಕದಿರೇಶ್ ಹತ್ಯೆ: ಇದು ಪಕ್ಕಾ ಪ್ಲಾನ್​​ ಮರ್ಡರ್​​ ಎನ್ನುತ್ತಿವೆ ಪೊಲೀಸ್​ ಮೂಲಗಳು..!

ನಂಬಿ ನಾರಾಯಣನ್ ಅವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಗೂಢಚರ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ನಕಲಿ ದಾಖಲೆಗಳನ್ನು ಹೊಂದಿದ್ದರು ಎಂದು ಸಿಬಿಐ ಹೇಳಿದೆ.

Last Updated : Jun 24, 2021, 4:19 PM IST

ABOUT THE AUTHOR

...view details