ಬೆಂಗಳೂರು:ಇಸ್ರೋ ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಪ್ರತಿಯೊಬ್ಬ ದೇಶವಾಸಿಗಳ ಎದೆಯು ಹೆಮ್ಮೆಯಿಂದ ಉಬ್ಬಿತ್ತು. ಚಂದ್ರಯಾನ 3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿಯಾಗಿ ಪಾದ ಸ್ಪರ್ಶ ಮಾಡಿತು. ಮತ್ತು ಅಂದಿನಿಂದ ಅನೇಕ ಸಂಶೋದನೆಗಳನ್ನು ಮುಂದುವರೆಸಿದೆ. ಆದರೆ ಈಗ ಚಂದ್ರಯಾನ-3 ರ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್‌ನ 14 ದಿನಗಳ ಕೆಲಸದ ಅವಧಿ ಕೊನೆಗೊಳ್ಳಲಿದೆ. ಅಂದರೆ ಈಗ ನಮಗೆ ಸಮಯ ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ.
ಚಂದ್ರಯಾನ-3 ತನ್ನ ಕೊನೆಯ 6 ದಿನಗಳಲ್ಲಿ ಅನೇಕ ಅದ್ಭುತಗಳನ್ನು ಮಾಡಬಹುದಾಗಿದ್ದು, ಅದು ಜಗತ್ತಿಗೆ ಉಪಯುಕ್ತವಾಗಿದೆ. ಸದ್ಯ ಇಸ್ರೋ ಟ್ವೀಟ್ ಪ್ರಕಾರ ಚಂದ್ರನಲ್ಲಿ ಸಲ್ಫರ್ ಇರುವುದರ ಬಗ್ಗೆ ಖಚಿತವಾಗಿ ದೃಢಪಡಿಸಿದೆ.
ಇಸ್ರೋ ಜುಲೈ 14 ರಂದು ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಿತು. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ಸೃಷ್ಟಿಸಿತ್ತು. ಚಂದ್ರನ ಈ ಭಾಗವನ್ನು ತಲುಪಿದ ವಿಶ್ವದ ಮೊದಲ ದೇಶ ಭಾರತ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಜೀವನವು ಕೇವಲ 14 ದಿನಗಳು, ಇದು ಚಂದ್ರನ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಚಂದ್ರನ ಮೇಲೆ ಸೂರ್ಯ ಬೆಳಕು ನಿಂತಾಕ್ಷಣ ಎರಡೂ ಕೆಲಸ ನಿಲ್ಲಿಸುತ್ತವೆ. ಅಂದರೆ ವಿಕ್ರಮ್-ಪ್ರಗ್ಯಾನ್ ಗೆ ಸುಮಾರು 150 ಗಂಟೆಗಳು ಬಾಕಿ ಇದೆ.
ಈಗ ಇಸ್ರೋ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸ್ಥಳದಲ್ಲೇ ವೈಜ್ಞಾನಿಕ ಪ್ರಯೋಗಗಳು ನಡೆದಿದೆ. ರೋವರ್‌ನಲ್ಲಿರುವ ಮತ್ತೊಂದು ಉಪಕರಣವು ಮತ್ತೊಂದು ತಂತ್ರದ ಮೂಲಕ ಆ ಪ್ರದೇಶದಲ್ಲಿ ಸಲ್ಫರ್ (ಎಸ್) ಇರುವಿಕೆಯನ್ನು ಖಚಿತಪಡಿಸಿದೆ. ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (ಎಪಿಎಕ್ಸ್‌ಎಸ್) ಎಸ್ ಮತ್ತು ಇತರ ಸಣ್ಣ ಅಂಶಗಳನ್ನು ಪತ್ತೆ ಮಾಡಿದೆ ಎಂದು ಇಸ್ರೋ ಟ್ವೀಟ್ ಮೂಲಕ ದೃಢಪಡಿಸಿದೆ.