ಕರ್ನಾಟಕ

karnataka

ETV Bharat / bharat

'ಆದಿತ್ಯ ಎಲ್1' ಉಡ್ಡಯನ ಕಸರತ್ತು ಪೂರ್ಣ; ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್‌ ಫೋಟೋ ತೆಗೆದ ಪ್ರಗ್ಯಾನ್ - ಅಧ್ಯಯನ ಮಾಡುವುದು ಆದಿತ್ಯ ಎಲ್1 ಯೋಜನೆಯ ಉದ್ದೇಶ

ISRO Aditya L1 Mission: ಸೂರ್ಯನ ಸಂಶೋಧನೆಗಾಗಿ 'ಆದಿತ್ಯ ಎಲ್1' ಮಿಷನ್ ಬಗ್ಗೆ ಇಸ್ರೋ ಲೇಟೆಸ್ಟ್‌ ಅಪ್​ಡೇಟ್​ ನೀಡಿದೆ. ಉಡ್ಡಯನ ಪೂರ್ವಾಭ್ಯಾಸ ಮತ್ತು ರಾಕೆಟ್‌ನ ಆಂತರಿಕ ತಪಾಸಣಾ ಕಾರ್ಯ ಪೂರ್ಣಗೊಂಡಿದೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇನ್ನೊಂದೆಡೆ, ಚಂದ್ರನಂಗಳದಲ್ಲಿ ರೋವರ್‌ ಪ್ರಜ್ಞಾನ್‌ ಸಂಶೋಧನೆ ಮುಂದುವರೆಸಿದೆ.

ISRO Aditya L1 Mission  isro completes launch rehearsal  aditya l1 solar mission  ರಾಕೆಟ್ ಆಂತರಿಕ ತಪಾಸಣೆ ಪೂರ್ಣ  ರಾಕೆಟ್ ಆಂತರಿಕ ತಪಾಸಣೆ ಪೂರ್ಣ ಎಂದ ಇಸ್ರೋ  ಸಂಶೋಧನೆಗಾಗಿ ಇಸ್ರೋ ಆದಿತ್ಯ ಎಲ್1 ಮಿಷನ್  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  Aditya L1 Mission Launch Date And Time  ಅಧ್ಯಯನ ಮಾಡುವುದು ಆದಿತ್ಯ ಎಲ್1 ಯೋಜನೆಯ ಉದ್ದೇಶ  ಬೆಳಕಿನ ಪರಿಣಾಮವನ್ನು ಅಧ್ಯಯನ
ವಿಕ್ರಮ್​ನ ಫೋಟೋ ತೆಗೆದ ಪ್ರಗ್ಯಾನ್

By ETV Bharat Karnataka Team

Published : Aug 30, 2023, 2:49 PM IST

ಬೆಂಗಳೂರು:ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ವಾತಾವರಣದ ಸ್ಥಿತಿಗತಿಯನ್ನು ಅಧ್ಯಯನ ಮಾಡುವ ಉದ್ದೇಶಕ್ಕೆ 'ಆದಿತ್ಯ L1' ಯೋಜನೆಗೆ ತಯಾರಿ (ISRO Aditya L1 Mission) ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉಡ್ಡಯನ ಪೂರ್ವಾಭ್ಯಾಸ ಮತ್ತು ರಾಕೆಟ್‌ನ ಆಂತರಿಕ ತಪಾಸಣಾ ಕಾರ್ಯ ಪೂರ್ಣಗೊಂಡಿದೆ ಎಂದು ಇಸ್ರೋ ತಿಳಿಸಿದೆ.

ಉಡಾವಣಾ ಪೂರ್ವಾಭ್ಯಾಸ ಮತ್ತು ರಾಕೆಟ್ ಆಂತರಿಕ ತಪಾಸಣೆ ಪೂರ್ಣ ಎಂದ ಇಸ್ರೋ

ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌1 ಶನಿವಾರ (ಸೆಪ್ಟೆಂಬರ್‌ 2) ಬೆಳಗ್ಗೆ 11:50ಕ್ಕೆ ಉಡ್ಡಯನಗೊಳ್ಳಲಿದೆ. ಕರೋನಾಗ್ರಫಿ ಉಪಕರಣದ ಸಹಾಯದಿಂದ ಸೌರ ವಾತಾವರಣವನ್ನು ಆಳವಾಗಿ ಅಧ್ಯಯನ ಮಾಡುವುದು ಮಹತ್ವದ ಯೋಜನೆಯ ಹಿಂದಿನ ಉದ್ದೇಶ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ ಎಲ್-1 ಸುತ್ತ ಕಕ್ಷೆಗೆ ಈ ನೌಕೆಯನ್ನು ಹಾರಿಸಲಾಗುತ್ತದೆ. ಇದು ಸೂರ್ಯನ ಕುರಿತು ಸಂಶೋಧನೆಗಾಗಿ ಭಾರತದ ಮೊದಲ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಆದಿತ್ಯ ಎಲ್-1 ಅನ್ನು ದೇಶದ ವಿವಿಧ ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ಇತ್ತೀಚೆಗೆ ಹೇಳಿದೆ.

ಬೆಳಕಿನ ಪರಿಣಾಮದ ಅಧ್ಯಯನ: ಆದಿತ್ಯ ಎಲ್‌1, ಇದು 1,500 ಕೆ.ಜಿ ತೂಕವಿರುವ ಉಪಗ್ರಹ. ಸೌರ ಚಟುವಟಿಕೆ ಮತ್ತು ಬಾಹ್ಯಾಕಾಶ ವಾತಾವರಣವನ್ನು ಅಧ್ಯಯನ ಮಾಡಲಿದೆ. ನೌಕೆಯು 7 ಪೇಲೋಡ್‌ಗಳನ್ನು ಹೊಂದಿದೆ. ಇದರಲ್ಲಿ ಮುಖ್ಯವಾಗಿ, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್, ಸೌರ ಅವೆಲೆಟ್ ಇಮೇಜಿಂಗ್ ಟೆಲಿಸ್ಕೋಪ್, ಆದಿತ್ಯ ಸೌರಮಾರುತ ಕಣ ಪ್ರಯೋಗ, ಆದಿತ್ಯಗಾಗಿ ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಸೌರ-ಕಡಿಮೆ-ಶಕ್ತಿಯ ಎಕ್ಸ್-ರೇ ಸ್ಪೆಕ್ಟ್ರೋಮೀಟರ್, ಹೈ ಎನರ್ಜಿ ಎಲ್‌-1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಇರಲಿದೆ. ಈ ಪೇಲೋಡ್‌ಗಳನ್ನು ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಬೆಳಕಿನ ಪರಿಣಾಮಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.

ಲ್ಯಾಂಡರ್ ಫೋಟೋ ತೆಗೆದ ರೋವರ್: ಮತ್ತೊಂದೆಡೆ, ಪ್ರಗ್ಯಾನ್ ರೋವರ್ ತನ್ನನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ವಿಕ್ರಮ್ ಲ್ಯಾಂಡರ್ ಚಿತ್ರ ಕ್ಲಿಕ್ಕಿಸಿದೆ. ಈ ಫೋಟೋಗಳನ್ನು ಇಸ್ರೋ ಹಂಚಿಕೊಂಡಿದೆ. ರೋವರ್‌ನಲ್ಲಿರುವ ನ್ಯಾವಿಗೇಷನ್ ಕ್ಯಾಮರಾ ಚಿತ್ರಗಳನ್ನು ತೆಗೆದಿರುವುದಾಗಿ ಮಾಹಿತಿ ಒದಗಿಸಿದೆ.

ಇದನ್ನೂ ಓದಿ:Explained: ಇಸ್ರೋ ಮಹತ್ವಾಕಾಂಕ್ಷೆಯ ಆದಿತ್ಯ L1 ಮಿಷನ್​​​​​ ಏನೆಲ್ಲ ಅಧ್ಯಯನ ನಡೆಸಲಿದೆ ಗೊತ್ತಾ?

ABOUT THE AUTHOR

...view details