ಅನಂತ್‌ನಾಗ್: ಜಮ್ಮು ಮತ್ತು ಕಾಶ್ಮೀರದ ಶ್ರೀಗುಫ್ವಾರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಮತ್ತು ಕಾಶ್ಮೀರದ (ಐಎಸ್‌ಜೆಕೆ) ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಅನಂತ್‌ನಾಗ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ: ಐಎಸ್‌ಜೆಕೆ ಉಗ್ರನ ಸದೆಬಡಿದ ಸೇನೆ - ಜಮ್ಮು ಮತ್ತು ಕಾಶ್ಮೀರ ಗುಂಡಿನ ದಾಳಿ
ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದ್ದು, ಈ ವೇಳೆ ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಮತ್ತು ಕಾಶ್ಮೀರ (ಐಎಸ್‌ಜೆಕೆ)ದ ಓರ್ವ ಉಗ್ರನನ್ನು ಸೇನೆ ಹತ್ಯೆ ಮಾಡಿದೆ.
ಐಎಸ್‌ಜೆಕೆ ಉಗ್ರನ ಸದೆಬಡಿದ ಸೇನಾಪಡೆ
ಕಾಶ್ಮೀರ ಪೊಲೀಸ್ ಇನ್ಸ್‌ಪೆಕ್ಟರ್-ಜನರಲ್ ನೀಡಿದ ಮಾಹಿತಿ ಪ್ರಕಾರ, ಮೃತ ಉಗ್ರನನ್ನು ಕಡಿಪೋರಾ ಪ್ರದೇಶದ ನಿವಾಸಿ ಫಹೀಂ ಭಟ್ ಎಂದು ಗುರುತಿಸಲಾಗಿದೆ. ಬಿಜ್‌ಬೆಹರಾ ಪೊಲೀಸ್ ಠಾಣೆಯ ಎಎಸ್‌ಐ ಮೊಹಮ್ಮದ್ ಅಶ್ರಫ್ ಹತ್ಯೆಯಲ್ಲಿ ಈತ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.
ನಿನ್ನೆ ಅನಂತನಾಗ್ ಜಿಲ್ಲೆಯ ಅರ್ವಾನಿ ಪ್ರದೇಶದ ಮುಮನ್ಹಾಲ್ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು. ಈ ವೇಳೆ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
Last Updated : Dec 26, 2021, 10:08 AM IST