ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಭಾರತದಲ್ಲಿ ಖಲಿಸ್ತಾನದ ಪರ ಹೋರಾಡುತ್ತಿರುವರಿಗೆ ಸ್ಫೋಟಕಗಳನ್ನು ತಯಾರಿಸಲು ತರಬೇತಿ ನೀಡುತ್ತಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.
ಐಎಸ್ಐ ಮತ್ತು ಖಲಿಸ್ತಾನಿಗಳ ನಡುವೆ ಸಂಪರ್ಕವಿದ್ದು, ಸೈಬರ್ ತಜ್ಞರ ಮೂಲಕ ಸ್ಫೋಟಕಗಳ ತಯಾರಿಗೆ ಪಂಜಾಬ್ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಪಾಕಿಸ್ತಾನದ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ (ಕೆಜೆಡ್ಎಫ್), ಸಿಖ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಮತ್ತು ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಸಂಘಟನೆಗಳ ಕಮಾಂಡರ್‌ಗಳೊಂದಿಗೆ ಐಎಸ್‌ಐ ಸಭೆ ನಡೆಸಿದೆ ಎಂದು ಗುಪ್ತಚರ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.