ಕರ್ನಾಟಕ

karnataka

ETV Bharat / bharat

ಬಂಗಾಳದಲ್ಲಿ ಹಠಾತ್​ ಪ್ರವಾಹಕ್ಕೆ ಭೂತಾನ್​​ ಪರ್ವತಗಳ ನೀರು ಕಾರಣವೇ? - ಭೂತಾನ್‌ನಲ್ಲಿ ಉಂಟಾದ ಪ್ರವಾಹ

ಇತ್ತೀಚೆಗೆ ಭೂತಾನ್‌ನಲ್ಲಿ ಉಂಟಾದ ಪ್ರವಾಹ ಭಾರತದ ಕೆಲ ಜಿಲ್ಲೆಗಳನ್ನು ಪ್ರವಾಹದಲ್ಲಿ ಮುಳುಗುವಂತೆ ಮಾಡಿದೆ. ಅಲ್ಲಿಂದ ಬರುವ ಹೆಚ್ಚುವರಿ ನೀರಿನಿಂದ ಮಲ್ಬಜಾರ್‌ನ ಇಮ್ಮರ್ಶನ್ ಘಾಟ್‌ನಲ್ಲಿ ಹಠಾತ್ ಪ್ರವಾಹ ಉಂಟಾಗಿ ಎಂಟು ಜನರು ಮೃತಪಟ್ಟಿದ್ದಾರೆ.

ಬಂಗಾಳದಲ್ಲಿ ಹಠಾತ್​ ಪ್ರವಾಹಕ್ಕೆ ಭೂತಾನ್​​ ಪರ್ವತಗಳ ನೀರು ಕಾರಣವೇ?
ಬಂಗಾಳದಲ್ಲಿ ಹಠಾತ್​ ಪ್ರವಾಹಕ್ಕೆ ಭೂತಾನ್​​ ಪರ್ವತಗಳ ನೀರು ಕಾರಣವೇ?

By

Published : Oct 8, 2022, 9:42 PM IST

ಜಲ್ಪೈಗುರಿ( ಪಶ್ಚಿಮ ಬಂಗಾಳ) : ನೆರೆಯ ಭೂತಾನ್​ನಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಭಾರತದ ಪಶ್ಚಿಮಬಂಗಾಳದ ಜಲ್ಪೈಗುರಿಯಲ್ಲಿ ಭಾರಿ ಪ್ರವಾಹ ಸಂಭವಿಸಿದೆ. ಭೂತಾನ್‌ನ ನದಿ ನೀರು ಭಾರತದ ಹಲವಾರು ಸ್ಥಳಗಳನ್ನು ಪದೇ ಪದೆ ನಾಶಪಡಿಸುತ್ತಲೇ ಇದೆ. ಅಲಿಪುರ್ದೌರ್ ಮತ್ತು ಜಲ್ಪೈಗುರಿ ಜಿಲ್ಲೆಗಳ ಜನರು ಆಗಾಗ ಇಂತಹ ಪ್ರವಾಹದ ಭೀತಿಯಲ್ಲಿದ್ದಾರೆ.

ಬಂಗಾಳದಲ್ಲಿ ಹಠಾತ್​ ಪ್ರವಾಹಕ್ಕೆ ಭೂತಾನ್​​ ಪರ್ವತಗಳ ನೀರು ಕಾರಣವೇ?

ಈ ಎರಡು ಜಿಲ್ಲೆಗಳಲ್ಲಿ ನದಿ ದಡದಲ್ಲಿರುವ ಜನ - ಜಾನುವಾರುಗಳನ್ನು ರಕ್ಷಿಸಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಇತ್ತೀಚೆಗೆ ಭೂತಾನ್‌ನಲ್ಲಿ ಉಂಟಾದ ಪ್ರವಾಹ ಭಾರತದ ಕೆಲ ಜಿಲ್ಲೆಗಳನ್ನು ಪ್ರವಾಹದಲ್ಲಿ ಮುಳುಗುವಂತೆ ಮಾಡಿದೆ. ಅಲ್ಲಿಂದ ಬರುವ ಹೆಚ್ಚುವರಿ ನೀರಿನಿಂದ ಮಲ್ಬಜಾರ್‌ನ ಇಮ್ಮರ್ಶನ್ ಘಾಟ್‌ನಲ್ಲಿ ಹಠಾತ್ ಪ್ರವಾಹ ಉಂಟಾಗಿ ಎಂಟು ಜನರು ಸಾವನ್ನಪ್ಪುವಂತೆ ಮಾಡಿದೆ.

ಈ ನಡುವೆ ಜಲ್ಪೈಗುರಿ ಡಿಸಿ ಮೌಮಿತಾ ಗೋಡರಾ ಅವರು ಭೂತಾನ್‌ನೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಭಾರತ-ಭೂತಾನ್ ಗಡಿ ಪ್ರದೇಶದಲ್ಲಿ ಮಳೆ ಮಾಪನ ವ್ಯವಸ್ಥೆ ಅಳವಡಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಭಾರಿ ಮಳೆ ಹಾಗೂ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡು ಬಂದಲ್ಲಿ ಮುನ್ನೆಚ್ಚರಿಕೆ ನೀಡುವಂತೆ ಭೂತಾನ್​ಗೆ ಕೇಳಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ಭೂತಾನ್‌ನಿಂದ ಬರುವ ಪ್ರವಾಹದ ನೀರು, ಗಡಿ ಜಿಲ್ಲೆಗಳನ್ನು ಬಾಧಿಸುತ್ತಲೇ ಇದೆ. ಅಲಿಪುರ್ದೌರ್ ಜಿಲ್ಲೆಯ ಬಸ್ರಾ, ಕಲ್ಜಾನಿ, ಸಂಕೋಶ್, ಬಿರ್ಬಿಟಿ, ಹೌರಿ, ರೆಟಿ, ಸುಕೃತಿ ಮತ್ತು ಜಲ್ಪೈಗುರಿ ಜಿಲ್ಲೆಯ ಜಲ್ಧಕ, ದಯ್ನಾ, ಬನಾರ್ಹತ್, ನಗ್ರಾಕಟಾ, ಬಿನ್ನಗುರಿ, ಚಮುರ್ಚಿ ಭೂತಾನ್‌ನಲ್ಲಿ ಯಾವಾಗಲೂ ಮಳೆಯ ಪ್ರಭಾವಕ್ಕೆ ಒಳಗಾಗುತ್ತವೆ. ಮತ್ತೊಂದೆಡೆ, ಜೋಯ್ಗಾ, ಕಲ್ಚಿನಿ, ಬಿರ್ಪಾರಾ ಮದರಿಹತ್ ಬ್ಲಾಕ್ ಸೇರಿದಂತೆ ಅಲಿಪುರ್ದೂರ್ ಜಿಲ್ಲೆಯ ಹಲವಾರು ಪ್ರದೇಶಗಳು ಸಹ ಆಗಾಗ್ಗೆ ಜಲಾವೃತಗೊಳ್ಳುತ್ತವೆ.

ಇದನ್ನು ಓದಿ:ನಾಸಿಕ್​ನಲ್ಲಿ ಮತ್ತೊಂದು ಬಸ್​ಗೆ ಬೆಂಕಿ: ಸುಟ್ಟು ಕರಕಲು

ABOUT THE AUTHOR

...view details