ಗುಜರಾತ್ ವಿಧಾನಸಭೆ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇದನ್ನು ನೋಡಿದರೆ ಕೇಸರಿ ಪಕ್ಷವು ಏಳನೇ ಬಾರಿಗೆ ಗೆಲ್ಲುವ ಸಂಕಲ್ಪ ತೊಟ್ಟಿರುವುದು ಸ್ಪಷ್ಟವಾಗುತ್ತದೆ. ಸಚಿವರು ಮತ್ತು ಶಾಸಕರು ಹಾಗೂ ಸರ್ಕಾರದ ಆಡಳಿತ ವಿರೋಧಿ ಋಣಾತ್ಮಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂಬ ಆತಂಕ ಇದೆ. ಹಲವು ಕ್ಷೇತ್ರಗಳಲ್ಲಿ ಬಂಡಾಯಗಾರರ ಸಮಸ್ಯೆ ಬಿಜೆಪಿಗೆ ಕಾಡುತ್ತಿದೆ. ಆದರೆ, ಕ್ಷೇತ್ರ ಮಟ್ಟದಲ್ಲಿ ನೋಡಿದರೆ ಬಿಜೆಪಿಯ ಗೆಲವು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಕ್ಕೆ ಬಿಜೆಪಿ ವಿರೋಧಿಗಳೂ ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಬಾರಿ ಗುಜರಾತ್ ರಾಜ್ಯದಲ್ಲಿ ಎಂದಿನಂತೆ ಗೆದ್ದರೆ ಸಾಲದು. ದಾಖಲೆ ಬಹುಮತದೊಂದಿಗೆ ಗೆಲ್ಲಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದಾರೆ. ಈ ಎಲ್ಲ ಹಿಂದಿನ ದಾಖಲೆಗಳನ್ನು ಪುನಃ ಬರೆಯಲು ಮೋದಿ ನಿರ್ಧರಿಸಿದ್ದಾರೆ. 1985ರಲ್ಲಿ ಮಾಧವಸಿನ್ಹ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಂತೆ, ಬಿಜೆಪಿ ದಾಖಲೆಯ ಗೆಲುವು ಸಾಧಿಸಬೇಕೆಂದು ಮೋದಿ ಇಚ್ಛಿಸುತ್ತಿದ್ದಾರೆ.
150 ಸ್ಥಾನ ಗೆಲ್ಲುವ ಗುರಿ:ಗುಜರಾತ್ ವಿಧಾನಸಭೆಯಲ್ಲಿ 182 ಸ್ಥಾನಗಳಿವೆ. 1985ರಲ್ಲಿ ನಡೆದ ಚುನಾವಣೆಯಲ್ಲಿ ಸೋಲಂಕಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 149 ಸ್ಥಾನಗಳನ್ನು ಗೆದ್ದಿತ್ತು. ಮೋದಿಯವರ ದೊಡ್ಡ ಇಮೇಜ್ ಮತ್ತು ಅಲೆಯ ನಡುವೆಯೂ ಬಿಜೆಪಿ ಈ ಮಟ್ಟದಲ್ಲಿ ಸ್ಥಾನಗಳನ್ನು ಇದುವರೆಗೆ ಗೆದ್ದಿಲ್ಲ. ಈ ಹಿನ್ನೆಲೆಯಲ್ಲಿ ಮೋದಿ ಈ ದಾಖಲೆಯತ್ತ ದೃಷ್ಟಿ ನೆಟ್ಟಿರುವಂತಿದೆ. 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಕೆಲಸ ಮಾಡುವಂತೆ ಪಕ್ಷದ ಕಾರ್ಯಕಾರಿಣಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಬಿಜೆಪಿಯ ಚಾಣಕ್ಯ ಅಮಿತ್ ಶಾ ಲೆಕ್ಕಾಚಾರವೇ ಬೇರೆ. ವಾಸ್ತವಿಕ ಅರ್ಥದಲ್ಲಿ ಯೋಚಿಸುವ ಶಾ ಅವರಿಗೆ ಗುಜರಾತ್ನಲ್ಲಿ 130 ಸ್ಥಾನ ಗೆಲ್ಲುವ ಅವಕಾಶವಿದೆ ಎಂದು ವರದಿಯಾಗಿದೆ.
ಯಾಕೆ ಈ ಲೆಕ್ಕಾಚಾರ?: ಈ ಚುನಾವಣೆಯಲ್ಲಿ ದಾಖಲೆ ಮಟ್ಟದ ಗೆಲುವಿನ ಬಯಕೆಯು ಯಾಕೆ ಎಂದು ಕೇಳಿದರೆ ಅದಕ್ಕೆ ಕಾರಣಗಳೂ ಇವೆ. ಅದ್ಧೂರಿ ಗೆಲುವು ಸಾಧಿಸುವ ಮೂಲಕ ಮೋದಿ ಅವರು ತಮ್ಮ ಎದುರಾಳಿಗಳಿಗೆ ಗುಜರಾತ್ ಮೇಲೆ ಹಿಡಿತ ಕಳೆದುಕೊಂಡಿಲ್ಲ ಎಂಬುದನ್ನು ತೋರಿಸಬಹುದು. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಂತಹ ಹೊಸಬರು ಅಖಾಡಕ್ಕಿಳಿದರೂ ತಮ್ಮ ಶಕ್ತಿಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸಬಹುದು.
ಉಚಿತ ಯೋಜನೆಗಳ ವಿರೋಧಿಯಾಗಿರುವ ಬಿಜೆಪಿ ಈ ಚುನಾವಣೆಯಲ್ಲಿ ಯಾವುದೇ ಉಚಿತ ಯೋಜನೆಗಳ ಭರವಸೆ ನೀಡಿಲ್ಲ. ಆದರೆ, ಜನರು ತಮ್ಮ ಹಿಂದೆ ಇದ್ದಾರೆ ಎಂಬುದನ್ನು ಸಾಬೀತುಪಡಿಸಬೇಕೆಂದು ಬಿಜೆಪಿಯ ಲೆಕ್ಕಾಚಾರ. ಇದೇ ಅಂಶಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕೆಂದು ಮೋದಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:24 ಮಾಜಿ ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್.. ಗುಜರಾತಿನ ರಾಜಕೀಯದಲ್ಲಿ ನಡೆಯುತ್ತಿರುವುದೇನು?
ಎರಡು ತಿಂಗಳ ಹಿಂದೆ ಆಮ್ ಆದ್ಮಿ ಪಕ್ಷವು ಗುಜರಾತ್ ಚುನಾವಣೆಗೆ ಪೂರ್ಣ ಶಕ್ತಿಯೊಂದಿಗೆ ಪ್ರವೇಶಿಸಿತು. ಆದರೆ, ಅಭ್ಯರ್ಥಿಗಳ ಹೆಸರು ಪ್ರಕಟವಾದ ನಂತರ ಈ ವೇಗ ಕಡಿಮೆಯಾಯಿತು. ಬಹುತೇಕ ಅಭ್ಯರ್ಥಿಗಳು ಹೊಸಬರಾಗಿರುವುದು ಆಪ್ಗೆ ಪ್ರತಿಕೂಲವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಭಾವಿಸಿದೆ. ಆಪ್ ಬಹುತೇಕ ಕಾಂಗ್ರೆಸ್ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವಂತಿದೆ. ಹೀಗಾಗಿ ಆಡಳಿತ ವಿರೋಧಿ ಮತಗಳನ್ನು ಎರಡು ಪಕ್ಷಗಳಾಗಿ ವಿಭಜಿಸಿ ಬಿಜೆಪಿಗೆ ಲಾಭವಾಗಲಿದೆ ಎಂಬುದು ಕಮಲ ದಳದ ಆಶಯ.
ಜನರಿಗೆ ಮೋದಿ ಮೇಲೆ ನಂಬಿಕೆ:ಇದರೊಂದಿಗೆ 2017ರ ಚುನಾವಣೆಯಲ್ಲಿ ತಗ್ಗಿದ ಅಂತರವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಈಗಿನ ಸರ್ಕಾರದ ವಿರೋಧಿ ಅಲೆ ಸಾಮಾನ್ಯವಾಗಿಲ್ಲ. ಮೋದಿ ನೇತೃತ್ವದ ರಾಜ್ಯ ಸರ್ಕಾರವನ್ನು ಪ್ರಸ್ತುತ ಸರ್ಕಾರದೊಂದಿಗೆ ಜನರು ಹೋಲಿಸುತ್ತಿದ್ದಾರೆ. ಮೋದಿ 2001 ಮತ್ತು 2014 ರ ನಡುವೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗುಜರಾತ್ ಜನರಲ್ಲಿ ಬಹಳ ಜನಪ್ರಿಯ ವ್ಯಕ್ತಿಯಾಗಿದ್ದಾರೆ.