ನವದೆಹಲಿ: ನಮ್ಮ ದೇಶದ ಜನರೇ ಸಂಕಷ್ಟದಲ್ಲಿರುವಾಗ ಕೋವಿಡ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದು ಸರಿಯೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಂಗವಾಗಿ ಏಪ್ರಿಲ್ 11ರಿಂದ 14ರವರೆಗೆ ದೇಶದಲ್ಲಿ 'ಲಸಿಕಾ ಉತ್ಸವ' ಆಚರಣೆಗೆ ಪಿಎಂ ಮೋದಿ ಕರೆ ನೀಡಿದ್ದಾರೆ. ಇದರ ವಿರುದ್ಧ ಟ್ವೀಟ್ ಮಾಡಿರುವ ರಾಗಾ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಲಸಿಕೆಯ ಕೊರತೆಯು ಗಂಭೀರ ಸಮಸ್ಯೆಯಾಗಿದೆ. ಅದನ್ನು ಬಿಟ್ಟು 'ಉತ್ಸವ' ಮಾಡುವುದಲ್ಲ ಎಂದು ಕಿಡಿಕಾರಿದ್ದಾರೆ.