ನವದೆಹಲಿ:ಭಾರತ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ಕಾಂಗ್ರೆಸ್ ಇಂದು ಗೌರವಾರ್ಪಣೆ ಸಲ್ಲಿಕೆ ಮಾಡಿದೆ. ಇಂದಿರಾ ಗಾಂಧಿ ಸಮಾಧಿ ಸ್ಥಳವಾದ ಶಕ್ತಿ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ಸಲ್ಲಿಸಿದ್ದಾರೆ.
'ನನ್ನ ಅಜ್ಜಿ ಯಾವುದೇ ಭಯವಿಲ್ಲದೇ ಕೊನೆಯವರೆಗೂ ದೇಶ ಸೇವೆ ಮಾಡಿದರು. ಆಕೆಯ ಜೀವನ ನಮಗೆ ಸ್ಫೂರ್ತಿಯ ಮೂಲ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಮಹಿಳಾ ಶಕ್ತಿಗೆ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಅವರಿಗೆ ಹುತಾತ್ಮದಿನಕ್ಕೆ ನನ್ನ ನಮನಗಳು ಎಂದಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿದ್ದು,ರಾಷ್ಟ್ರಕ್ಕೆ ಇಂದಿರಾಗಾಂಧಿಯವರ ಕೊಡುಗೆಯನ್ನು ಹೊಗಳಲಾಗಿದೆ. ಇಂದಿರಾಗಾಂಧಿ ಶಕ್ತಿಯನ್ನು ಪ್ರತಿನಿಧಿಸುತ್ತಾರೆ. ತ್ಯಾಗ ಸಾಕಾರಮೂರ್ತಿಯಾದ ಅವರು ದೇಶಸೇವೆಯನ್ನು ತನ್ನೊಳಗೆ ಉಳಿಸಿಕೊಂಡಿದ್ದರು ಎಂದಿದೆ.
ಜೊತೆಗೆ ಭಾರತದ ಉಕ್ಕಿನ ಮಹಿಳೆ, ನಮ್ಮ ಮೊದಲ ಮಹಿಳಾ ಪ್ರಧಾನ ಮಂತ್ರಿ, ನಿಜವಾದ ಭಾರತ ರತ್ನ, ಶ್ರೀಮತಿ ಇಂದಿರಾಗಾಂಧಿಗೆ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮಸ್ಕಾರಗಳು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಆಳ ಕಂದಕಕ್ಕೆ ಬಸ್ ಉರುಳಿ 11 ಮಂದಿ ದುರ್ಮರಣ