ಅಹ್ಮದಾಬಾದ್: ಡೆಲ್ಲಿ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಒಂದು ರನ್ನಿನಿಂದ ಡೆಲ್ಲಿಯನ್ನು ಮಣಿಸಿ ಅಗ್ರಸ್ಥಾನಕ್ಕೇರಿದೆ.
ಐಪಿಎಲ್ 2021: ಡೆಲ್ಲಿಯನ್ನು ಮಣಿಸಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ! - cricket news
ಐಪಿಎಲ್ 14ನೇ ಸೀಜನ್‌ನ 22ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಕೊಹ್ಲಿ ಪಡೆ 1 ರನ್ ಅಂತರದಿಂದ ಜಯ ಸಾಧಿಸಿದೆ.
ಡೆಲ್ಲಿಯನ್ನು ಮಣಿಸಿದ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ 5 ವಿಕೆಟ್ಗೆ 171 ರನ್ ಪಡೆಯಿತು. ಡೆಲ್ಲಿ 170ರ ತನಕ ಬಂದು ಸೋಲನುಭವಿಸಿತು. ಇನ್ನು 6 ಪಂದ್ಯದಲ್ಲಿ ಕೊಹ್ಲಿ ಪಡೆಗೆ ಒಲಿದ 5ನೇ ಗೆಲುವು ಇದಾಗಿದೆ.
ಆರ್‌ಸಿಬಿಯ ಈ ದೊಡ್ಡ ಮೊತ್ತಕ್ಕೆ ಎಬಿಡಿ ಅವರ ಆಟದ ವೈಖರಿ ಪ್ರಮುಖ ಕಾರಣವಾಯಿತು. ಹಾಗೆ ಡೆಲ್ಲಿ ಹೆಟ್‌ಮೈರ್-ಪಂತ್ ಪರಾಕ್ರಮದಿಂದ ಮುನ್ನುಗ್ಗಿ ಬಂತಾದರೂ ತಂಡವನ್ನು ಗೆಲ್ಲಿಸುವಲ್ಲಿ ಇವರು ವಿಫಲವಾದರು. ಈ ಹಿನ್ನೆಲೆ ಹ್ಯಾಟ್ರಿಕ್ ಗೆಲುವಿನಿಂದ ಮುನ್ನುಗ್ಗುತ್ತಿದ್ದ ಡೆಲ್ಲಿ ಆರ್‌ಸಿಬಿ ವಿರುದ್ಧ ಸೋಲುಂಡಿದೆ.