ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಬಾಂಬ್ ದಾಳಿಕೋರ ಗುಡ್ಡು ಮುಸ್ಲಿಂ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ದೆಹಲಿ ಪೊಲೀಸರು ಗುಡ್ಡು ಮುಸ್ಲಿಂ ತಲೆಗೆ ಐದು ಲಕ್ಷ ಬಹುಮಾನ ಇಟ್ಟಿದ್ದು, ಆರೋಪಿಯ ಬಂಧನಕ್ಕೆ ತಲಾಶ್ ನಡೆಸಿದ್ದಾರೆ. ಉಮೇಶ್ ಪಾಲ್ ಅವರನ್ನು ಕೊಲ್ಲಲು ಗುಡ್ಡು ಮುಸ್ಲಿಂ, ದೆಹಲಿಯಿಂದ ಶಸ್ತ್ರಾಸ್ತ್ರಗಳನ್ನು ತರಲು ಹೇಳಿದ್ದನು ಎಂದು ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳಸಾಗಣೆದಾರನೊಬ್ಬ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದಾದ ನಂತರ ದೆಹಲಿ ಪೊಲೀಸರು ಪ್ರಯಾಗ್‌ರಾಜ್‌ನ ಸರಯ್ಯ ಸ್ವರಾಜ್ ನಗರದಲ್ಲಿರುವ ಗುಡ್ಡು ಮುಸ್ಲಿಂ ಅವರ ಪೂರ್ವಜರ ಮನೆ ಬಾಲಿಗೆ ನೋಟಿಸ್ ಅಂಟಿಸಿದ್ದಾರೆ. ಆ ಮನೆ ಕೆಡವಲು ಸಿದ್ಧತೆ ನಡೆದಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ಗುಡ್ಡು ಮುಸ್ಲಿಂ ವಿರುದ್ಧ ವಾರಂಟ್:ದೆಹಲಿ ಪೊಲೀಸರು ಬಂಧಿಸಿರುವ ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆದಾರನಿಂದ ಪಡೆದ ಮಾಹಿತಿಯ ಆಧಾರದ ಮೇಲೆ, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 41ರ ಅಡಿಯಲ್ಲಿ ಅಸದ್, ಗುಡ್ಡು ಮುಸ್ಲಿಂ ಮತ್ತು ಅಸದ್ ಕಾಲಿಯಾ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಯುಪಿ ಎಸ್‌ಟಿಎಫ್‌ನ ಎನ್‌ಕೌಂಟರ್‌ನಲ್ಲಿ ಅಸದ್ ಹತನಾಗಿದ್ದಾನೆ. ಅಸದ್ ಕಾಲಿಯಾ ಕೂಡ ಯುಪಿ ಪೊಲೀಸರ ವಶದಲ್ಲಿದ್ದಾನೆ. ಆದ್ರೆ, ಗುಡ್ಡು ಮುಸ್ಲಿಂ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಭಾನುವಾರ ಸಂಜೆ ದೆಹಲಿ ಪೊಲೀಸ್ ತಂಡವು ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲಾ ಅವರ ಸಾರಯ್ಯ ಸ್ವರಾಜ್ ನಗರದಲ್ಲಿರುವ ಗುಡ್ಡು ಮುಸ್ಲಿಂನ ಪೂರ್ವಜರ ಮನೆಗೆ ತಲುಪಿತು. ಆ ತಂಡವು, ಅಲ್ಲಿರುವ ಮನೆ ಬಾಗಿಲಿಗೆ ಪೊಲೀಸ್ ತಂಡವು ನೋಟಿಸ್ ಅನ್ನು ಅಂಟಿಸಿದೆ.