ನವದೆಹಲಿ :ಇನ್ಮುಂದೆ ಕಾಲ್ ಸೆಂಟರ್‌ನಿಂದ ಫೋನ್ ಕರೆ ಬೆಂಗಳೂರು, ಗುರ್‌ಗಾಂವ್ ಅಥವಾ ಹೈದರಾಬಾದ್‌ನ ಐಟಿ-ಹಬ್‌ಗಳಿಂದ ಬರದೇ, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಅಥವಾ ಕುಪ್ವಾರದಲ್ಲಿರುವ ಕಾಲ್ ಸೆಂಟರ್‌ಗಳಿಂದ ಬರಬಹುದು. ಯಾಕೆಂದರೆ, ಕೇಂದ್ರಾಡಳಿತ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ಕಾಲ್ ಸೆಂಟರ್ ಸ್ಥಾಪಿಸಲು ಈಗ ಯೋಜನೆಗಳನ್ನು ಹಾಕಲಾಗುತ್ತಿದೆ.
ನಾವು ಕೇಂದ್ರಾಡಳಿತ ಪ್ರದೇಶ ಐಟಿ ಹಬ್ ಆಗುವ ಸಾಧ್ಯತೆಗಳನ್ನು ಬಲವಾಗಿ ನೋಡುತ್ತಿದ್ದೇವೆ. ಯಾಕೆಂದರೆ, ನಮ್ಮನ್ನು ಅನೇಕ ದೊಡ್ಡ ಕಂಪನಿಗಳು ಈ ಬಗ್ಗೆ ಸಾಕಷ್ಟು ಆಸಕ್ತಿ ವ್ಯಕ್ತಪಡಿಸಿವೆ. ನಾವು ಈಗಾಗಲೇ ಯುವಕರಿಗೆ ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಎರಡು ಉನ್ನತ ತಂತ್ರಜ್ಞಾನ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ.
ಅದು ಕೃತಕ ಬುದ್ಧಿಮತ್ತೆ (ಎಐ) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್‌ನಂತಹ ಅತ್ಯಾಧುನಿಕ ಡೊಮೇನ್‌ಗಳಲ್ಲಿ ಪರಿಣತಿ ಹೊಂದಲಿದೆ'' ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಅಧಿಕೃತ ಮೂಲವು ವಿವರಿಸಿದೆ.
ಮುಂದಿನ 7-8 ತಿಂಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಮೊತ್ತ 50,000 ಕೋಟಿ ಗಡಿ ದಾಟಲಿದೆ. ಉಗ್ರಗಾಮಿ ಪೀಡಿತ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆಯ ಮಳೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸಂಜಿಬ್ ಕೆ ಬರುವಾ ವರದಿ ಮಾಡಿದ್ದಾರೆ.
ಈಗ ಸಂಘರ್ಷ ಪೀಡಿತ ಪ್ರದೇಶದಲ್ಲಿ 'ವ್ಯಾಪಾರ', 'ಪ್ರಾಜೆಕ್ಟ್‌ಗಳು' ಮತ್ತು 'ವಹಿವಾಟುಗಳು'-ನಾಲ್ಕು ತಿಂಗಳ ಹಳೆಯ ಕೈಗಾರಿಕಾ ನೀತಿಯ (NIP) ಭಾಗವಾಗಿದೆ. ಇದು ಈವರೆಗೆ ಸುಮಾರು 23,000 ಕೋಟಿ ರೂ. ಹೂಡಿಕೆ ಪಡೆದಿದೆ. ಇದರಲ್ಲಿ 11,000 ಕೋಟಿ ರೂಪಾಯಿಗಳನ್ನು ಕಾಶ್ಮೀರದಲ್ಲಿ ಮತ್ತು 12,000 ಕೋಟಿ ಜಮ್ಮುವಿನಲ್ಲಿ ಹೂಡಿಕೆ ಮಾಡಲಾಗುತ್ತದೆ.
ಮಾರ್ಚ್ 2022ರ ವೇಳೆಗೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ರೂ. 50,000 ಕೋಟಿ ಮೊತ್ತದ ಹೂಡಿಕೆಯ ನಿರೀಕ್ಷೆ ಇದೆ. ಈ ಸಂಬಂಧ ಪ್ರತಿ ದಿನವೂ ನಮಗೆ ವಿವಿಧ ಹೂಡಿಕೆದಾರರಿಂದ ಮೂರು-ನಾಲ್ಕು ಕರೆಗಳು ಬರುತ್ತಿವೆ."ಹೆಚ್ಚಿನ ಕರೆಗಳು ದೇಶೀಯ ಹೂಡಿಕೆದಾರರಿಂದ ಬಂದಿವೆ. ಮುಂಬೈನಿಂದ ಹೆಚ್ಚು ಕರೆಗಳು ಹಾಗೂ ವಿದೇಶಗಳಿಂದಲೂ ಮುಖ್ಯವಾಗಿ ಯುರೋಪಿನಿಂದ ಹೂಡಿಕೆ ಮಾಡುವ ಸಲುವಾಗಿ ಕರೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಹೂಡಿಕೆದಾರರು ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಕೇಂದ್ರಾಡಳಿತ ಪ್ರದೇಶವು ಅದರ ಹವಾಮಾನ, ಎತ್ತರ ಮತ್ತು ಭೂಪ್ರದೇಶದ ಕಾರಣದಿಂದಾಗಿ ಹೂಡಿಕೆಗೆ ಅನುಕೂಲಕರ ಪರಿಸರ ಒದಗಿಸುತ್ತದೆ.