ಅರ್ನಿಯಾ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪಾಕಿಸ್ತಾನದಿಂದ ಭಾರತದತ್ತ ನುಸುಳುತ್ತಿದ್ದ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ತಡರಾತ್ರಿ ಘಟನೆ ನಡೆದಿದೆ. ಕಳೆದ ವಾರವಷ್ಟೇ ಇದೇ ರೀತಿಯ ಘಟನೆ ನಡೆದಿತ್ತು. ಒಂದು ವಾರದಲ್ಲಿ ನಡೆದ ಎರಡನೇ ವಿದ್ಯಮಾನ ಇದಾಗಿದೆ.
ಗುಂಡು ಹಾರಿಸುವ ಮುನ್ನ ನುಸುಳುಕೋರನಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಆತ ಪದೇ ಪದೇ ಪಾಕಿಸ್ತಾನದ ಕಡೆಯಿಂದ ಒಳನುಸುಳುವ ಯತ್ನ ಮಾಡುತ್ತಿದ್ದ. ಸೋಮವಾರ ಬೆಳಗಿನ ಜಾವ 1:45 ರ ಸುಮಾರಿಗೆ ಅರ್ನಿಯಾ ಸೆಕ್ಟರ್‌ನ ಜಬೋವಾಲ್ ಗಡಿ ಹೊರಠಾಣೆ ಬಳಿ ಗಡಿ ಬೇಲಿ ದಾಟಿ ಮುಂದಕ್ಕೆ ಬರುತ್ತಿದ್ದ. ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಬಿಎಸ್‌ಎಫ್ ಸಿಬ್ಬಂದಿ ನುಸುಳುಕೋರನನ್ನು ಗುಂಡಿಕ್ಕಿ ಕೊಂದರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿ, "ಒಳನುಸುಳುಕೋರನು ಜುಲೈ 30 ಮತ್ತು 31ರ ಮಧ್ಯರಾತ್ರಿಯ ರಾತ್ರಿ ಆರ್ನಿಯಾದ ಅಂತಾರಾಷ್ಟ್ರೀಯ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತದ ಭೂಪ್ರದೇಶದತ್ತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಅನುಮಾನಾಸ್ಪದ ಓಡಾಟ ಕಂಡು ಸಿಬ್ಬಂದಿ ಅಲ್ಲಿಯೇ ತಡೆದಿದ್ದರು. ಆದರೂ ಒಳನುಸುಳುವ ಯತ್ನ ಮಾಡಿದ್ದರಿಂದ ಗುಂಡು ಹಾರಿಸಲಾಗಿದೆ. ಘಟನೆಯ ಬಳಿಕ ಪ್ರದೇಶದ ಸುತ್ತಮುತ್ತ ಹೆಚ್ಚಿನ ಭದ್ರತೆ ನೀಡಲಾಗಿದೆ. ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ. ಮೃತದೇಹವನ್ನು ಹೊರತೆಗೆಯಲಾಗುತ್ತಿದೆ" ಎಂದು ಮಾಹಿತಿ ತಿಳಿಸಿದ್ದಾರೆ.
ಜುಲೈ 25ರಂದು, ಸಾಂಬಾ ಜಿಲ್ಲೆಯ ರಾಮ್‌ಗಢ ಸೆಕ್ಟರ್‌ನಲ್ಲಿ ನಾಲ್ಕು ಕಿಲೋಗ್ರಾಂಗಳಷ್ಟು ಹೆರಾಯಿನ್ ಸಾಗಿಸುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರರನ್ನು ಬಿಎಸ್‌ಎಫ್ ಗುಂಡಿಕ್ಕಿ ಕೊಂದಿತ್ತು.
ಇದನ್ನೂ ಒದಿ:ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್ ನುಸುಳುಕೋರ ಅರೆಸ್ಟ್
ಇದು ಮೊದಲಲ್ಲ: ಇತ್ತೀಚೆಗೆ ಪಾಕಿಸ್ತಾನಿ ನುಸುಳುಕೋರನೊಬ್ಬ ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿದ್ದಾಗ ಗಡಿ ಭದ್ರತಾ ಪಡೆಗೆ ಸಿಕ್ಕಿಬಿದ್ದಿದ್ದ. ಅನುಮಾನದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತಕ್ಷಣ ಆತನನ್ನು ಬಂಧಿಸಿತ್ತು. ಪಾಕಿಸ್ತಾನದ ನಗರ್‌ಪಾರ್ಕರ್‌ನ ನಿವಾಸಿ ದಯಾರಾಮ್ ಬಂಧಿತ ಆರೋಪಿ ಎಂದು ಗುರುತಿಸಲಾಗಿತ್ತು.
ಆರೋಪಿ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿದ್ದನು. ಗಡಿಯಲ್ಲಿ ಎಚ್ಚರಿಕೆವಹಿಸಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ತಕ್ಷಣ ಆತನನ್ನು ಸೆರೆ ಹಿಡಿದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದರು. ದಯಾರಾಮ್ ಬನಸ್ಕಾಂತದಿಂದ ನಾದೇಶ್ವರಿ ಬಳಿ ಗೇಟಿನಿಂದ ಇಳಿಯುತ್ತಿದ್ದ. ಈ ವೇಳೆ ಬಂಧಿಸಲಾಗಿದೆ. ಗಡಿ ಪ್ರದೇಶದಲ್ಲಿ ಪದೇ ಪದೇ ಈ ರೀತಿಯ ಅಕ್ರಮಗಳು ನಡೆಯುತ್ತಿರುವುದರಿಂದ ಭದ್ರತಾ ಪಡೆ ಹೆಚ್ಚು ಕಣ್ಗಾವಲಿಟ್ಟಿದೆ.
ಇದನ್ನೂ ಓದಿ:RPF Jawan: ಜೈಪುರ-ಮುಂಬೈ ರೈಲಿನಲ್ಲಿ ಗುಂಡು ಹಾರಿಸಿದ RPF ಕಾನ್ಸ್‌ಟೇಬಲ್; ನಾಲ್ವರು ಸಾವು!
ಗುಂಡು ಹಾರಿಸಿದ RPF ಕಾನ್ಸ್‌ಟೇಬಲ್: ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ನಾಲ್ವರು ಪ್ರಯಾಣಿಕರನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಕಾನ್ಸ್‌ಟೇಬಲ್ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಸಾವಿಗೀಡಾದವರಲ್ಲಿ ಮೂವರು ಪ್ರಯಾಣಿಕರಾಗಿದ್ದು, ಮತ್ತೊಬ್ಬರನ್ನು RPF ಸಬ್ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಕಾನ್ಸ್‌ಟೇಬಲ್ ಚೇತನ್ ಕುಮಾರ್ ಗುಂಡು ಹಾರಿಸಿದ ಆರೋಪಿಯಾಗಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆ ತಿಳಿಸಿದೆ. ಮೃತ ಆರ್‌ಪಿಎಫ್ ಎಎಸ್‌ಐ ಅವರನ್ನು ಟಿಕಾ ರಾಮ್ ಮೀನಾ ಎಂದು ಗುರುತಿಸಲಾಗಿದೆ. ರೈಲು ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಕಾನ್ಸ್‌ಟೇಬಲ್, ಚಲಿಸುತ್ತಿದ್ದ ಜೈಪುರ ಎಕ್ಸ್‌ಪ್ರೆಸ್‌ನೊಳಗೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಇತರೆ ಮೂವರು ಮೂವರು ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.