ಕರ್ನಾಟಕ

karnataka

ETV Bharat / bharat

ಸಾಗರದಲ್ಲಿ ಅಂತಾರಾಜ್ಯ ಸೆಕ್ಸ್ ರಾಕೆಟ್​​ ದಂಧೆ: ಆರು ಯುವತಿಯರು, ಇಬ್ಬರು ಯುವಕರ ಬಂಧನ - ಹೈ ಪ್ರೊಫೈಲ್ ಸೆಕ್ಸ್ ರಾಕೆಟ್

ಮಧ್ಯಪ್ರದೇಶದ ಸಾಗರದಲ್ಲಿ ನಡೆಯುತ್ತಿದ್ದ ಸೆಕ್ಸ್​ ರಾಕೆಟ್ ದಂಧೆ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನ ಮಾಡಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Sagar Sex Racket
Sagar Sex Racket

By

Published : Sep 13, 2022, 8:05 AM IST

ಸಾಗರ(ಮಧ್ಯಪ್ರದೇಶ): ರಾಜ್ಯದಲ್ಲಿ ನಡೆಯುತ್ತಿದ್ದ ಅಂತಾರಾಜ್ಯ ಸೆಕ್ಸ್​ ರಾಕೆಟ್ ದಂಧೆ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇಘಾಲಯದ ಇಬ್ಬರು ಸೇರಿದಂತೆ ಒಟ್ಟು ಆರು ಮಂದಿ ಯುವತಿಯರು ಹಾಗೂ ಇಬ್ಬರು ಯುವಕರನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮಕ್ರೋನಿಯಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಸ್ ದಂಧೆ ನಡೆಸಲಾಗ್ತಿತ್ತು. ಇದರ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಲ್ಲಿ ಇಬ್ಬರು ಯುವತಿಯರು ಮೇಘಾಲಯದವರು ಎಂದು ಹೇಳಲಾಗ್ತಿದೆ. ವೇಶ್ಯಾವಾಟಿಕೆಗೋಸ್ಕರ ಅವರನ್ನು ಪಿಂಪ್​ಗಳು ಕರೆತಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹೈ ಪ್ರೊಫೈಲ್ ಸೆಕ್ಸ್ ರಾಕೆಟ್​​: ಬೆಂಗಳೂರಿನ ಹೆಣ್ಣುಮಗಳು ಸೇರಿ 11 ಯುವತಿಯರು, ಓರ್ವ ಕಿಂಗ್​ಪಿನ್​ ಬಂಧನ

ಮಕ್ರೋನಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಅನೇಕ ತಿಂಗಳಿಂದ ಸೆಕ್ಸ್ ರಾಕೆಟ್ ದಂಧೆ ನಡೆಸಲಾಗ್ತಿದೆ ಎಂಬ ಮಾಹಿತಿ ಪೊಲೀಸರಿಗೆ ನೀಡಲಾಗಿತ್ತು. ಇದರ ಬಗ್ಗೆ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು, ಆರೋಪಿಗಳನ್ನ ರೆಡ್​ಹ್ಯಾಡ್​ ಆಗಿ ಹಿಡಿಯಬೇಕೆಂದು ಕಾಯುತ್ತಿದ್ದರು. ಅದರಂತೆ ನಿನ್ನೆ ಬಲೆ ಬೀಸಿರುವ ಖಾಕಿ, ಎಲ್ಲರನ್ನೂ ಒಟ್ಟಿಗೆ ಬಂಧಿಸಿದೆ. ಇವರ ವಿರುದ್ಧ ವೇಶ್ಯಾವಾಟಿಕೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಯುವತಿಯರಿಗೆ ಇತರೆ ರಾಜ್ಯದ ಸಂಪರ್ಕ ಸಹ ಇತ್ತು. ಲೈಂಗಿಕ ದಂಧೆಯಲ್ಲಿ ಭಾಗಿಯಾಗಲು ಬೇರೆ ಬೇರೆ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ವಿಕ್ರಂ ಸಿಂಗ್ ತಿಳಿಸಿದ್ದಾರೆ. ಮೇಘಾಲಯದಿಂದ ಇಬ್ಬರು ಯುವತಿಯರನ್ನು ಕರೆತರಲಾಗಿದ್ದು, ಅವರನ್ನು ಹೇಗೆ ಕರೆದುಕೊಂಡು ಬರಲಾಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details