ನವದೆಹಲಿ:ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಫರೀದ್ಕೋಟ್ನಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂಸೆವಾಲಾ ಹತ್ಯೆಗೆ 10 ದಿನಗಳ ಮೊದಲು ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದಾರೆ.
ಗೋಲ್ಡಿ ಬ್ರಾರ್ ಕೆನಡಾದಲ್ಲಿ ವಾಸವಾಗಿದ್ದು, ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿರುವುದರಿಂದ ಪ್ರಕರಣದ ತನಿಖೆಗೆ ಅನುಕೂಲವಾಗುವಂತೆ ಸಿಬಿಐ ಇಂಟರ್ಪೋಲ್ಗೆ ನೆರವು ಕೇಳಿತ್ತು. ಹಳೆಯ ಎರಡು ಪ್ರಕರಣಗಳ ಜತೆಗೆ ಸಿಧು ಹತ್ಯೆಯಲ್ಲಿ ಗೋಲ್ಡಿ ಬ್ರಾರ್ ಕೈವಾಡ ಇರುವುದರಿಂದ ಪಂಜಾಬ್ ಪೊಲೀಸ್ ಮತ್ತು ಸಿಬಿಐ ಇಂಟರ್ಪೋಲ್ ಮೊರೆ ಹೋಗಿದೆ.