ನವದೆಹಲಿ:ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್ ಸಿಂಕ್ ಮತ್ತು ಡ್ಯಾನ್ಸ್ ಮಾಡುವ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ತಾಂಜಾನಿಯಾದ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪಾಲ್ ಅವರನ್ನು ತಾಂಜಾನಿಯಾದಲ್ಲಿರುವ ಭಾರತದ ಹೈಕಮಿಷನ್ ಗೌರವಿಸಿದೆ.
ತಾಂಜಾನಿಯಾದ ಭಾರತೀಯ ಹೈಕಮಿಷನರ್ ಬಿನಯಾ ಪ್ರಧಾನ್ ಅವರು ಕಿಲಿ ಪೌಲ್ ಅವರನ್ನು ಗೌರವಿಸಿರುವ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಜನಪ್ರಿಯ ಹಾಡುಗಳಿಗೆ ಲಿಪ್‌ಸಿಂಕ್ ಮತ್ತು ನೃತ್ಯ ಮಾಡುವ ಮೂಲಕ ಲಕ್ಷಾಂತರ ಭಾರತೀಯರ ಪ್ರೀತಿ ಗಳಿಸಿರುವ ಕಿಲಿ ಪೌಲ್ ಭಾರತೀಯ ಹೈಕಮಿಷನರ್ ಕಚೇರಿಗೆ ಆಗಮಿಸಿದ್ದರು. ಅವರನ್ನು ಗೌರವಿಸಲಾಗಿದೆ ಎಂದು ಬಿನಯಾ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಿಲಿ ಪೌಲ್, ಭಾರತದ ಹೈಕಮಿಷನರ್‌ಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಶೇರ್ ಷಾ ಚಿತ್ರದ ಹಾಡೊಂದಕ್ಕೆ ಲಿಪ್‌ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದರು ಕಿಲಿ ಪೌಲ್. ಇನ್ಸ್ಟಾದಲ್ಲಿ 2.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಟಾಲಿವುಡ್ನ 'ಪುಷ್ಪಾ' ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ:ಕನ್ನಡ ಸಿನಿಮಾ ಕೊಂಡಾಡಿದ ತೆಲುಗು ನಟ ಕಾರ್ತಿಕೇಯನ್
ಕಿಲಿ ಪೌಲ್ ಅವರನ್ನು ಬಾಲಿವುಡ್ನ ರಿಚಾ ಚಡ್ಡಾ, ಗುಲ್ ಪನಾಗ್, ಆಯುಷ್ಮಾನ್ ಖುರಾನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಇನ್ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ.