ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಯೋಗ ದಿನ 2021.."ಯೋಗಕ್ಷೇಮಕ್ಕಾಗಿ ಯೋಗ" - ಕೊರೊನಾ ಸೋಂಕು ಮತ್ತು ಯೋಗ

2021 ಅಂತಾರಾಷ್ಟ್ರೀಯ ಯೋಗ ದಿನವನ್ನು ಸತತವಾಗಿ 7 ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ. ಇದನ್ನು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುತಿಸಿದ್ದಲ್ಲದೇ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಉಪ ಕ್ರಮವಾಗಿತ್ತು. ಈ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ "ಯೋಗಕ್ಷೇಮಕ್ಕಾಗಿ ಯೋಗ" ಮತ್ತು "ಯೋಗದೊಂದಿಗೆ ಇರಿ, ಮನೆಯಲ್ಲಿಯೇ ಇರಿ" ಎಂಬ ಸಂದೇಶವಿದೆ.

International Yoga Day
ಅಂತಾರಾಷ್ಟ್ರೀಯ ಯೋಗ ದಿನ

By

Published : Jun 21, 2021, 4:27 PM IST

"ಯೋಗವು ಭಾರತದ 5000 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವಾಗಿದ್ದು, ಇದು ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧಿಸಲು ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಅನ್ವೇಷಣೆ ಸಂಯೋಜಿಸುತ್ತದೆ" ಎಂದು ಆಯುಷ್ ಭಾರತ ಸಚಿವಾಲಯ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮತ್ತು ವಿಶೇಷವಾಗಿ ಕೋವಿಡ್​ 19 ಬಳಿ ಯೋಗವು ಹೆಚ್ಚಿನ ಮನ್ನಣೆ ಗಳಿಸಿದೆ. ಯೋಗತಜ್ಞ ಡಾ. ಹೇಮಂತ್ ಶರ್ಮಾ ಅವರು ಕೋವಿಡ್​ ಸೋಂಕಿನಿಂದ ಗುಣಮುಖರಾಗಲು ಮತ್ತು ಆರೋಗ್ಯವನ್ನು ಕಾಪಾಡಲು ಕೆಲ ಯೋಗ ಭಂಗಿಗಳನ್ನು ಸೂಚಿಸಿದ್ದಾರೆ.

2021 ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವ ಸತತ 7 ನೇ ವರ್ಷವಾಗಿದೆ. ಇದನ್ನು 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಗುರುತಿಸಿದ್ದಲ್ಲದೇ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಉಪಕ್ರಮವಾಗಿತ್ತು. ಈ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ವರ್ಷದ ಥೀಮ್ "ಯೋಗಕ್ಷೇಮಕ್ಕಾಗಿ ಯೋಗ" ಮತ್ತು "ಯೋಗದೊಂದಿಗೆ ಇರಿ, ಮನೆಯಲ್ಲಿಯೇ ಇರಿ" ಎಂಬ ಸಂದೇಶವಿದೆ.

ಅಲ್ಲದೇ, ಈ ವರ್ಷ ಕೋವಿಡ್​ 19 ಸಾಂಕ್ರಾಮಿಕ ರೋಗದಿಂದಾಗಿ, ಅಂತಾರಾಷ್ಟ್ರೀಯ ಯೋಗ ದಿನವನ್ನು ಡಿಜಿಟಲ್ ರೂಪದಲ್ಲಿ ಆಚರಿಸಲಾಗುತ್ತಿದೆ. ಮನೆಯಲ್ಲಿ ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಜನರನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.

ಪ್ರಸ್ತುತ ನಡೆಯುತ್ತಿರುವ ಪರಿಸ್ಥಿತಿಯ ಮಧ್ಯೆ ತೀವ್ರವಾದ ಸೋಂಕು ತಡೆಗಟ್ಟಲು ಮಾನಸಿಕ ಸಕಾರಾತ್ಮಕತೆ ಮತ್ತು ಬಲವಾದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಇತ್ತೀಚೆಗೆ, ಭಾರತದಲ್ಲಿ ಕೋವಿಡ್​ 19ನ ಎರಡನೇ ತರಂಗವು ಪ್ರತಿಕೂಲವಾಗಿದ್ದು, ಅನೇಕ ಜನರನ್ನು ಬಾಧಿಸಿತು. ಚೇತರಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ.

ಆದ್ದರಿಂದ, ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಜನರು ತಮ್ಮ ದೇಹವನ್ನು ಹೇಗೆ ಸದೃಢವಾಗಿರಿಸಿಕೊಳ್ಳಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈಟಿವಿ ಭಾರತ್ ಸುಖೀಭವ ತಂಡವು ಚೋಯಿತ್ರಮ್ ಕಾಲೇಜಿನ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಹೇಮಂತ್ ಶರ್ಮಾ ಅವರೊಂದಿಗೆ ಸಂವಾದ ನಡೆಸಿದೆ.

ಕೋವಿಡ್​ ಚೇತರಿಕೆಗೆ ಯೋಗ:ಅನೇಕ ಸಂಶೋಧಕರು ಮತ್ತು ತಜ್ಞರು ಸೋಂಕಿನ ಸಮಯದಲ್ಲಿ ಮಾತ್ರವಲ್ಲದೇ, ಯೋಗದ ನಿಯಮಿತ ಅಭ್ಯಾಸವು ಕೊರೊನಾ ನಂತರದ ಚೇತರಿಕೆಯ ನಂತರದ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ದೃಢಪಡಿಸಿದ್ದಾರೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ನಡೆಸಿದ ವಿವರವಾದ ಸಂಶೋಧನೆಯಲ್ಲಿ, ಪ್ರಾಣಾಯಾಮದ ಸಹಾಯದಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ಉಲ್ಲೇಖಿಸಲಾಗಿದೆ.

ಕೋವಿಡ್​ನಿಂದ ಚೇತರಿಸಿಕೊಂಡ ನಂತರವೂ ನಮ್ಮ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಯೋಗತಜ್ಞ ಡಾ. ಹೇಮಂತ್ ವಿವರಿಸುತ್ತಾರೆ. ಇದರ ಹೊರತಾಗಿ ಹಾರ್ಮೋನುಗಳ ಅಸಮತೋಲನದ ಜೊತೆಗೆ, ನಮ್ಮ ರೋಗ ನಿರೋಧಕ ಶಕ್ತಿಯೂ ದುರ್ಬಲಗೊಳ್ಳುತ್ತದೆ. ಇದು ನಮ್ಮ ದೇಹದ ಶಕ್ತಿಯ ಮೇಲೆ (ಪ್ರಾಣಿಕ್ ಶಕ್ತಿ) ಪರಿಣಾಮ ಬೀರುತ್ತದೆ.

ಈ ಸಂದರ್ಭದಲ್ಲಿ, ನಮ್ಮ ದೇಹವನ್ನು ಬಲಪಡಿಸುವಲ್ಲಿ, ನಮ್ಮ ಇಂದ್ರಿಯಗಳನ್ನು ಸಾಮಾನ್ಯಗೊಳಿಸುವಲ್ಲಿ ಮತ್ತು ನಮ್ಮ ಮನಸ್ಸನ್ನು ಶಾಂತಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ.

ಸಾಂಕ್ರಾಮಿಕವು ಜನರ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸಿತ್ತು. ಅವುಗಳಲ್ಲಿ ಬಹಳಷ್ಟು ಇನ್ನೂ ಒತ್ತಡ, ಭೀತಿ, ಆತಂಕ, ಭಯ, ನಿದ್ರಾಹೀನತೆ ಇತ್ಯಾದಿಗಳಿಂದ ಪ್ರಭಾವಿತವಾಗಿವೆ. ಇದಲ್ಲದೇ, ಕೋವಿಡ್​ನಿಂದ ಚೇತರಿಸಿಕೊಂಡ ನಂತರ ಜನರು ರಕ್ತದೊತ್ತಡ, ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿ, ಯೋಗ ಮತ್ತು ಯೋಗ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡಲು ಮತ್ತು ಚೇತರಿಕೆಯ ನಂತರದ ಸಮಸ್ಯೆಗಳನ್ನು ನಿವಾರಿಸಲು ಬಹಳ ಸಹಾಯಕವಾಗುತ್ತದೆ.

ಆಸನಗಳು - ಪ್ರಾಣಾಯಾಮಗಳ ಪ್ರಯೋಜನ:ಕೋವಿಡ್​ 19 ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಖಿನ್ನತೆಯ ಪ್ರಕರಣಗಳು ಸಾಕಷ್ಟು ಹೆಚ್ಚಾಗಿದೆ ಎಂದು ಡಾ. ಹೇಮಂತ್​ ಹೇಳಿದ್ದಾರೆ. ಈ ಪರಿಸ್ಥಿತಿಯಲ್ಲಿ ಕೋಪ, ನಿದ್ರಾಹೀನತೆ ಮತ್ತು ಇತರ ಮಾನಸಿಕ ಸಮಸ್ಯೆಗಳಿಗೆ ನಿಯಮಿತ ಧ್ಯಾನವು ಸಹಕಾರಿಯಾಗಿದೆ. ಇದಲ್ಲದೇ, ಭರ್ಮರಿ ಪ್ರಾಣಾಯಾಮ, ಬ್ರಹ್ಮ ಮುದ್ರಾ, ಮಾರ್ಜಾರಿ ಆಸನ, ಭುಜಂಗಾಸನ ಮತ್ತು ಸೇತುಬಂಧ ಆಸನ ಪ್ರಯೋಜನಕಾರಿ.

ಸೋಂಕಿನ ಹೊರತಾಗಿ, ಲಾಕ್‌ಡೌನ್ ಸಮಯದಲ್ಲಿ ಜಡ ಜೀವನಶೈಲಿ ಅನೇಕರಲ್ಲಿ ಸ್ಥೂಲಕಾಯತೆಗೆ ಕಾರಣವಾಗಿದೆ. ಇದು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಸರಿಯಾದ ಆಹಾರ ಪದ್ಧತಿಯೊಂದಿಗೆ ಸೂರ್ಯ ನಮಸ್ಕಾರ, ಪಶ್ಚಿಮೊತ್ತಾಸನ, ಅರ್ಧ ಮತ್ಸೇಂದ್ರಾಸನ, ಮಂಡೂಕಾಸನ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಆರೋಗ್ಯ ಸಮಸ್ಯೆ ನಿಯಂತ್ರಿಸಬಹುದು. ಅನುಲೋಮ್-ವಿಲೋಮ್ ಪ್ರಾಣಾಯಾಮ ನೆಗಡಿ ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ.

ಯಾವ ಆಸನ-ಪ್ರಾಣಾಯಾಮ ಅಭ್ಯಾಸ ಅಗತ್ಯ:ಡಾ. ಹೇಮಂತ್ ಶಿಫಾರಸು ಮಾಡಿದಂತೆ ಕೋವಿಡ್​ 19 ಚೇತರಿಕೆಯ ನಂತರ ನಿಯಮಿತವಾಗಿ ಅಭ್ಯಾಸ ಮಾಡಬಹುದಾದ ಕೆಲವು ಆಸನಗಳು ಮತ್ತು ಪ್ರಾಣಾಯಾಮಗಳು ಇಲ್ಲಿವೆ.

  • ಅನುಲೋಮ್ ವಿಲೋಮ್ ಪ್ರಾಣಾಯಾಮ:ಶಾಂತ ವಾತಾವರಣದಲ್ಲಿ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ. ಈಗ, ನಿಮ್ಮ ಬಲಗೈಯನ್ನು ನಿಮ್ಮ ಮೂಗಿಗೆ ತಂದು, ಬಲ ಮೂಗಿನ ಹೊಳ್ಳೆಯನ್ನು ನಿರ್ಬಂಧಿಸಿ ಮತ್ತು ನಿಮ್ಮ ಎಡ ಮೂಗಿನ ಹೊಳ್ಳೆಯಿಂದ ಉಸಿರಾಡಿ. ಈಗ ನಿಮ್ಮ ಎಡ ಮೂಗಿನ ಹೊಳ್ಳೆಯನ್ನು ನಿಮ್ಮ ಬೆರಳಿನಿಂದ ನಿರ್ಬಂಧಿಸಿ, ನಿಮ್ಮ ಬಲ ಮೂಗನ್ನು ತೆರೆಯಿರಿ ಮತ್ತು ಅದರ ಮೂಲಕ ಉಸಿರು ಬಿಡಿ. ಹೀಗೆ ಪುನಾರವರ್ತಿಸಿ. ನಿತ್ಯ ಬೆಳಗ್ಗೆ ಸುಮಾರು 5 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡಿ.
  • ಭಾಸ್ತಿಕ ಪ್ರಾಣಾಯಾಮ:ಚಾಪೆಯಲ್ಲಿ ಕಾಲಿನ ಮೇಲೆ ಅಥವಾ ಸುಖಾಸನದಲ್ಲಿ ಕುಳಿತು ಆಳವಾದ ಉಸಿರು ತೆಗೆದುಕೊಳ್ಳಿ. ಈಗ ಬಲದಿಂದ ಉಸಿರಾಡಿ, ನಿಮ್ಮ ಹೊಟ್ಟೆಯನ್ನು ಒಳಗೆ ಎಳೆಯಿರಿ. ಇದನ್ನು 3-5 ನಿಮಿಷಗಳ ಕಾಲ ಪುನರಾವರ್ತಿಸಿ. ನೀವು ಇದನ್ನು ನಿತ್ಯ ಎರಡು ಬಾರಿ ಮಾಡಬಹುದು.
  • ಬ್ರಹ್ಮ ಮುದ್ರ:ಸಿದ್ಧಾಸನ ಅಥವಾ ವಜ್ರಾಸನದಲ್ಲಿ ಕುಳಿತು ನಿಮ್ಮ ಕುತ್ತಿಗೆ ಮತ್ತು ಬೆನ್ನನ್ನು ನೇರವಾಗಿ ಇರಿಸಿ ಮತ್ತು ನಿಧಾನವಾಗಿ ನಿಮ್ಮ ಕುತ್ತಿಗೆಯನ್ನು ಬಲಕ್ಕೆ ಸರಿಸಿ. ಕೆಲವು ಸೆಕೆಂಡುಗಳ ಕಾಲ ಸ್ಥಾನವನ್ನು ಕಾಪಾಡಿಕೊಳ್ಳಿ.
  • ನಂತರ ನಿಮ್ಮ ಕುತ್ತಿಗೆಯನ್ನು ನಿಧಾನವಾಗಿ ಎಡಕ್ಕೆ ಸರಿಸಿ. ಮೂಲ ಸ್ಥಾನಕ್ಕೆ ಹಿಂತಿರುಗಿ. ನಂತರ ನಿಮ್ಮ ಕುತ್ತಿಗೆಯನ್ನು ಮೇಲಕ್ಕೆ ಮತ್ತು ನಂತರ ಕೆಳಕ್ಕೆ ಸರಿಸಿ. ಪ್ರತಿ ಬಾರಿ ಕೆಲವು ಸೆಕೆಂಡುಗಳ ಕಾಲ ಪುನಾರವರ್ತಿಸಿ. ಮತ್ತೆ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ ಮತ್ತು ಈಗ ನಿಮ್ಮ ಕುತ್ತಿಗೆಯನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿ ನಂತರ ಆಂಟಿಲಾಕ್‌ವೈಸ್‌ನಲ್ಲಿ ತಿರುಗಿಸಿ. ಒಂದು ಚಕ್ರ ಇಲ್ಲಿ ಪೂರ್ಣಗೊ್ಳುತ್ತದೆ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು 4-5 ಚಕ್ರಗಂಳಂತೆ ಪುನರಾವರ್ತಿಸಬಹುದು.
  • ಮಾರ್ಜರಿಯಾಸನ:ನಿಮ್ಮ ಕೈ ಮತ್ತು ಮೊಣಕಾಲುಗಳನ್ನು ಟೇಬಲ್ ಭಂಗಿಯಲ್ಲಿ ನೆಲದ ಮೇಲೆ ಇರಿಸಿ. ನೀವು ಉಸಿರಾಡುವಾಗ, ನಿಮ್ಮ ಗಲ್ಲವನ್ನು ಮೇಲಕ್ಕೆತ್ತಿ. ನಿಮ್ಮ ತಲೆಯನ್ನು ಹಿಂದಕ್ಕೆ ತಿರುಗಿಸಿ. ನಿಮ್ಮ ಹೊಕ್ಕುಳನ್ನು ಕೆಳಕ್ಕೆ ತಳ್ಳಿರಿ. ನೀವು ಉಸಿರಾಡುವಾಗ ನಿಮ್ಮ ಗಲ್ಲವನ್ನು ಕೆಳಕ್ಕೆ ಇಳಿಸಿ. ಕಮಾನು ರೂಪಿಸಲು ನಿಮ್ಮ ಬೆನ್ನನ್ನು ಮೇಲಕ್ಕೆ ಸರಿಸಿ ಮತ್ತು ನಿಮ್ಮ ಪೃಷ್ಠವನ್ನು ವಿಶ್ರಾಂತಿ ಮಾಡಿ. ಎರಡೂ ಭಂಗಿಗಳನ್ನು ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಇದನ್ನು 5-6 ಬಾರಿ ಪುನರಾವರ್ತಿಸಿ.
  • ಭುಜಂಗಾಸನ:ಮೊದಲು ನಿಧಾನವಾಗಿ ಹೊಟ್ಟೆಯ ಮೇಲೆ ಮಲಗಿ. ಈಗ ಎರಡು ಹಸ್ತಗಳನ್ನು ಪಕ್ಕೆಲುಬಿನ ಪಕ್ಕದಲ್ಲಿ ಊರಿ ನೆಲಕ್ಕೆ ಒತ್ತಿ. ಕಾಲ್ಬೆರಳುಗಳನ್ನು ಹಿಂದೆ ಚಾಚಿ. ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗ ಮೇಲಕ್ಕೆ ಬಂದಿರಬೇಕು. ದೃಷ್ಟಿ ಮೇಲೆ, ಎರಡು ಭುಜಗಳು ಹಿಂದಕ್ಕೆ, ಎರಡು ಮೊಣಕೈಗಳ ಮಧ್ಯದಲ್ಲಿ ನಾಭಿಯ ಭಾಗ ಬಂದಿರಬೇಕು. ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಬೇಕು. ಹಾಗೆ ಉಸಿರನ್ನು ಹೊರಹಾಕುತ್ತ ಪೂರ್ತಿ ಕೆಳಗೆ ಬರಬೇಕು. ಹಣೆಯನ್ನು ನೆಲಕ್ಕೆ ತಾಗಿಸಿ ವಿಶ್ರಾಂತಿಯನ್ನು ಮಾಡಬೇಕು. ಇದನ್ನು 15-30 ಸೆಕೆಂಡುಗಳ ಕಾಲ ಮಾಡಿ.

ಡಾ. ಹೇಮಂತ್ ಅವರು ಯೋಗದಲ್ಲಿ ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಯೋಜನವಾಗುತ್ತದೆ ಎಂದಿದ್ದಾರೆ. ಮುಖ್ಯವಾಗಿ ಯೋಗವನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ತಜ್ಞರ ಮೇಲ್ವಿಚಾರಣೆಯಲ್ಲಿ ಯೋಗಾಭ್ಯಾಸ ಮಾಡಬೇಕು ಏಕೆಂದರೆ ತಪ್ಪಾಗಿ ಮಾಡಿದರೆ ಅದು ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು drhemantyoga@gmail.comನಲ್ಲಿ ಇಮೇಲ್ ಮೂಲಕ ಸಂಪರ್ಕಿಸಬಹುದು.

ABOUT THE AUTHOR

...view details