ಕರ್ನಾಟಕ

karnataka

ETV Bharat / bharat

ಭಾರತೀಯ ರೂಪಾಯಿಯಲ್ಲಿಯೇ ಅಂತಾರಾಷ್ಟ್ರೀಯ ವ್ಯಾಪಾರ: ಸಚಿವ ಗೋಯಲ್ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಭಾರತದೊಂದಿಗೆ ವಿಶ್ವದ ಹಲವಾರು ರಾಷ್ಟ್ರಗಳು ಇನ್ನು ಮುಂದೆ ಡಾಲರ್ ಬದಲಾಗಿ ಭಾರತೀಯ ರೂಪಾಯಿಯಲ್ಲಿಯೇ ಅಂತಾರಾಷ್ಟ್ರೀಯ ವ್ಯವಹಾರ ನಡೆಸಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

International Trade in Rupees
International Trade in Rupees

By

Published : Apr 23, 2023, 1:47 PM IST

ನವದೆಹಲಿ : ವಿವಿಧ ದೇಶಗಳ ಹಲವಾರು ಬ್ಯಾಂಕ್‌ಗಳು ಭಾರತೀಯ ಬ್ಯಾಂಕ್‌ಗಳಲ್ಲಿ ವಿಶೇಷ ವೋಸ್ಟ್ರೋ ಖಾತೆಗಳನ್ನು ತೆರೆಯುತ್ತಿರುವುದರಿಂದ ವ್ಯಾಪಾರಿಗಳು ಶೀಘ್ರದಲ್ಲೇ ರೂಪಾಯಿ ಕರೆನ್ಸಿಯಲ್ಲಿ ವಿದೇಶಿ ವ್ಯಾಪಾರ ಮಾಡಲು ಸಾಧ್ಯವಾಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ಭರವಸೆ ವ್ಯಕ್ತಪಡಿಸಿದ್ದಾರೆ. ಯುಕೆ, ಸಿಂಗಾಪುರ್ ಮತ್ತು ನ್ಯೂಜಿಲ್ಯಾಂಡ್​ ಸೇರಿದಂತೆ 18 ದೇಶಗಳ ಕರೆಸ್ಪಾಂಡೆಂಟ್ ಬ್ಯಾಂಕ್‌ಗಳ ವಿಶೇಷ ರೂಪಾಯಿ ವೋಸ್ಟ್ರೋ ಖಾತೆಗಳನ್ನು (ಎಸ್‌ಆರ್‌ವಿಎ) ತೆರೆಯುವ 60 ಮನವಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅನುಮೋದಿಸಿರುವುದು ಇಲ್ಲಿ ಗಮನಾರ್ಹ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಕುರಿತು ವಿವಿಧ ರಾಷ್ಟ್ರಗಳಲ್ಲಿನ ತನ್ನ ಸಹವರ್ತಿಗಳೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ಗೋಯಲ್ ಹೇಳಿದರು. ನಾವು ಶೀಘ್ರದಲ್ಲೇ ಹಲವಾರು ದೇಶಗಳೊಂದಿಗೆ ರೂಪಾಯಿ ಬಳಸಿ ಅಂತಾರಾಷ್ಟ್ರೀಯ ವ್ಯಾಪಾರ ಆರಂಭಿಸಲಿದ್ದೇವೆ. ಯುರೋಪಿಯನ್ ಯೂನಿಯನ್, ಯುಕೆ ಮತ್ತು ಕೆನಡಾದಂಥ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ (ಎಫ್‌ಟಿಎ) ಮಾತುಕತೆಗಳು ನಿರ್ಣಾಯಕ ಹಂತಗಳಲ್ಲಿವೆ ಎಂದು ಗೋಯಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ ಫ್ರೀ ಟ್ರೇಡ್ ಅಗ್ರಿಮೆಂಟ್ (EFTA), ಗಲ್ಫ್ ಸಹಕಾರ ಮಂಡಳಿ (GCC) ಮತ್ತು ಯುರೇಷಿಯನ್ ಎಕನಾಮಿಕ್ ಯೂನಿಯನ್ (EAEU) ಸೇರಿದಂತೆ ದೇಶಗಳ ಒಕ್ಕೂಟಗಳು ಸಹ ಭಾರತದೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಮಾತುಕತೆ ಪ್ರಾರಂಭಿಸಲು ಉತ್ಸುಕವಾಗಿವೆ. ಈ ಬಗ್ಗೆ ಮಾತನಾಡಿದ ಸಚಿವ ಗೋಯಲ್, ಇಡೀ ಜಗತ್ತು ಭಾರತದೊಂದಿಗೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿವೆ ಎಂದರು.

ಜವಳಿ ವಲಯಕ್ಕೆ ಉತ್ಪಾದನೆ ಆಧರಿತ ಪ್ರೋತ್ಸಾಹ ಯೋಜನೆಯ ಎರಡನೇ ಹಂತದ ಕುರಿತು ಮಾತನಾಡಿದ ಅವರು, ಈ ವಿಷಯದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ ಎಂದು ಹೇಳಿದರು. ಶೀಘ್ರದಲ್ಲೇ ನಾವು ಈ ಯೋಜನೆಯ ರೂಪುರೇಷೆಗಳನ್ನು ಅಂತಿಮಗೊಳಿಸಲು ಮತ್ತು ಅದನ್ನು ಉನ್ನತ ಮಟ್ಟದಲ್ಲಿ ಅನುಮೋದನೆಗೆ ತೆಗೆದುಕೊಳ್ಳಲು ಸಾಧ್ಯವಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

19ನೇ ದೇಶ ಬಾಂಗ್ಲಾದೇಶ: ಬಾಂಗ್ಲಾದೇಶ ಕೂಡ ಭಾರತದೊಂದಿಗೆ ರೂಪಾಯಿಯಲ್ಲಿಯೇ ದ್ವಿಪಕ್ಷೀಯ ವ್ಯಾಪಾರ ಆರಂಭಿಸಿದೆ. ಈ ಮೂಲಕ ಬಾಂಗ್ಲಾದೇಶವು ಭಾರತದೊಂದಿಗೆ ರೂಪಾಯಿಯಲ್ಲಿ ವ್ಯವಹಾರ ಮಾಡುತ್ತಿರುವ 19ನೇ ದೇಶವಾಗಿದೆ. ಎರಡೂ ದೇಶಗಳು ಡಾಲರ್ ಬದಲಾಗಿ ರೂಪಾಯಿಯಲ್ಲಿಯೇ ದ್ವಿಪಕ್ಷೀಯ ವ್ಯಾಪಾರ ನಡೆಸಲು ಕಳೆದ ಹಲವಾರು ತಿಂಗಳುಗಳಿಂದ ಮಾತುಕತೆ ನಡೆಸುತ್ತಿದ್ದವು.

ರೂಪಾಯಿಯಲ್ಲಿ ವಹಿವಾಟು ನಡೆಸಲು ಬಾಂಗ್ಲಾದೇಶದ ಎರಡು ಬ್ಯಾಂಕ್​ಗಳಾದ ಸೋನಾಲಿ ಬ್ಯಾಂಕ್ ಮತ್ತು ಈಸ್ಟರ್ನ್ ಬ್ಯಾಂಕ್ ಲಿಮಿಟೆಡ್ (EBL) ಇವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ICICI ಬ್ಯಾಂಕ್‌ನಲ್ಲಿ vostro ಖಾತೆಗಳನ್ನು ತೆರೆದಿವೆ. ಇದೇ ರೀತಿಯ ಖಾತೆಗಳನ್ನು ಈ ಎರಡು ಭಾರತೀಯ ಬ್ಯಾಂಕ್‌ಗಳು ಆ ಎರಡು ಬಾಂಗ್ಲಾದೇಶದ ಬ್ಯಾಂಕ್‌ಗಳಲ್ಲಿ ತೆರೆಯುತ್ತವೆ. ಎರಡೂ ದೇಶಗಳ ನಡುವಿನ ವಹಿವಾಟು ಯಾವುದೇ ಮೂರನೇ ದೇಶದ ಕರೆನ್ಸಿಯ ಹಸ್ತಕ್ಷೇಪ ಇರದೇ ಟಾಕಾ ಮತ್ತು ರೂಪಾಯಿಗಳಲ್ಲಿ ನಡೆಯುತ್ತದೆ.

ಇದನ್ನೂ ಓದಿ : ಸುಡಾನ್​ನಲ್ಲಿನ ಅಮೆರಿಕ ರಾಯಭಾರ ಕಚೇರಿ ಬಂದ್: ತಾಯ್ನಾಡಿಗೆ ಮರಳಿದ ಸಿಬ್ಬಂದಿ

ABOUT THE AUTHOR

...view details