ರೋಗಿಗಳಿಗೆ ಸೇವೆ ಸಲ್ಲಿಸಲು ಮತ್ತು ಚಿಕಿತ್ಸೆ ನೀಡಲು ವೈದ್ಯರೊಂದಿಗೆ ಹಗಲು ರಾತ್ರಿ ಕೆಲಸ ಮಾಡುವ ನರ್ಸ್ಗಳಿಗೆ ಧನ್ಯವಾದ ಹೇಳುವುದನ್ನು ನಾವು ಆಗಾಗ್ಗೆ ಮರೆಯುತ್ತೇವೆ. ಕೋವಿಡ್ ಸಾಂಕ್ರಾಮಿಕ ಕಾಯಿಲೆಯ ಪ್ರಪಾತದಲ್ಲಿ ಮುಳುಗುತ್ತಿರುವ ದೇಶವನ್ನು ಹೊರತೆಗೆಯಲು ಈ ನರ್ಸ್ಗಳು ಶ್ರಮಿಸುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ನರ್ಸ್ ದಿನ ಹಿನ್ನೆಲೆ ಅವರಿಗೆ ಕೃತಜ್ಞತೆ ಸಲ್ಲಿಸೋಣ.
ನರ್ಸ್ಗಳು: ನಿಜವಾದ ಫ್ರಂಟ್ಲೈನ್ ವಾರಿಯರ್ಸ್:
ಸಾಮಾನ್ಯವಾಗಿ, ರೋಗಿಯ ಚಿಕಿತ್ಸೆ ವಿಚಾರದಲ್ಲಿ ವೈದ್ಯರಿಗೆ ಮನ್ನಣೆ ಹೆಚ್ಚು. ಹಾಗಾಗಿ ನರ್ಸ್ಗಳನ್ನ ಹೆಚ್ಚಾಗಿ ಪಕ್ಕಕ್ಕೆ ಸರಿಸಲಾಗುತ್ತದೆ. ಇದು ಸಮರ್ಥನೀಯವಲ್ಲ. ಏಕೆಂದರೆ ವೈದ್ಯರು ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಆದರೆ, ನರ್ಸ್ಗಳು ರೋಗಿಗೆ 24x7 ರೋಗಿಗಳ ಜತೆ ಇದ್ದು, ಅವರ ಸೇವೆ ಮಾಡುತ್ತಾರೆ. ಆದ್ದರಿಂದ, ಅವರನ್ನು ಗೌರವಿಸಲು, ಇಂಟರ್ನ್ಯಾಷನಲ್ ನರ್ಸ್ ದಿನಾಚರಣೆಯನ್ನು ಪ್ರತಿವರ್ಷ ಮೇ 12 ರಂದು ಆಚರಿಸಲಾಗುತ್ತದೆ, ಇದು ಆಧುನಿಕ ಶುಶ್ರೂಷೆಯ ಸ್ಥಾಪಕರೆಂದು ಕರೆಯಲ್ಪಡುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನಾಂಕ. ಕ್ರಿಮಿಯಾ ಯುದ್ಧದ ಸಮಯದಲ್ಲಿ ನರ್ಸ್ಗಳ ವ್ಯವಸ್ಥಾಪಕ ಮತ್ತು ತರಬೇತುದಾರನಾಗಿ ನೀಡಿದ ಕೊಡುಗೆಯಿಂದ ನೈಟಿಂಗೇಲ್ ಹೆಚ್ಚು ಖ್ಯಾತಿ ಗಳಿಸಿದ್ರು.
ಈ ವರ್ಷದ ಅಂತಾರಾಷ್ಟ್ರೀಯ ನರ್ಸ್ ದಿನದ ಥಿಮ್, ‘ಎ ವಾಯ್ಸ್ ಟು ಲೀಡ್ - ಭವಿಷ್ಯದ ಆರೋಗ್ಯ ರಕ್ಷಣೆಗಾಗಿ ಒಂದು ದೃಷ್ಟಿ’ ಎಂಬ ವಿಷಯದೊಂದಿಗೆ ಆಚರಿಸಲ್ಪಡುತ್ತಿದೆ. ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ಹೇಳುವಂತೆ, 2021, ನರ್ಸ್ಗಳ ಭವಿಷ್ಯವನ್ನು ಹೇಗೆ ನೋಡುತ್ತದೆ ಮತ್ತು ಅವರ ವೃತ್ತಿಯು ಆರೋಗ್ಯದ ಮುಂದಿನ ಹಂತವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ತೋರಿಸಲು ನಾವು ಪ್ರಯತ್ನಿಸಲಾಗ್ತಿದೆ.
ನರ್ಸಿಂಗ್ ಕುರಿತು ಅರ್ಥೈಸಿಕೊಳ್ಳುವುದು:
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), “ನರ್ಸಿಂಗ್ ಎಲ್ಲ ವಯಸ್ಸಿನ ವ್ಯಕ್ತಿಗಳು, ಕುಟುಂಬಗಳು, ಗುಂಪುಗಳು ಮತ್ತು ಸಮುದಾಯಗಳ ಅನಾರೋಗ್ಯ ಅಥವಾ ಎಲ್ಲ ಸ್ವಾಯತ್ತ ಮತ್ತು ಸಹಕಾರಿ ಆರೈಕೆಯನ್ನು ಒಳಗೊಂಡಿದೆ. ಇದು ಆರೋಗ್ಯದ ಉತ್ತೇಜನ, ಅನಾರೋಗ್ಯದ ತಡೆಗಟ್ಟುವಿಕೆ ಮತ್ತು ಅನಾರೋಗ್ಯ, ಅಂಗವಿಕಲ ಮತ್ತು ಸಾಯುತ್ತಿರುವ ಜನರ ಆರೈಕೆಯನ್ನು ಒಳಗೊಂಡಿದೆ. ಆರೋಗ್ಯ ರಕ್ಷಣೆಯಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆರೋಗ್ಯ ತುರ್ತುಸ್ಥಿತಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ರೋಗ ತಡೆಗಟ್ಟುವಿಕೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವುದು ಮತ್ತು ಪ್ರಚಾರ, ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪುನರ್ವಸತಿ ಸೇರಿದಂತೆ ಪ್ರಾಥಮಿಕ ಆರೋಗ್ಯ ರಕ್ಷಣೆಯ ವಿತರಣೆಯಲ್ಲಿ ಅವರು ಮೊದಲಿಗರು ಎಂದು ಹೇಳುತ್ತದೆ.