ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ವಲಸಿಗ ದಿನ 2023: ಸುರಕ್ಷಿತ ವಲಸೆ ಉತ್ತೇಜಿಸುವುದು ಇದರ ಮುಖ್ಯ ಧ್ಯೇಯ - ಈಟಿವಿ ಭಾರತ್​ ಕನ್ನಡ

ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಹಕ್ಕುಗಳನ್ನು ರಕ್ಷಿಸುವ ಅಂತಾರಾಷ್ಟ್ರೀಯ ಸಮಾವೇಶದ ಅಳವಡಿಕೆಯ ದಿನದ ಇತಿಹಾಸವನ್ನು ಈ ದಿನ ಹೊಂದಿದೆ.

international-migrants-day-2023-history-theme-significance-objective-who-are-migrants
international-migrants-day-2023-history-theme-significance-objective-who-are-migrants

By ETV Bharat Karnataka Team

Published : Dec 18, 2023, 4:07 PM IST

ಹೈದರಾಬಾದ್​: ಅಂತಾರಾಷ್ಟ್ರೀಯ ವಲಸೆ ದಿನವನ್ನು ಪ್ರತಿ ವರ್ಷ ಡಿಸೆಂಬರ್​ 18ರಂದು ಆಚರಿಸಲಾಗುವುದು. ಜಾಗತಿಕ ವಲಸೆ ಜನಸಂಖ್ಯೆ ಬೆಳವಣಿಗೆ ಅಂಗೀಕರಿಸಿ, 2000ನೇ ಇಸವಿಯ ಡಿಸೆಂಬರ್​ 4 ರಂದು ಈ ದಿನಾಚರಣೆ ವಿಶ್ವಸಂಸ್ಥೆ ಮುಂದಾಯಿತು.

ಇತಿಹಾಸ: 1990ರ ಡಿಸೆಂಬರ್​ 18ರ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಹಕ್ಕುಗಳನ್ನು ರಕ್ಷಿಸುವ ಅಂತಾರಾಷ್ಟ್ರೀಯ ಸಮಾವೇಶದ ಅಳವಡಿಕೆಯ ದಿನದ ಇತಿಹಾಸವನ್ನು ಈ ದಿನ ಹೊಂದಿದೆ.

ಉದ್ದೇಶ: ವಲಸಿಗರಿಗೆ ರಾಜಕೀಯ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಮಾಹಿತಿ ಹರಡುವ ಉದ್ದೇಶದಿಂದ ಸಮುದಾಯಗಳು, ಅಂತರ್​ ಸರ್ಕಾರ ಮಂಡಳಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಜಾಗತಿಕವಾಗಿ ಈ ದಿವನ್ನು ಆಚರಿಸುತ್ತದೆ. ಈ ಪ್ರಯತ್ನದ ಮೂಲಕ ವಲಸಿಗರ ಯೋಗಕ್ಷೇಮ ಮತ್ತು ಅವರ ಸುರಕ್ಷೆ ಕಾಪಾಡುವ ಉದ್ದೇಶವನ್ನು ಇದು ಹೊಂದಿದೆ.

2023 ಧ್ಯೇಯ: ಅಂತಾರಾಷ್ಟ್ರೀಯ ವಲಸಿಗ ದಿನ 2023ರ ಧ್ಯೇಹ ವಾಕ್ಯವೂ ಸುರಕ್ಷಿತ ವಲಸೆಯ ಉತ್ತೇಜನದ ಧ್ಯೇಯವನ್ನು ಹೊಂದಿದೆ. ವಿಶ್ವ ಸಂಸ್ಥೆಯು ಎಲ್ಲ ವಲಸಿಗರ ಮಾನವ ಹಕ್ಕು ಕಾನೂನು ಸ್ಥಿತಿಗತಿಯ ಹೊರತಾಗಿ ದೇಶಗಳ ಗ್ಯಾರಂಟಿಗಳ ಬದ್ಧತೆಯನ್ನು ಪ್ರೋತ್ಸಾಯಿಸುತ್ತದೆ. ಈ ಮೂಲಕ ವಲಸಿಗ ಕಾರ್ಮಿಕರ ಮೇಲೆ ನಡೆಯುವ ಅಪರಾಧಿ ದೌರ್ಜನ್ಯ ತಡೆಯುವುದಾಗಿದೆ.

ಯಾರಿದು ವಲಸಿಗರು?: ವಲಸೆ ಎಂಬುದು ಒಂದು ದೇಶದಿಂದ ಮತ್ತೊಂದು ದೇಶ, ಸ್ಥಳ ಅಥವಾ ಪ್ರದೇಶದಲ್ಲಿ ಉತ್ತಮ ಜೀವನೋಪಾಯ ಅವಕಾಶ ಹುಡುಕಿಕೊಂಡು ಹೋಗಿ ವಾಸ್ತವ್ಯ ಹೂಡುವುದಾಗಿದೆ. ವಲಸೆ ಎಂಬುದು ವಿಶ್ವದ ನಿರ್ಮಾಣದಲ್ಲಿ ಮಾನವ ಇತಿಹಾಸದಲ್ಲಿ ಮುಂದುವರೆದ ಅಧ್ಯಯನವಾಗಿದೆ. ಉತ್ತಮ ಅವಕಾಶ, ಘರ್ಷಣೆ, ಹಿಂಸೆ, ಹವಾಮಾನ ಬದಲಾವಣೆ ಮತ್ತು ಪರಿಸರ ಹದಗೆಡುವಿಕೆಯಿಂದ ಪಾರಾಗಲು ಒಂದು ಪ್ರದೇಶವನ್ನು ತೊರೆದು ಮತ್ತೊಂದು ಪ್ರದೇಶಕ್ಕೆ ಹೋಗುವುದಾಗಿದೆ.

ವಲಸಿಗರು ಏನು ಮಾಡುತ್ತಾರೆ?: ವಲಸಿಗರು ವಿಭಿನ್ನ ಕೌಶಲ್ಯವನ್ನು ತರುವ ಮೂಲಕ ದೇಶ ಮತ್ತು ಸಮುದಾದಯವನ್ನು ಸಮೃದ್ಧಗೊಳಿಸುತ್ತಾರೆ. ಇವರು ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಬದಲಾವಣೆಗೆ ಕೊಡುಗೆ ನೀಡುತ್ತಾರೆ. ಅವರ ಮೌಲ್ಯಯುತ ಕೊಡುಗೆಯು ಸಮಾಜದ ಒಟ್ಟಾರೆ ಆರೋಗ್ಯ ಮತ್ತು ಸಮಾಜಕ್ಕೆ ಕೊಡುಗೆ ನೀಡುತ್ತದೆ

ವಲಸಿಗರ ಯೋಗಕ್ಷೇಮ: ವಲಸಿಗರ ಸಂಪೂರ್ಣ ಸಾಮರ್ಥ್ಯ ದಿಂದ ಜಾಗತಿಕ ಬದಲಾವಣೆ ಸಾಧ್ಯ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಾಧಾನ್ಯತೆ ನೀಡಬೇಕಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ನಿಟ್ಟಿನಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಲಹೆ ನೀಡಿದೆ. ಅವರಿಗೆ ಸಮಗ್ರ ಮತ್ತು ಅವರನ್ನೊಳಗೊಂಡ ಆರೋಗ್ಯ ವ್ಯವಸ್ಥೆ ನೀಡುವುದು. ಅವರು ವಲಸೆಗೆ ಪ್ರಮುಖ ಕಾರಣ ಹುಡುಕುವುದು.

ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರ: ಡಬ್ಲ್ಯೂಎಚ್​ಒ ತಮ್ಮ ಆರೋಗ್ಯ ಮತ್ತು ವಲಸೆ ವಿಭಾಗದ ಮೂಲಕ ಅವರ, ರೂಢಿಗಳು, ಮಾನದಂಡಗಳು, ಮಾರ್ಗದರ್ಶನ ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ಸಂಪನ್ಮೂಲಗಳು ನಿರಾಶ್ರಿತರು ಮತ್ತು ವಲಸಿಗರ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಿಕ ಅಗತ್ಯಗಳಿಗೆ ಹೊಂದಿಕೆಯಾಗುವ ಅಂತರ್ಗತ ಮತ್ತು ಗೌರವಾನ್ವಿತ ಆರೋಗ್ಯ ಸೇವೆಗಳನ್ನು ಒದಗಿಸಲು ದೇಶಗಳ ಸಾಮರ್ಥ್ಯ ಬಲಪಡಿಸುತ್ತದೆ. ರಾಷ್ಟ್ರೀಯ ಆರೋಗ್ಯ ನೀತಿ ತಂತ್ರಗಳು ಮತ್ತು ಪ್ರಾದೇಶಿಕ ಕ್ರಿಯಾ ಯೋಜನೆಗಳ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಅನುಕೂಲವಾಗುವಂತೆ ತಾಂತ್ರಿಕ ನೆರವು, ಪ್ರತಿಕ್ರಿಯೆ ಮತ್ತು ಸಾಮರ್ಥ್ಯ ವರ್ಧನೆಯ ಬೆಂಬಲವನ್ನು ನೀಡಲಾಗುತ್ತದೆ

ವಲಸಿಗ ಜನಸಂಖ್ಯೆಯ ಆರೋಗ್ಯ ಮಾಹಿತಿ ಸಂಗ್ರಹಿಸುವುದರ ಸವಾಲಿನ ಹೊರತಾಗಿ ಜಾಗತಿಕ ಸಾಕ್ಷ್ಯದ ಮೇಲೆ ಡಬ್ಲ್ಯೂಎಚ್​ಒ ವಲಸಿಗರು ಮತ್ತು ನಿರಾಶ್ರಿತರ ಆರೋಗ್ಯ ಸ್ಥಿತಿಯ ಕ್ರಿಯೆಯನ್ನು ರೂಢಿಸುತ್ತದೆ.

ಇದನ್ನೂ ಓದಿ: ವಾಯುಸೇನೆಗೆ 'ಸಮರ್'​ ಶಕ್ತಿ: ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿ

ABOUT THE AUTHOR

...view details