ಕರ್ನಾಟಕ

karnataka

ETV Bharat / bharat

ಅಂತಾರಾಷ್ಟ್ರೀಯ ಪುರುಷರ ದಿನ; 'ಶೂನ್ಯದರದ ಪುರುಷರ ಆತ್ಮಹತ್ಯೆ' ಥೀಮ್​ - ಈಟಿವಿ ಭಾರತ ಕನ್ನಡ

November 19, International Men's day: ಅಂತಾರಾಷ್ಟ್ರೀಯ ಪುರುಷರ ದಿನದ ಉದ್ದೇಶ, ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

International mens day 2023
International Men's day: ಅಂತಾರಾಷ್ಟ್ರೀಯ ಪುರುಷರ ದಿನದ ಮಹತ್ವ, ಇತಿಹಾಸ ತಿಳಿಯಿರಿ..

By ETV Bharat Karnataka Team

Published : Nov 19, 2023, 5:44 PM IST

ನವದೆಹಲಿ: ಇಂದು ನವೆಂಬರ್ 19 ಅಂತಾರಾಷ್ಟ್ರೀಯ ಪುರುಷರ ದಿನ. ವಿಶ್ವದೆಲ್ಲೆಡೆ ಈ ದಿನವನ್ನು ಆಚರಿಸಲಾಗುತ್ತಿದೆ. ಒಬ್ಬ ತಂದೆಯಾಗಿ, ಸಹೋದರನಾಗಿ, ಚಿಕ್ಕಪ್ಪ-ದೊಡ್ಡಪ್ಪ, ಮಾವ, ಗಂಡ ಅಥವಾ ಸ್ನೇಹಿತನಾಗಿ ಪುರುಷರು ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾರೆ. ಅವರಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ.

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಮುಖ್ಯ ಉದ್ದೇಶ ಎಂದರೆ, ಪುರುಷರು ಹಾಗೂ ಯುವಕರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಪುರಷತ್ವವನ್ನು ಜಗತ್ತಿಗೆ ತೋರುವ ಸಕಾರಾತ್ಮಕ ಮೌಲ್ಯ ಸಾಕಾರಗೊಳಿಸುವುದೇ ಆಗಿದೆ. ಹೀಗಾಗಿ ಈ ವರ್ಷದ ಪುರುಷರ ದಿನವನ್ನು 'ಶೂನ್ಯದರದ ಪುರುಷರ ಆತ್ಮಹತ್ಯೆ' ಎಂಬ ಥೀಮ್​ನಡಿ ಜಾಗತಿಕವಾಗಿ ಪುರುಷರ ಆತ್ಮಹತ್ಯೆಯನ್ನು ಕೊನೆಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ.

ಪುರುಷರ ದಿನ ಹುಟ್ಟಿಕೊಂಡಿದ್ದು ಹೇಗೆ..?:1992ರಲ್ಲಿ ಥಾಮಸ್ ಓಸ್ಟರ್ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆರಂಭಿಸಿದರು. ಆದರೆ 1999ರಲ್ಲಿ ಅದರ ಪ್ರಾಮುಖ್ಯತೆಯ ದಿನವನ್ನು ಟ್ರಿನಿಡಾಟ್​ ಮತ್ತು ಟೊಬಾಗೋದಲ್ಲಿ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ. ಜೆರೋಮ್ ಟೆಲುಕ್ಸಿಂಗ್ ಅವರು ಪುನರುಜ್ಜೀವಗೊಳಿಸಿದರು.

ಡಾ. ಜೆರೋಮ್ ಟೆಲುಕ್ಸಿಂಗ್ ಅವರ ತಂದೆಯ ಹುಟ್ಟುಹಬ್ಬವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಅಲ್ಲದೇ ದಶಕದ ಹಿಂದೆ ಇದೇ ದಿನದಂದು ಟ್ರಿನಿಡಾಟ್​ ಹಾಗೂ ಟೊಬಾಗೋ ದೇಶದ ಫುಟ್ಬಾಲ್​ ತಂಡವು ವಿಶ್ವಕಪ್ ಆಡುವಲ್ಲಿ ಅರ್ಹತೆ ಪಡೆದುಕೊಂಡಿತ್ತು.

ಪುರುಷರ ದಿನ ಎಂದರೆ ಲಿಂಗತ್ವ ದಿನವನ್ನಾಗಿ ಆಚರಿಸುವ ಬದಲು, ಡಾ. ಟೀಲುಕ್ಸಿಂಗ್ ಅವರು ವಿಶ್ವದಾದ್ಯಂತ ಪುರುಷರು ಮತ್ತು ಹುಡುಗರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪ್ರತಿಬಿಂಬಿಸುವ ದಿನವಾಗಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಪ್ರಚಾರ ಮಾಡಿದರು. ಪ್ರತಿ ವರ್ಷ ನವೆಂಬರ್ 19 ಅನ್ನು ಅವರು ಮೂವೆಂಬರ್‌ ಎಂದು ಕರೆದರು. ಅಲ್ಲಿ ಪುರುಷರು ಅಥವಾ ಮೊ ಬ್ರದರ್ಸ್ ತಲೆ ಕೂದಲು ಮತ್ತು ಗಡ್ಡ ಮೀಸೆಯನ್ನು ತೆಗೆಸದೇ ಪುರುಷರ ಆರೋಗ್ಯಕ್ಕಾಗಿ ಹಣವನ್ನು ಸಂಗ್ರಹಿಸಲು ಮುಂದಾಗುತ್ತಾರೆ.

2007ರಲ್ಲಿ ಭಾರತವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಜಗತ್ತಿನಾದ್ಯಂತ ಪುರುಷರಿಗೆ ಸಮರ್ಪಿಸಲಾಗಿದೆ.

ಲಿಂಗ ಸಮಾನತೆಯ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನದ ಪ್ರಾಮುಖ್ಯತೆ ಏನೆಂದರೆ, ಸಮಾಜ, ಸಮುದಾಯ, ಕುಟುಂಬ, ಶಿಶುಪಾಲನಾ ಮತ್ತು ಪರಿಸರಕ್ಕೆ ಪುರುಷರ ಸಕಾರಾತ್ಮಕ ಕೊಡುಗೆಯನ್ನು ನೆನಪಿಸಿಕೊಳ್ಳುವುದು. ಪುರುಷರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಲು ಸಾಮಾಜಿಕ, ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಎಲ್ಲ ಅಂಶಗಳನ್ನು ಈ ದಿನ ಒಳಗೊಂಡಿದೆ. ಪುರುಷರ ವಿರುದ್ಧದ ತಾರತಮ್ಯ ಎತ್ತಿ ತೋರಿಸುವುದು. ಲಿಂಗ ಸಂಬಂಧಗಳನ್ನು ಸುಧಾರಿಸಲು ಮತ್ತು ಲಿಂಗ ಸಮಾನತೆ ಉತ್ತೇಜಿಸಲು ಆಚರಣೆ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಪುರುಷರ ಆತ್ಮಹತ್ಯೆ ಪ್ರಮಾಣವೆಷ್ಟು?:2023ರಆಗಸ್ಟ್​ ತಿಂಗಳ ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್‌ನ ವರದಿಯ ಪ್ರಕಾರ ಭಾರತದಲ್ಲಿ ಪುರುಷರ ಆತ್ಮಹತ್ಯೆಯನ್ನು ಪ್ರಮಾಣದ ಬಗ್ಗೆ ಹೇಳಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಪುರುಷರ ಆತ್ಮಹತ್ಯೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2014ರಲ್ಲಿ ಪುರುಷರ ಆತ್ಮಹತ್ಯೆ ಸಂಖ್ಯೆ 89,129ರಷ್ಟಿತ್ತು. ಇದು 2021ರಲ್ಲಿ 1,18,979ಕ್ಕೆ ಏರಿತು. 2014ರಲ್ಲಿ 4,521 ಮತ್ತು 2021ರಲ್ಲಿ 45,026 ಮಂದಿ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮಹಿಳೆಯರಿಗಿಂತ ಪುರುಷರ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ.

ಇದನ್ನೂ ಓದಿ:ರಾಷ್ಟ್ರೀಯ ಪತ್ರಿಕಾ ದಿನ: ಮುಕ್ತ, ನಿರ್ಭೀತ, ಮೌಲ್ಯಯುತ ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆಂಬಲ

ABOUT THE AUTHOR

...view details