ನವದೆಹಲಿ : ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತದ ಅವಧಿಯನ್ನು ಮೇ 31 ರವರೆಗೆ ಭಾರತ ವಿಸ್ತರಿಸಿದೆ. ಆದರೆ, ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತ : ಮೇ 31ರವರೆಗೆ ಅವಧಿ ವಿಸ್ತರಣೆ - ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್
ವಿದೇಶಗಳಿಗೆ ಹಾರಾಟ ನಡೆಸುವ ಕಾರ್ಗೋ ವಿಮಾನ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ..
![ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟ ಸ್ಥಗಿತ : ಮೇ 31ರವರೆಗೆ ಅವಧಿ ವಿಸ್ತರಣೆ International flights suspension extended till May 31](https://etvbharatimages.akamaized.net/etvbharat/prod-images/768-512-11590925-thumbnail-3x2-megha.jpg)
ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ
2020ರ ಜೂನ್ ತಿಂಗಳಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಏಪ್ರಿಲ್ ಅಂತ್ಯದವರೆಗೆ ವಾಣಿಜ್ಯ ಸೇವೆಗಳಿಗಾಗಿ ಇರುವ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿ ಸುತ್ತೋಲೆ ಹೊರಡಿಸಿತ್ತು. ಈ ಆದೇಶದಲ್ಲಿ ಬದಲಾವಣೆ ಮಾಡಲಾಗಿದ್ದು, ಮೇ 31ರವರೆಗೆ ಅವಧಿ ವಿಸ್ತರಣೆಯಾಗಿದೆ.
ವಿದೇಶಗಳಿಗೆ ಹಾರಾಟ ನಡೆಸುವ ಕಾರ್ಗೋ ವಿಮಾನ ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.