ನವದೆಹಲಿ : ಕೊರೊನಾ 2ನೇ ಅಲೆ ಅಬ್ಬರ ಹಾಗೂ ಲಾಕ್ಡೌನ್ ನಡುವೆ ಭಾರತ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಸೇವೆ ನಿರ್ಬಂಧವನ್ನ ಜೂನ್ 30,2021ರ ವರೆಗೆ ವಿಸ್ತರಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಹೊರಡಿಸಿದ ಸುತ್ತೋಲೆಯಲ್ಲಿ, ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಮೇಲಿನ ನಿರ್ಬಂಧವನ್ನ ಜೂನ್ 30, 2021ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಹಾಗೂ ಅಂತಾರಾಷ್ಟ್ರೀಯ ಸರಕು ವಿಮಾನಗಳಿಗೆ ಈ ನಿರ್ಬಂಧದಿಂದ ಮುಕ್ತವಾಗಿವೆ ಎಂದು ತಿಳಿಸಲಾಗಿದೆ.
ಕಳೆದ ಮಾರ್ಚ್ 25, 2020ರಂದು ಲಾಕ್ಡೌನ್ ಹಾಗೂ ಕೊರೊನಾ ಸಂಬಂಧ ನಾಗರಿಕ ವಿಮಾನಯಾನ ಸೇವೆಗೆ ತಡೆ ನೀಡಲಾಗಿತ್ತು. ಈ ನಡುವೆ ಪ್ರಾದೇಶಿಕ ವಿಮಾನಯಾನ ಸೇವೆಯೂ ಮಾರ್ಚ್ 25ರಿಂದ ಪುನರ್ ಆರಂಭಗೊಂಡಿತ್ತು.
ಇದನ್ನೂ ಓದಿ:ನಾರದ ಪ್ರಕರಣ: ನಾಲ್ವರು ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು ಮಂಜೂರು