ಹೈದರಾಬಾದ್:ಶಿಕ್ಷಣವು ಮಾನವ ಹಕ್ಕು, ಸಾರ್ವಜನಿಕ ಒಳಿತು ಮತ್ತು ಸಾರ್ವಜನಿಕ ಜವಾಬ್ದಾರಿ. ಶಾಂತಿ ಮತ್ತು ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಸಾರಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 24ನ್ನು ಅಂತಾರಾಷ್ಟ್ರೀಯ ಶಿಕ್ಷಣ ದಿನವೆಂದು ಘೋಷಿಸಿತು.
ಎಲ್ಲರಿಗೂ ಅಂತರ್ಗತ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಹಾಗೂ ಅವಕಾಶಗಳೊಂದಿಗೆ, ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಮತ್ತು ಲಕ್ಷಾಂತರ ಮಕ್ಕಳು, ಯುವಕರು ಮತ್ತು ವಯಸ್ಕರನ್ನು ಕಾಡುತ್ತಿರುವ ಬಡತನದ ಚಕ್ರವನ್ನು ಮುರಿಯಲು ಶಿಕ್ಷಣ ಅತ್ಯಗತ್ಯ.
2021ರ ಜನವರಿ 24ರಂದು ಜಗತ್ತು ಮೂರನೇ 'ಶಿಕ್ಷಣ ದಿನ' ಆಚರಿಸುತ್ತಿದೆ. ಈ ವರ್ಷದ ಥೀಮ್ "ಕೋವಿಡ್-19 ಪೀಳಿಗೆಗೆ ಶಿಕ್ಷಣವನ್ನು ಮರುನೀಡಿ ಮತ್ತು ಪುನರುಜ್ಜೀವನಗೊಳಿಸಿ".
ಇಂದು ಶಿಕ್ಷಣವು ಸುಸ್ಥಿರ ಅಭಿವೃದ್ಧಿ ಗುರಿಗಳ ಹೃದಯಭಾಗದಲ್ಲಿದೆ. ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯವನ್ನು ಸುಧಾರಿಸಲು ನಮಗೆ ಶಿಕ್ಷಣ ಬೇಕು. ಲಿಂಗ ಸಮಾನತೆಯನ್ನು ಸಾಧಿಸಲು ಮತ್ತು ಬಾಲ್ಯವಿವಾಹವನ್ನು ತೊಡೆದುಹಾಕಲು ಶಿಕ್ಷಣ ಅಗತ್ಯ. ನಮ್ಮ ಸಂಪನ್ಮೂಲಗಳನ್ನು ರಕ್ಷಿಸಲು ಶಿಕ್ಷಣ ಮುಖ್ಯ. ದ್ವೇಷದ ಮಾತು ಮತ್ತು ಅಸಹಿಷ್ಣುತೆಯ ವಿರುದ್ಧ ಹೋರಾಡಲು ಮತ್ತು ಜಾಗತಿಕ ಪೌರತ್ವವನ್ನು ಬೆಳೆಸಲು ನಮಗೆ ಶಿಕ್ಷಣ ಬೇಕು.
ಶಿಕ್ಷಣವು ಮಾನವ ಹಕ್ಕು:
ಶಿಕ್ಷಣದ ಹಕ್ಕನ್ನು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ 26ನೇ ಆರ್ಟಿಕಲ್ನಲ್ಲಿ ಪ್ರತಿಪಾದಿಸಲಾಗಿದೆ. ಇದು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಬಯಸುತ್ತದೆ. 1989ರಲ್ಲಿ ಅಂಗೀಕರಿಸಲ್ಪಟ್ಟ ಮಕ್ಕಳ ಹಕ್ಕುಗಳ ಸಮಾವೇಶವು ಪ್ರತಿಯೊಂದು ದೇಶದಲ್ಲಿ ಉನ್ನತ ಶಿಕ್ಷಣ ಎಲ್ಲರಿಗೂ ಸಿಗುವಂತೆ ಪ್ರೇರೇಪಿಸುತ್ತದೆ.
ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಮುಖ್ಯ:
2015ರ ಸೆಪ್ಟೆಂಬರ್‌ನಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಅಂಗೀಕರಿಸಿದಾಗ, ಅಂತಾರಾಷ್ಟ್ರೀಯ ಸಮುದಾಯವು ತನ್ನ ಎಲ್ಲಾ 17 ಗುರಿಗಳ ಯಶಸ್ಸಿಗೆ ಶಿಕ್ಷಣ ಅತ್ಯಗತ್ಯ ಎಂದು ಗುರುತಿಸಿತು. ಸುಸ್ಥಿರ ಅಭಿವೃದ್ಧಿ ಗುರಿ 4, ನಿರ್ದಿಷ್ಟವಾಗಿ, 2030ರ ವೇಳೆಗೆ "ಅಂತರ್ಗತ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸುವುದು ಮತ್ತು ಎಲ್ಲರಿಗೂ ಆಜೀವ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವುದು" ಎಂಬ ಗುರಿಯನ್ನು ಹೊಂದಿದೆ.
ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸಲು ಸವಾಲುಗಳು:
ಶಿಕ್ಷಣವು ಮಕ್ಕಳಿಗೆ ಬಡತನದಿಂದ ಭರವಸೆಯ ಭವಿಷ್ಯದ ಹಾದಿಯನ್ನು ನೀಡುತ್ತದೆ. ಆದರೆ ಪ್ರಪಂಚದಾದ್ಯಂತ ಸುಮಾರು 265 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರಿಗೆ ಶಾಲೆಗೆ ಪ್ರವೇಶಿಸಲು ಅಥವಾ ಪೂರ್ಣಗೊಳಿಸಲು ಅವಕಾಶ ಸಿಗುತ್ತಿಲ್ಲ. 617 ಮಿಲಿಯನ್ ಮಕ್ಕಳು ಮತ್ತು ಹದಿಹರೆಯದವರು ಮೂಲ ಗಣಿತವನ್ನು ಓದಲು, ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಉಪ-ಸಹಾರನ್ ಆಫ್ರಿಕಾದಲ್ಲಿ 40%ಕ್ಕಿಂತ ಕಡಿಮೆ ಹುಡುಗಿಯರು ಲೋವರ್ ಸೆಕೆಂಡರಿ ಶಾಲೆಯನ್ನು ಪೂರ್ಣಗೊಳಿಸುತ್ತಾರೆ ಮತ್ತು ಸುಮಾರು ನಾಲ್ಕು ಮಿಲಿಯನ್ ಮಕ್ಕಳು ಮತ್ತು ಯುವ ನಿರಾಶ್ರಿತರು ಶಾಲೆಯಿಂದ ಹೊರಗುಳಿದಿದ್ದಾರೆ.
ಸಂಗತಿಗಳು ಮತ್ತು ಅಂಕಿ ಅಂಶಗಳು: