ಹೈದರಾಬಾದ್:ಮಹಿಳೆಯನ್ನು ತಾಯಿಯಾಗಿ, ಸಹೋದರಿಯಾಗಿ, ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದೇವೆ. ಹೆಣ್ಣನನ್ನು ಪೂಜ್ಯ ಭಾವದಿಂದ ಕಾಣುವ ನಾವು ಭೂಮಿ, ನೀರು, ಪರಿಸರಕ್ಕೆ ಹೋಲಿಕೆ ಮಾಡುತ್ತೇವೆ. ಹತ್ತಾರು ಕ್ಷೇತ್ರಗಳಲ್ಲಿ ಮಹಿಳೆ ಪುರುಷ ಸಮಾನವಾಗಿ ತನ್ನನ್ನು ತೊಡಗಿಸಿಕೊಂಡು ಸಾಧಿಸಿ ತೋರಿಸಿರುವ ಅದೆಷ್ಟೋ ನಿದರ್ಶನಗಳಿವೆ. ಕೆಲ ವಲಯಗಳಲ್ಲಿ ಆಕೆಯನ್ನು ಕೀಳಾಗಿಯೇ ಕಾಣಲಾಗುತ್ತಿದೆ ಎಂಬ ಕೂಗು ಆಗಾಗ ಕೇಳಿ ಬರತ್ತಲೇ ಇದ್ದು, ಎಲ್ಲಾ ರಂಗದಲ್ಲೂ ಪುರುಷ ಸಮಾನವಾಗಿ ಕಾಣಬೇಕೆಂಬ ಆಗ್ರಹಗಳು ಆಗಾಗ ಮೊಳಗುತ್ತಲೇ ಇರುತ್ತದೆ.
ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈಗಲೂ ಕಾಣುತ್ತಿರುವ ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯಗಳಿಗೆ ಮಾತ್ರ ಸಂಪೂರ್ಣವಾಗಿ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಇಂದು ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮಹಿಳೆ ಮುಗ್ಧತೆಯ ಬಲಹೀನತೆಯನ್ನೇ ಬಂಡವಾಳವನ್ನಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯಗಳು, ಕೋವಿಡ್ ಸಂದರ್ಭದಲ್ಲಿನ ಕಿರುಕು ಹಾಗೂ ಇದನ್ನು ತಡೆಯಲು ಇರುವ ಕಾನೂನಿನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ವಿಶ್ವಾದ್ಯಂತ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯಗಳು ವ್ಯಾಪಕ ಹಾಗೂ ನಿರಂತರವಾಗಿ ನಡೆಯುತ್ತಲೇ ಇದ್ದು, ಮಾವನ ಹಕ್ಕುಗಳ ಉಲ್ಲಂಘನೆಯಾಗಿದೆ. ಅದೆಷ್ಟೋ ಘಟನೆಗಳು ನಿರ್ಭಯ, ಮೌನ, ಕಳಂಕದ ಭಯದಿಂದ ಹೊರ ಬರುತ್ತಿಲ್ಲ. ಇದು ನಾಚಿಗೇಡಿನ ಸಂಗತಿಯಾಗಿದೆ.
ಶತಮಾನಗಳಿಂದಲೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಲೌಂಗಿಕ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಲಿಂಗ ಅಸಮಾನತೆ ಅತ್ಯಾಚಾರ ಸಂಸ್ಕೃತಿಗೆ ಪುಷ್ಠಿ ನೀಡುವಂತಿದೆ. ಅಸಮಾನತೆಯ ಆಡಳಿತವನ್ನು ಪ್ರಶ್ನಿಸುವ ಅವಶ್ಯಕತೆ ಇದ್ದು, ಇದನ್ನು ಯಾರೂ ಮರೆಯುವಂತಿಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟರ್ರೆಸ್ ಹೇಳಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಹೇಳಬೇಕೆಂದರೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಾಣಾಳಿಕೆಯಲ್ಲಿ ದೈಹಿಕ, ಲೈಂಗಿಕ ಮತ್ತು ಮಾನಸಿಕ ರೂಪಗಳನ್ನು ಒಳಗೊಂಡಿರುತ್ತವೆ
* ಸಂಗಾತಿಯಿಂದ ಹಿಂಸಾಚಾರ (ಜರ್ಜರಿತ, ದೈಹಿಕ ನಿಂದನೆ, ವೈವಾಹಿಕ ಅತ್ಯಾಚಾರ, ಸ್ತ್ರೀ ಹತ್ಯೆ)
* ಲೈಂಗಿಕ ಹಿಂಸಾಚಾರ ಮತ್ತು ದೌರ್ಜನ್ಯ (ಅತ್ಯಾಚಾರ, ಒತ್ತಾಯ ಪೂರಕವಾಗಿ ಲೈಂಗಿಕ ಕ್ರಿಯೆ, ಮುಂಚಿತವಾಗಿಯೇ ಲೈಂಗಿಕ ಕ್ರಿಯೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಒತ್ತಾಯ ಪೂರಕವಾಗಿ ಮದುವೆ, ರಸ್ತೆ ಬೀದಿಗಳಲ್ಲಿ ಕಿರುಕುಳ, ಹಿಂಬಾಲಿಸುವುದು ಹಾಗೂ ಸೈಬರ್ ದೌರ್ಜನ್ಯಗಳು)
* ಮಾನವ ಕಳ್ಳಸಾಗಾಣಿಕೆ (ಗುಲಾಮಗಿರಿ, ಲೈಂಗಿಕ ಶೋಷಣೆ)
* ಸ್ತ್ರೀ ಜನನಾಂಗ ಊನಗೊಳಿಸುವಿಕೆ ಮತ್ತು
* ಬಾಲ್ಯ ವಿವಾಹ
ಹಿನ್ನೆಲೆ
1960 ನವೆಂಬರ್ 25 ರಂದು ಮಿರಬಾಲ್ ಸಹೋದರಿಯರನ್ನು ಮಹಿಳೆಯರು ಮತ್ತು ಕಾರ್ಯಕರ್ತರು ಎನ್ನುವ ಕಾರಣಕ್ಕೆ ಜೀವಂತವಾಗಿ ಸುಟ್ಟುಹಾಕಲಾಗಿತ್ತು. 1930-1960ರಲ್ಲಿ ಡೊಮಿಕನ್ ಪಂಥದ ರಫೇಲ್ ಟ್ರುಜಿಲ್ಲೊ ಅವರ ಸರ್ವಾಧಿಕಾರ ನಡೆ ವಿರುದ್ಧ ಹೋರಾಟ ಮಾಡಿದರು ಎಂಬ ಏಕೈಕ ಕಾರಣಕ್ಕಾಗಿ ಇವರನ್ನು 1993ರಲ್ಲಿ ಸಜೀವ ದಹನ ಮಾಡಲಾಗಿತ್ತು. ಮಹಿಳೆಯರ ಮೇಲಿನ ಇಂತಹ ಹಿಂಸಾಚಾರವನ್ನು ತಡೆಯುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ 48/104 ವಿಧೇಯಕವನ್ನು ಅಂಗೀಕರಿಸಲಾಯಿತು. ಲಿಂಗ ಆಧಾರಿತ ಹಿಂಸಾಚಾರ, ದೈಹಿಕ, ಲೈಂಗಿಕ, ಮಾನಸಿಕ ಹಾನಿ ಅಥವಾ ಮಹಿಳೆ ಎಂಬ ಕೊರಗು, ಬೆದರಿಕೆ ಹಾಗೂ ಮಹಿಳಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು. 1999ರ ನವೆಂಬರ್ 25 ರಂದು ನಡೆದಿದ್ದ ಮುಖ್ಯ ಸಮಾವೇಶದಲ್ಲಿ ನವೆಂಬರ್ 25 ಅನ್ನು ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನಾಗಿ ಘೋಷಿಸಲಾಯಿತು.
ಜಾಗತಿಕ ಮಟ್ಟದಲ್ಲಿ ಅಂಕಿ ಅಂಶಗಳು ಹೇಳುವುದೇನು?
- ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಅಥವಾ ಬಾಲಕಿ ಜೀವನದಲ್ಲೊಮ್ಮೆ ದೈಹಿಕ ಅಥವಾ ಲೈಂಗಿಕ ಹಿಂಸಾಚಾರದ ಅನುಭವ ಪಡೆದಿರುತ್ತಾರೆ. ಅದರಲ್ಲೂ ಅತಿ ಹೆಚ್ಚಾಗಿ ತಮ್ಮ ಸಂಗಾತಿಯೊಂದಿಗೆ ಕಹಿ ಅನುಭವ ಪಡೆದಿರುತ್ತಾರೆ.
- ಶೇಕಡಾ 52 ರಷ್ಟು ಮಹಿಳೆಯರು ಮಾತ್ರ ವಿವಾಹ ಅಥವಾ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಸ್ವನಿರ್ಧಾರ, ಗರ್ಭನಿರೋಧಕ ಅಥವಾ ಆರೋಗ್ಯ ಸಂಬಂಧ ನಿರ್ಧಾರವಗಳನ್ನು ಕೈಗೊಳ್ಳುತ್ತಾರೆ.
- ವಿಶ್ವಾದ್ಯಂತ ಸರಿಸುಮಾರು 750 ಮಿಲಿಯನ್ ಮಹಿಳೆಯರು ಮತ್ತು ಬಾಲಕಿಯರು ಒಬ್ಬಂಟಿಯಾಗಿದ್ದು, 18ನೇ ವರ್ಷಕ್ಕೆ ಕಾಲಿಡುವ ಮೊದಲ ವಿವಾಹವಾಗಿರುತ್ತಾರೆ. 20 ಕೋಟಿ ಮಹಿಳೆಯರು ಮತ್ತು ಬಾಲಕಿಯರು ಸ್ತ್ರೀ ಜನನಾಂಗ ಊನಗೊಳಿಸುವಿಕೆ (ಎಫ್‌ಜಿಎಂ)ಗೆ ಒಳಗಾಗುತ್ತಾರೆ.
- 2017ರಲ್ಲಿ ವಿಶ್ವಾದ್ಯಂತ ಇಬ್ಬರು ಮಹಿಳೆಯರಲ್ಲಿ ಒಬ್ಬರು ಅವರ ಸಂಗಾತಿ ಅಥವಾ ಕುಟುಂಬದವರಿಂದ ಹತ್ಯಗೀಡಾಗಿದ್ದಾರೆ. ಇತಂಹದ್ದೇ ಪ್ರಕರಣಗಳಲ್ಲಿ 20 ಪುರುಷರ ಪೈಕಿ ಒಬ್ಬ ಪುರುಷ ಮೃತಪಟ್ಟಿದ್ದಾರೆ.
- ಮಾನವ ಕಳ್ಳಸಾಗಾಣಿಕೆಯಲ್ಲಿ ಶೇಕಡಾ 71 ರಷ್ಟು ಮಹಿಳೆಯರು ಮತ್ತು ಬಾಲಕಿಯರೇ ಇದ್ದಾರೆ. ಈ ಮಹಿಳೆ ಅಥವಾ ಬಾಲಕಿಯರ ಪೈಕಿ ನಾಲ್ವರಲ್ಲಿ ಮೂವರು ಲೈಂಗಿಕ ಶೋಷಣೆಗೆ ಗುರಿಯಾಗಿದ್ದಾರೆ.
- ಹಿಂಸಾಚಾರದಿಂದಾಗಿ ಮಹಿಳೆಯರು ಮೃತಪಡುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಕ್ಯಾನ್ಸರ್ ಹಾಗೂ ಮಲೇರಿಯಾದಂತಹ ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ.
- ಜಾಗತಿಕ ಮಟ್ಟದಲ್ಲಿ 2017ರಲ್ಲಿ ಪ್ರತಿನಿತ್ಯ 137 ಕುಟುಂಬಗಳಲ್ಲಿ ನಿತ್ಯ ಓರ್ವ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಇದೇ ವರ್ಷ ಒಟ್ಟು 87 ಸಾವಿರ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎಂದು ಅಂದಾಜಿಸಾಲಿದೆ. ಇದರಲ್ಲಿ ಅರ್ಧದಷ್ಟು ಮಂದಿ(50,000) ತಮ್ಮ ಸಂಗಾತಿ ಅಥವಾ ಕುಟುಂಬದವರಿಂದ ಸಾವಿಗೀಡಾಗಿದ್ದಾರೆ. 30,000 ಮಂದಿ ಪ್ರಸ್ತುತ ಸಂಗಾತಿ ಅಥವಾ ಮಾಜಿ ಸಂಗಾತಿಯಿಂದ ಕೊಲ್ಲಲ್ಪಟ್ಟಿದ್ದಾರೆ.
- 1 ಕೋಟಿ 50 ಲಕ್ಷ ಅಪ್ರಾಪ್ತೆಯರು (15-19 ವರ್ಷದೊಳಗಿನವರು) ಒತ್ತಾಯ ಪೂರಕವಾದ ಲೈಂಗಿಕತೆಗೆ ಒಳಗಾಗಿದ್ದಾರೆ. ಇದರಲ್ಲಿ ಬಹುತೇಕರು ತಮ್ಮ ಪ್ರಸ್ತುತ ಸಂಗಾತಿ, ಮಾಜಿ ಸಂಗಾತಿ ಅಥವಾ ಗೆಳೆಯನೊಂದಿಗೆ ಒತ್ತಾಯಪೂರಕವಾದ ದೈಹಿಕ ಸಂಪರ್ಕಕ್ಕೆ ಒಳಗಾಗಿದ್ದಾರೆ. 30 ದೇಶಗಳ ಮಾಹಿತಿ ಆಧರಿಸಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.
ಭಾರತದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳು
* NCRB 2019ರ ವರದಿಯಂತೆ 2018 ರಿಂದ 19ರ ಅವಧಿಯಲ್ಲಿ ಭಾರತದಲ್ಲಿ ಮಹಿಳೆಯರ ವಿರುದ್ಧ ಶೇಕಡಾ 7.3ರಷ್ಟು ಅಪರಾಧ ಪ್ರಕರಣಗಳು ದಾಖಲಾಗಿವೆ.
* ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ಅತಿ ಹೆಚ್ಚು(59,853) ಅಪರಾಧ ಕೃತ್ಯಗಳು ನಡೆದಿವೆ. ದೇಶದಲ್ಲಿ ನಡೆದಿರುವ ಕೃತ್ಯಗಳಲ್ಲಿ ಯುಪಿಯ ಪಾಲು ಶೇಕಡಾ 14.7 ರಷ್ಟಿದೆ. 2ನೇ ಸ್ಥಾನದಲ್ಲಿ ರಾಜಸ್ಥಾನ(41,550, ಶೇ.10.2), 3ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ (37,144 ಶೇ.9.2) ಪ್ರಕರಣಗಳು ದಾಖಲಾಗಿವೆ. ಅಸ್ಸೋಂನಲ್ಲಿ 1 ಲಕ್ಷ ಮಹಿಳೆಯರಲ್ಲಿ 177.8 ಮಂದಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಂತರದಲ್ಲಿ ರಾಜಸ್ಥಾನ (110.4) ಮತ್ತು ಹರಿಯಾಣ (108.5) ರಾಜ್ಯಗಳಿವೆ.
* 2019ರಲ್ಲಿ 4,05,861 ಮಹಿಳೆಯರ ಮೇಲೆ ನಡೆದಿರುವ ಅಪರಾಧ ಪ್ರಕರಣಗಳು ದಾಖಲಾಗಿವೆ. ಇದು 2018ಕ್ಕಿಂತ ಶೇಕಡಾ 7.3ರಷ್ಟು (3,78,236) ಏರಿಕೆಯಾಗಿದೆ.
* ಅಪರಾಧ ಪ್ರಕರಣಗಳು ಹೆಚ್ಚಾಗಿ ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾಗಿದ್ದು, ಪತಿ ಅಥವಾ ಆತನ ಸಂಬಂಧಿಕರಿಂದ ನಡೆದಿರುವ ಕೃತ್ಯಗಳೇ (ಶೇ.30.9) ಆಗಿವೆ. ಶೇಕಡಾ 21.8 ರಷ್ಟು ಪ್ರಕರಣಗಳು ಮಹಿಳೆಯ ಮುಗ್ಧತೆಯನ್ನು ಬಂಡವಾಳವನ್ನಾಗಿ ಬಳಸಿಕೊಂಡು ನಡೆದಿರುವ ಕ್ರೌರ್ಯಗಳೇ ಆಗಿವೆ. ಶೇಕಡಾ 17.9 ರಷ್ಟು ಅಪಹರಣ ಮತ್ತು ಒತ್ತೆಯಾಳು, 7.9 ರಷ್ಟು ಅತ್ಯಾಚಾರ ಪ್ರಕರಣಗಳು ನಡೆದಿವೆ. 2019ರಲ್ಲಿ 1 ಲಕ್ಷ ಮಹಿಳಾ ಜನಸಂಖ್ಯೆಯಲ್ಲಿ 62.4 ಮಂದಿ ಮೇಲೆ ಅಪರಾಧ ಪ್ರಮಾಣದ ದರ ದಾಖಲಾಗಿದೆ. 2018ರಲ್ಲಿ ಈ ಪ್ರಮಾಣ 58.8 ರಷ್ಟಿತ್ತು.
ಕೋವಿಡ್ ಮಹಾಮಾರಿಯ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಹಿಂಸಾಚಾರ