ಹೈದರಾಬಾದ್:ಸಾಗರ ಸೇರುತ್ತಿರುವ ತ್ಯಾಜ್ಯಗಳನ್ನು ಶುಚಿಗೊಳಿಸುವ ಉದ್ದೇಶದಿಂದ ಅಮೆರಿಕದ ಪಶ್ಚಿಮ ಕರಾವಳಿಯ ವಾಷಿಂಗ್ಟನ್ ರಾಜ್ಯದಲ್ಲಿ 1986ರಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆರಂಭಿಸಲಾಯಿತು. 1986ರಂದು ಸಾಗರ ಸಂರಕ್ಷಣೆ (ಓಷನ್ ಕನ್ಸರವೇಷನ್) ಸಂಸ್ಥೆ ಪ್ರತಿ ವರ್ಷ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವಾಗಿ ಆಚರಿಸಲು ಮುಂದಾಗಿತು. ಈ ಮೂಲಕ ಸಾಗರವನ್ನು ಭವಿಷ್ಯದ ಸಾವಲುಗಳನ್ನು ರಕ್ಷಣೆ ಮಾಡಲು ಕೆಲಸ ಮಾಡಲು ಮುಂದಾಗಲಾಯಿತು. ಅಂದಿನಿಂದ ಪ್ರತಿ ಸೆಪ್ಟೆಂಬರ್ ಮೂರನೇ ವಾರವನ್ನು ಅಂತಾಷ್ಟ್ರೀಯ ಕರಾವಳಿ ಸ್ವಚ್ಛತೆ ದಿನವಾಗಿ ಆಚರಿಸಲಾಗುತ್ತಿದೆ.
ಈ ದಿನದ ಉದ್ದೇಶ: ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಮುಖ್ಯ ಉದ್ದೇಶ ಸಮುದ್ರ, ನದಿ ಅಥವಾ ಇತರ ನೈಸರ್ಗಿಕ ಜಲಮೂಲವನ್ನು ಶುಚಿಯಾಗಿರಿಸುವುದು. ಜಲ ಮೂಲಗಳಿಗೆ ಬದಲಾಗಿ ತ್ಯಾಜ್ಯ ನಿರ್ವಹಣೆ ನಡೆಸುವುದು. ಈ ಉದ್ದೇಶದಿಂದ ಸರ್ಕಾರದ ಏಜೆನ್ಸಿ, ನಿಯಮ ರೂಪಕರು, ಸ್ಥಳ ಜನರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಶುದ್ದ ನೀರಿನ ಮೂಲದ ಪ್ರಯೋಜನದ ಬಗ್ಗೆ ಅರಿವು ಮೂಡಿಸುವುದು. ಜೊತೆಗೆ ಈಗಾಗಲೇ ಇರುವ ತ್ಯಾಜ್ಯವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದು.
ಪ್ಲಾಸ್ಟಿಕ್ ಬಳಕೆ ದೊಡ್ಡ ಸಮಸ್ಯೆ: ನೀತಿ ಆಯೋಗದ ವರದಿಯಲ್ಲಿ ತಿಳಿಸಿರುವಂತೆ, ಪ್ರಪಂಚದ 97 - 99 ಪ್ರತಿಶತ ಪ್ಲಾಸ್ಟಿಕ್ ಅನ್ನು ಪಳೆಯುಳಿಕೆ ಇಂಧನಗಳಿಂದ ಪಡೆಯುತ್ತಿದ್ದು, ಶೇ 1-3ರಷ್ಟು ಪ್ಲಾಸ್ಟಿಕ್ ಅನ್ನು ಜೈವಿಕ ಆಧಾರಿತ ಪ್ಲಾಸ್ಟಿಕ್ ಆಗಿ ಉತ್ಪಾದಿಸಲಾಗುತ್ತಿದೆ. 1950ರಲ್ಲಿ ಕೇವಲ 2 ಟನ್ ಪ್ಲಾಸ್ಟಿಕ್ ಅನ್ನು ಉತ್ಪಾದಿಸಲಾಗುತ್ತಿತ್ತು. 2015ರಲ್ಲಿ 381 ಮಿಲಿಯನ್ ಪ್ಲಾಸ್ಟಿಕ್ ಉತ್ಪಾದನೆ ಮಾಡಲಾಗಿದೆ. ಜಾಗತಿಕ ದತ್ತಾಂಶದ ಪ್ರಕಾರ 2014-15ರಲ್ಲಿ ತಲಾ ಪ್ಲಾಸ್ಟಿಕ್ ಉತ್ಪಾದನೆ 28 ಕೆಜಿ ಆದರೆ, ಇದೀಗ ಅದು 30ಕೆಜಿಗೆ ಬಂದು ತಲುಪಿದೆ.