ಕರ್ನಾಟಕ

karnataka

ETV Bharat / bharat

International Anti Drug Day : ₹50 ಕೋಟಿ ಮೌಲ್ಯದ ಮಾದಕ ವಸ್ತು ನಾಶಪಡಿಸಲಿರುವ ಕರ್ನಾಟಕ - ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ

ಎಲ್ಲ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿದೆ. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ..

ಬಸವರಾಜ್​ ಬೊಮ್ಮಾಯಿ
ಬಸವರಾಜ್​ ಬೊಮ್ಮಾಯಿ

By

Published : Jun 25, 2021, 10:09 PM IST

Updated : Jun 26, 2021, 6:43 AM IST

ಬೆಂಗಳೂರು :ಇಂದು ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ (International Anti Drug Day 2021). ಹೀಗಾಗಿ, ಕಳೆದ 12 ತಿಂಗಳಲ್ಲಿ ಸೀಜ್​ ಮಾಡಿರುವ 50 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಮಾದಕ ವಸ್ತು ನಾಶ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವರಾಗಿರುವ ಬಸವರಾಜ್​ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವ ಬೊಮ್ಮಾಯಿ, ನಾಳೆ ಅಂತಾರಾಷ್ಟ್ರೀಯ ಆ್ಯಂಟಿ ಡ್ರಗ್ ಡೇ ಇದೆ. ಹೀಗಾಗಿ, ಕಳೆದ 12 ತಿಂಗಳಲ್ಲಿ ಸೀಜ್ ಮಾಡಿದ ಡ್ರಗ್​​ಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಡ್ರಗ್ ಸೀಜ್ ಆಗಿರಲಿಲ್ಲ. ಕೋರ್ಟ್ ಪರ್ಮಿಷನ್ ತೆಗೆದುಕೊಂಡು ಅಧಿಕಾರಿಗಳ ಉಪಸ್ಥಿತಿಯಲ್ಲಿ ನಾಶ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿರಿ: ಕೋವಿಡ್ ಸಂದರ್ಭದಲ್ಲಿ ಎಕ್ಸಾಂ ಇಲ್ಲವೇ ಇಲ್ಲ.. ಸಿಪಿವೈ ಪರೀಕ್ಷೆಗೆ ಬೊಮ್ಮಾಯಿ ಗೃಹಭಂಗ..

50.23 ಕೋಟಿ ಮೌಲ್ಯದ ಡ್ರಗ್ ಇದೆ. ಗಾಂಜಾ, ಅಫೀಮ್, ಬ್ರೌನ್ ಶುಗರ್, ಹೆರಾಯಿನ್, ಚರಸ್ ಸೇರಿ ಎಲ್ಲವನ್ನು ನಾಶ ಮಾಡುತ್ತೇವೆ. 5,221 ಜನರನ್ನು ಎನ್​​ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಬುಕ್ ಮಾಡಿದ್ದೇವೆ. ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿ ಇದೆ ಎಂದರು. ವಾರ್ ಅಗೇನಸ್ಟ್ ಡ್ರಗ್ ಮತ್ತಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ.

ಎಲ್ಲ ಜಿಲ್ಲೆಗಳಲ್ಲೂ ಕೂಡ ಡ್ರಗ್ ನಾಶ ಪಡಿಸುವ ಕೆಲಸ ನಡೆಯಲಿದೆ. ಎಲ್ಲ ಸೀಜ್ ಮಾಡಿದ ಡ್ರಗ್‌ಗಳನ್ನು ಶನಿವಾರ (ಇಂದು) ಕಮಿಷನರ್ ಕಚೇರಿಯಲ್ಲಿ ಇಟ್ಟು ಅಲ್ಲಿಂದ ಕೊಂಡೊಯ್ಯುತ್ತೇವೆ. ದಾಬಸ್ ಪೇಟೆ ಹತ್ತಿರ ಫರ್ನೆಸ್ ಒಂದರಲ್ಲಿ ಎಲ್ಲವನ್ನೂ ನಾಶ ಪಡಿಸುತ್ತೇವೆ ಎಂದು ತಿಳಿಸಿದರು.

ಎಲ್ಲ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿದೆ. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಹೋರಾಟ ಇನ್ನಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Last Updated : Jun 26, 2021, 6:43 AM IST

ABOUT THE AUTHOR

...view details