ಕರ್ನಾಟಕ

karnataka

ETV Bharat / bharat

ಅಮರ್ತ್ಯ ಸೇನ್ ಮನೆ 'ಪ್ರತಿಚಿ' ಬಳಿ ಮೇ 6ಕ್ಕೆ ಬುದ್ಧಿಜೀವಿಗಳಿಂದ ಅಹೋರಾತ್ರಿ ಧರಣಿ: ಮಮತಾ ಭಾಗವಹಿಸುವ ಸಾಧ್ಯತೆ - ಬೀದಿಗಿಳಿದು ಪ್ರತಿಭಟನೆ ನಡೆಸಲಿರುವ ಬುದ್ಧಿಜೀವಿಗಳು

ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿಶ್ವ ಭಾರತಿ ವಿಶ್ವವಿದ್ಯಾಲಯದ 13 ದಶಮಾಂಶದಷ್ಟು ಭೂಮಿ ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪ ಈಗಾಗಲೇ ವಿವಾದವು ಬಿರುಗಾಳಿಯನ್ನೇ ಎಬ್ಬಿಸಿದೆ. ಇದರ ಬೆನ್ನಲ್ಲೆ ಕಬೀರ್ ಸುಮನ್, ಗೌತಮ್ ಘೋಷ್ ಅವರಂತಹ ಕಲಾವಿದರು ಅಮರ್ತ್ಯ ಸೇನ್ ಬೆಂಬಲಕ್ಕೆ ನಿಂತಿದ್ದು, ಅವರು ಮೇ 6ರಂದು ರಸ್ತೆಗಿಳಿದು ಪ್ರತಿಭಟನೆ ನಡೆಸಲಿದ್ದಾರೆ.

Amartya Sen
ಅಮರ್ತ್ಯ ಸೇನ್

By

Published : May 2, 2023, 9:22 PM IST

ಬೋಲ್ಪುರ್ (ಪಶ್ಚಿಮ ಬಂಗಾಳ):ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಹಾಕಿರುವ ಬೆದರಿಕೆಯನ್ನು ವಿರೋಧಿಸಿ ಸಂಗೀತಗಾರ ಕಬೀರ್ ಸುಮನ್, ನಿರ್ದೇಶಕ ಗೌತಮ್ ಘೋಷ್, ಯೋಗೇನ್ ಚೌಧರಿ, ಶುಭಪ್ರಸನ್ನ ಅವರು ರಸ್ತೆಗಿಳಿದು ಹೋರಾಟ ನಡೆಸಲಿದ್ದಾರೆ.

ಶಾಂತಿನಿಕೇತನದಲ್ಲಿರುವ ‘ಪ್ರತಿಚಿ’ ಮನೆ ಬಳಿ ಮೇ 6ರಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞರ ಪಕ್ಕದಲ್ಲಿ ನಿಲ್ಲಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರಬಹುದು ಎಂಬುದು ತಿಳಿದಿದೆ. ಭಾರತ ರತ್ನ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿಶ್ವ ಭಾರತಿ ವಿಶ್ವವಿದ್ಯಾಲಯದ 13 ದಶಮಾಂಶದ ಭೂಮಿ ಆಕ್ರಮಿಸಿಕೊಂಡಿರುವ ಆರೋಪವಿದೆ. ಈ ಬಗ್ಗೆ ದೂರು ನೀಡಿದ ಬಳಿಕ, ವಿಶ್ವಭಾರತಿ ಅಧಿಕಾರಿಗಳು ಈ ಜಮೀನು ವಾಪಸ್ ನೀಡುವಂತೆ ಹಲವು ಬಾರಿ ನೋಟಿಸ್ ನೀಡಿದ್ದಾರೆ.

ಭೂಮಿ ಖಾಲಿ ಮಾಡುವಂತೆ ಮೇ 6ರಂದು ಗಡುವು:ವಿಶ್ವಭಾರತಿ ಪ್ರಾಧಿಕಾರವು 'ಪ್ರತಿಚಿ' ಮನೆಯ ಗೋಡೆ ಮೇಲೆ ನೋಟಿಸ್ ಅಂಟಿಸಿದೆ. ಮೇ 6ರ ಗಡುವು ನಿಗದಿಪಡಿಸಿ ಭೂಮಿಯನ್ನು ಖಾಲಿ ಮಾಡುವಂತೆ ಅಂತಿಮ ಆದೇಶವನ್ನು ನೀಡಿದೆ. ವಿಶ್ವಭಾರತಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಕೂಡ ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞರ ವಿರುದ್ಧ ಹಲವಾರು ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪವಿದೆ. ಇದರಿಂದ ಎಲ್ಲೆಡೆ ಬಿರುಗಾಳಿ ಎದ್ದಿದೆ ಹಲವು ಬುದ್ಧಿ ಜೀವಿಗಳು ಈಗ ಪ್ರತಿಭಟನೆ ನಡೆಲು ಮುಂದಾಗಿದ್ದಾರೆ.

ಅರ್ಥಶಾಸ್ತ್ರಜ್ಞರ ವಿರುದ್ಧ ಹೇಳಿಕೆ ನೀಡಿದ್ದ ವಿಶ್ವಭಾರತಿ ಅಧಿಕಾರಿಗಳು:ಆರೋಪಗಳ ಜೊತೆಗೆ ವಿಶ್ವಭಾರತಿಯ ಉಪಕುಲಪತಿ ವಿದ್ಯುತ್ ಚಕ್ರವರ್ತಿ ಅವರು, 'ಭಾರತ ರತ್ನ' ಅಮರ್ತ್ಯ ಸೇನ್ ಅವರನ್ನು 'ಭೂಗಳ್ಳರು' ಎಂದು ವಿವಿಧ ಸಂದರ್ಭಗಳಲ್ಲಿ ಮಾಧ್ಯಮಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞರ ವಿರುದ್ಧ ವಿಶ್ವಭಾರತಿ ಅಧಿಕಾರಿಗಳು ಮತ್ತು ಉಪಕುಲಪತಿಗಳ ಈಗಾಗಲೇ ಮಾತನಾಡಿದ್ದರು.

ಅಮರ್ತ್ಯ ಸೇನ್ ಹೆಸರಿನಲ್ಲಿ ಭೂಮಿ ನೋಂದಣಿ:ಶಾಂತಿನಿಕೇತನ ಪೊಲೀಸ್ ಠಾಣೆಯಲ್ಲಿ ಉಪಕುಲಪತಿ ವಿರುದ್ಧ ದೇಶದ್ರೋಹದ ಆರೋಪ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಈ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ದಿವಂಗತ ತಂದೆ ಅಶುತೋಷ್ ಸೇನ್ ಅವರ ಇಚ್ಛೆಯ ಪ್ರಕಾರ, ಭೂಸುಧಾರಣಾ ಇಲಾಖೆಯಿಂದ ಬೋಲ್ಪುರ್​ನಲ್ಲಿರುವ ಅವರ ಸಂಪೂರ್ಣ ಭೂಮಿಯನ್ನು ಅಮರ್ತ್ಯ ಸೇನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಬೀದಿಗಿಳಿದು ಪ್ರತಿಭಟನೆ ನಡೆಸಲಿರುವ ಬುದ್ಧಿಜೀವಿಗಳು:ಇನ್ನು ಮೇ 6ರಂದು ವಿಶ್ವಭಾರತಿ ಅಧಿಕಾರಿಗಳು ಒತ್ತುವರಿ ತೆರವು ಬೆದರಿಕೆ ಹಾಕಿರುವುದನ್ನು ವಿರೋಧಿಸಿ ಬುದ್ಧಿಜೀವಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ. ಆ ದಿನ ಪ್ರತಿಚಿ ಅವರ ಮನೆಯ ಪಕ್ಕದಲ್ಲಿರುವ ಅಮರ್ತ್ಯ ಸೇನ್ ಅವರ ಸೋದರ ಸಂಬಂಧಿ ಶಾಂತವನು ಸೇನ್ ಅವರ ಮನೆಯ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ. ಸಂಗೀತಗಾರ ಕಬೀರ್ ಸುಮನ್, ಚಿತ್ರ ನಿರ್ದೇಶಕ ಗೌತಮ್ ಘೋಷ್, ಕಲಾವಿದ ಯೋಗೇನ್ ಚೌಧರಿ, ಶುಭಪ್ರಸನ್ನ ಭಟ್ಟಾಚಾರ್ಯ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಪ್ರತಿಭಟನಾ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಬರುವ ಸಾಧ್ಯತೆಯಿದೆ. 'ವಿಶ್ವ ಭಾರತಿ ಬಚಾವೋ ಸಮಿತಿ' ಹೆಸರಿನಲ್ಲಿ ಅಮರ್ತ್ಯ ಸೇನ್​ಗೆ ಹಾಕಿರುವ ಬೆದರಿಕೆಯನ್ನು ವಿರೋಧಿಸಿ ಕಬೀರ್ ಸುಮನ್ ಹಾಡನ್ನು ಹಾಡಲಿದ್ದಾರೆ.

ಇದನ್ನೂ ಓದಿ:ಬಿಹಾರದಲ್ಲಿ ಬೆಂಕಿ ಅವಘಡ: ಒಂದೇ ಕುಟುಂಬದ ನಾಲ್ವರು ಬಾಲಕಿಯರ ಸಾವು

ABOUT THE AUTHOR

...view details