ಸರ್ವರ್ ಡೌನ್ ಆಗಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಕಂಡುಬಂದಿದ್ದ ದೋಷ ಸರಿಪಡಿಸಲಾಗಿದೆ ಎಂದು ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ. ಕೆಲವು ಖಾತೆಗಳು ಅಮಾನತು ಆಗಿರುವುದಕ್ಕೆ ಕ್ಷಮೆ ಕೇಳಿದೆ.
ಕೆಲ ದಿನಗಳ ಹಿಂದೆ ಉಚಿತ ಸಂದೇಶ ಕಳುಹಿಸುವ ಜನಪ್ರಿಯ ಆ್ಯಪ್ ವಾಟ್ಸಪ್ನಲ್ಲೂ ತಾಂತ್ರಿಕ ದೋಷ ಉಂಟಾಗಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯ ನಿರ್ವಹಿಸಿರಲಿಲ್ಲ. ಕಳೆದ ರಾತ್ರಿ ಇನ್ಸ್ಟಾಗ್ರಾಮ್ ಸರ್ವರ್ ಕೂಡಾ ಡೌನ್ ಆಗಿದ್ದು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಈ ವಿಚಾರವನ್ನು ಸಂಸ್ಥೆಯೇ ಪೋಸ್ಟ್ ಮಾಡಿ ತಿಳಿಸಿತ್ತು.