ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ( Instagram, Facebook, WhatsApp) ಮತ್ತೊಮ್ಮೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಮೂಲಕ ಇದೇ ವಾರದಲ್ಲಿ ಎರಡನೇ ಬಾರಿ ಈ ಸಾಮಾಜಿಕ ಜಾಲತಾಣಗಳ ಸೈಟ್ ಡೌನ್ ಆಗಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ಇಂದು ರಾತ್ರಿ ಈ ಸಮಸ್ಯೆ ಉಂಟಾಗಿದೆ. ಭಾರತ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಈ ಸಮಸ್ಯೆ ಕಂಡುಬಂದಿದೆ.
ಈ ಸಂಬಂಧ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಸೇವೆ ವಿಳಂಬಕ್ಕೆ ಕ್ಷಮೆ ಕೇಳಿ ಟ್ವಿಟ್ ಮಾಡಿದೆ. ನಮ್ಮ ಆ್ಯಪ್ಗಳ ಬಳಕೆ ವೇಳೆ ಹಲವರು ಸಮಸ್ಯೆ ಎದುರಿಸುತ್ತಿದ್ದು, ಶೀಘ್ರದಲ್ಲೇ ಬಗೆಹರಿಸುವುದಾಗಿ ತಿಳಿಸಿವೆ.