ಕರ್ನಾಟಕ

karnataka

By

Published : Oct 31, 2022, 9:15 PM IST

ETV Bharat / bharat

ಇನ್​ಸ್ಟಾಗ್ರಾಮ್ ಸರ್ವರ್​ ಡೌನ್: ಬಳಕೆದಾರರ ಕೆಲ ಖಾತೆಗಳು ಅಮಾನತು

ತಾಂತ್ರಿಕ ದೋಷದಿಂದಾಗಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ ಸರ್ವರ್​ ಡೌನ್​ ಆಗಿದ್ದು, ಹಲವು ಖಾತೆಗಳು ಅಮಾನತುಗೊಂಡಿವೆ.

instagram-account-suspended-instagram-server-down
Etಇನ್​ಸ್ಟಾಗ್ರಾಮ್​ನ ಸರ್ವರ್​ ಡೌನ್​ : ಬಳಕೆದಾರರ ಖಾತೆ ಅಮಾನತುv Bharat

ಹೈದರಾಬಾದ್​ :ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ ಸರ್ವರ್​ ಡೌನ್​ ಆಗಿದೆ. ಜೊತೆಗೆ ಕೆಲ​ ಖಾತೆಗಳು ಅಮಾನತುಗೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಕೆಲವು ಇನ್​ಸ್ಟಾಗ್ರಾಮ್ ಬಳಕೆದಾರರ ಖಾತೆಯಲ್ಲಿ ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಬಳಕೆ ಮಾಡುವಾಗ ಕಂಡುಬಂದಿದೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಪಷ್ಟನೆ ನೀಡಿದ್ದು, ಬಳಕೆದಾರರ ಖಾತೆಯಲ್ಲಿ ಕೆಲವು ತಾಂತ್ರಿಕ ದೋಷವಿರುವುದು ಕಂಡುಬಂದಿದೆ, ಈ ಬಗ್ಗೆ ಬಳಕೆದಾರರಲ್ಲಿ ಕ್ಷಮೆ ಯಾಚಿಸುತ್ತೇವೆ. ಇದನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದೆ.

ಇನ್ನು ಈ ತಾಂತ್ರಿಕ ದೋಷದಿಂದಾಗಿ ಖ್ಯಾತ ಫುಟ್ಬಾಲ್​ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರು ತಮ್ಮ 3 ಮಿಲಿಯನ್​ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಇದಕ್ಕಿಂತ ಮೊದಲು ಇವರು 493 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರು.​​ ಅಲ್ಲದೆ ಸ್ವತಃ ಇನ್​ಸ್ಟಾಗ್ರಾಮ್ ತನ್ನ ಒಂದು ಮಿಲಿಯನ್​​​ ಹಿಂಬಾಲಕರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆಯಿಂದ ಈ ಸಮಸ್ಯೆ ಕಂಡು ಬಂದಿದ್ದು, ಇನ್​ಸ್ಟಾಗ್ರಾಮ್ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ :ಇನ್ನು ಟ್ವಿಟರ್​ ಬ್ಲೂ ಟಿಕ್ ಫ್ರೀ ಅಲ್ಲ.. ಪ್ರತಿ ತಿಂಗಳು 20 ಡಾಲರ್ ನೀಡಬೇಕು..! ಭಾರತದಲ್ಲಿ ಅದರ ಮೊತ್ತ ಎಷ್ಟು ಗೊತ್ತಾ?

ABOUT THE AUTHOR

...view details