ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಹೊಸ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ನಟಿ. ಈಗ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ರಶ್ಮಿಕಾ ಮತ್ತೊಮ್ಮೆ ಹೊಸ ಪ್ರಾಜೆಕ್ಟ್ನಲ್ಲಿ ನಟ ವಿಕ್ಕಿ ಕೌಶಲ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿರುವ ಹಿಂಟ್ ಬಿಟ್ಟುಕೊಟ್ಟಿದ್ದಾರೆ.
ರಶ್ಮಿಕಾ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಚೆಂಡಿನ ಮೇಲೆ ಕಣ್ಣು, ಬಾಯಿ, ಮೂಗು ಇರುವ ಸ್ಮೈಲಿ ಫೇಸ್ ಚಿತ್ರ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, 'ಇದು ನಿಮಗಾಗಿ ಶೂಟಿಂಗ್ ದಿನದ ನೋಟ' ಎಂದು ವಿಕ್ಕಿ ಕೌಶಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ವಿಕ್ಕಿ ಕೌಶಲ್ ರಶ್ಮಿಕಾ ಅವರ ಅದೇ ಪೋಸ್ಟ್ ಅನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡು 'ನಿಮ್ಮ ಜೊತೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ' ಎಂದು ಬರೆದುಕೊಂಡಿದ್ದಾರೆ.