ಕರ್ನಾಟಕ

karnataka

ETV Bharat / bharat

ಕ್ರೈಂ ಧಾರಾವಾಹಿಯಿಂದ ಪ್ರೇರಣೆ: ಬಾಲಕನ ಕಿಡ್ನಾಪ್​ ಮಾಡಿ ಕೊಲೆಗೈದ 10ನೇ ಕ್ಲಾಸ್​ ವಿದ್ಯಾರ್ಥಿಗಳು! - ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆ

ಕ್ರೈಂ ಧಾರಾವಾಹಿಯಿಂದ ಪ್ರೇರಣೆ- ಹಣ ವಸೂಲಿ ಉದ್ದೇಶದಿಂದ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ 7 ವರ್ಷದ ಬಾಲಕನ ಕಿಡ್ನಾಪ್-​ 10 ನೇ ತರಗತಿ ವಿದ್ಯಾರ್ಥಿಗಳಿಂದ ಕೃತ್ಯ

inspired-by-tv-crime-show-5-boys-in-up-kidnap-and-kill-7-yr-old
ಟಿವಿ ಕ್ರೈಂ ಧಾರಾವಾಹಿಯಿಂದ ಪ್ರೇರಣೆ: ಬಾಲಕನ ಕಿಡ್ನಾಪ್​ ಮಾಡಿ ಕೊಲೆಗೈದ 10ನೇ ತರಗತಿ ವಿದ್ಯಾರ್ಥಿಗಳು

By

Published : Jul 17, 2022, 6:11 PM IST

ಬುಲಂದ್‌ಶಹರ್ (ಉತ್ತರ ಪ್ರದೇಶ): ಕ್ರೈಂ ಧಾರಾವಾಹಿವೊಂದನ್ನು ನೋಡಿ ಪ್ರೇರಿತರಾದ ಐವರು ಅಪ್ರಾಪ್ತ ಬಾಲಕರು ಏಳು ವರ್ಷದ ಬಾಲಕನೋರ್ವನನ್ನು ಅಪಹರಿಸಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದಿದೆ. ಎಲ್ಲ ಆರೋಪಿಗಳು 15ರಿಂದ 16 ವರ್ಷದೊಳಗಿನವರಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಆರೋಪಿಗಳ ಪೈಕಿ ಒಬ್ಬ ಬಾಲಕ ಯಾವುದೋ ಕಾರಣದಿಂದಾಗಿ 40 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ಬಗ್ಗೆ ಚಿಂತೆಗೀಡಾಗಿದ್ದ ಆ ಬಾಲಕ ತನ್ನ ಸ್ನೇಹಿತರಿಗೆ ಹಣ ಕಳೆದುಕೊಂಡ ಕುರಿತು ವಿವರಿಸಿದ್ದ. ನಂತರ ಕಳೆದುಕೊಂಡು ಹಣವನ್ನು ಹೇಗಾದರೂ ಮಾಡಿ ಸಂಪಾದನೆ ಮಾಡಬೇಕೆಂಬ ಉದ್ದೇಶದಿಂದ ಕಿಡ್ನಾಪ್​​ ಪ್ಲಾನ್​ ರೂಪಿಸಿದ್ದಾರೆ.

ಅಂತೆಯೇ ಜುಲೈ 9ರಂದು ಎಂದಿನಂತೆ ಈ ಬಾಲಕರು ಶಾಲೆಗೆ ತೆರಳಿದ್ದಾರೆ. ಈ ಸಮಯದಲ್ಲಿ ಕಿಡ್ನಾಪ್​ ಮಾಡುವ ಯೋಚನೆ ಅವರಲ್ಲಿ ಇರಲಿಲ್ಲ. ಆದರೆ, ಅಂದು ಇದೇ ಶಾಲೆಯಲ್ಲಿ ಓದುತ್ತಿದ್ದ ಏಳು ವರ್ಷದ ಬಾಲಕ ಬೇಗ ಶಾಲೆಗೆ ಬಂದಿದ್ದ. ಇವರು ಕೂಡ ಶಾಲೆಗೆ ಬೇಗ ಹೋಗಿದ್ದರಿಂದ ಶಾಲೆಯ ಆವರಣದಲ್ಲಿ ಹೆಚ್ಚು ಜನರು ಇರಲಿಲ್ಲ. ಆಗ ಇದೇ ಸೂಕ್ತ ಸಂದರ್ಭ ಎಂದು ತಿಳಿದು ಆಟವಾಡುತ್ತಿದ್ದ ಆ ಬಾಲಕನನ್ನು ಎತ್ತಿಕೊಂಡು ಬಂದಿದ್ದಾರೆ. ಇತ್ತ, ಬೇರೆ ಶಾಲೆಯಲ್ಲಿ ಓದುತ್ತಿದ್ದ ಆರೋಪಿ ಬಾಲಕರ ಸಹವರ್ತಿಗಳು ಬಂದಿದ್ದು, ಒಟ್ಟಾರೆ ಐವರು ಸೇರಿಕೊಂಡು ಶಾಲೆಯಿಂದ ಕಿಡ್ನಾಪ್​ ಮಾಡಿದ್ದಾರೆ.

ಕಿಡ್ನಾಪ್​ ನಂತರ ಶುರುವಾದ ಭಯ: ನಂತರ ಇಬ್ಬರು ಆರೋಪಿಗಳು ಬೈಕ್​ನಲ್ಲಿ ಬಾಲಕನನ್ನು ಅಲಿಘಡ್​​ಗೆ ಕರೆದೊಯ್ದಿದ್ದಾರೆ. ಮತ್ತೊಬ್ಬ ಬಾಲಕ ಬಸ್​ನಲ್ಲಿ ಅಲಿಘಡ್​ಗೆ ತೆರಳಿದ್ದಾನೆ. ಅಲಿಘಡ್​​ನಲ್ಲಿ ಮತ್ತೊಬ್ಬ ಬಾಲಕನ ಮನೆಯಿದ್ದರಿಂದ ಇಲ್ಲಿ ಒತ್ತೆಯಾಗಿಸಿಕೊಂಡು ಹಣ ವಸೂಲಿ ಮಾಡಬೇಕೆಂದು ಪ್ಲಾನ್​ ಮಾಡಿದ್ದಾರೆ. ಆದಾಗ್ಯೂ, ತಮ್ಮ ಈ ಪ್ಲಾನ್​ ಯಶಸ್ವಿಯಾಗದಿದ್ದರೆ ಏನು ಮಾಡಬೇಕೆಂದು ಯೋಚಿಸುತ್ತ ಗಾಬರಿಗೊಂಡಿದ್ದರು. ಅಲ್ಲದೇ, ಮುಂದೆ ಮತ್ತೊಂದು ತೊಂದರೆಗೆ ಸಿಲುಕಬಹುದು ಎಂದು ಭಾವಿಸಿ, ಕಿಡ್ನಾಪ್​ ಮಾಡಿದ್ದ ಬಾಲಕನನ್ನು ಕರವಸ್ತ್ರದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಬಾಲಕನ ಮೃತದೇಹವನ್ನು ನದಿಯಲ್ಲಿ ಎಸೆದು ಆರೋಪಿಗಳು ಬುಲಂದ್‌ಶಹರ್‌ಗೆ ಮರಳಿ ಬಂದಿದ್ದರು. ಇತ್ತ, ಸಂತ್ರಸ್ತ ಬಾಲಕನ ತಂದೆಯು ತಮ್ಮ ಮಗ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಇದಾದ ಮರುದಿನ ಕೊಲೆಯಾದ ಬಾಲಕನ ಶವ ಅಲಿಗಢದ ನದಿಯಲ್ಲಿ ಪತ್ತೆಯಾಗಿತ್ತು. ಆಗ ಈ ಬಾಲಕ ಬುಲಂದ್‌ಶಹರ್‌ನಿಂದ ನಾಪತ್ತೆಯಾಗಿರುವುದು ಎಂದು ತಿಳಿದು ಬಂದಿತ್ತು. ಈ ಪ್ರಕರಣ ತನಿಖೆ ಬೇಧಿಸಲು ಆರು ತಂಡಗಳನ್ನು ರಚಿಸಲಾಗಿತ್ತು ಎಂದು ಬುಲಂದ್‌ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

100 ಸಿಸಿಟಿವಿ ಪರಿಶೀಲನೆ: ಈ ಬಾಲಕನ ಕೊಲೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸುಮಾರು 100 ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, 200ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶಾಲೆಯಲ್ಲಿ ಓದುತ್ತಿದ್ದ ಐವರು ಬಾಲಕರೇ ಈ ಕೃತ್ಯ ಎಸಗಿದ್ದು ಎಂಬುದು ಖಚಿತವಾಗಿದೆ. ಸದ್ಯ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:ಯುವತಿಗೆ ಕಿರುಕುಳ ನೀಡುತ್ತಿದ್ದ ಅಪ್ರಾಪ್ತನ ಕೊಲೆ: ಇಬ್ಬರ ಬಂಧನ

ABOUT THE AUTHOR

...view details