ಹಿಸಾರ್(ಹರಿಯಾಣ): ಒಬ್ಬ ವ್ಯಕ್ತಿಗೆ ಕೌಶಲ್ಯ, ಉತ್ಸಾಹ , ಧೈರ್ಯ ಮತ್ತು ಸಾಧಿಸಬೇಕೆಂಬ ಛಲ ಇದ್ದರೆ ಅವನು ಯಶಸ್ಸಿನ ಉತ್ತುಂಗಕ್ಕೆ ತಲುಪುತ್ತಾನೆ ಎಂದು ಹೇಳಲಾಗುತ್ತದೆ. ಈ ಮಾತು ಹಿಸಾರ್‌ನಲ್ಲಿ ವಾಸಿಸುತ್ತಿರುವ ಮೀನು ರಹೇಜಾ ಅವರಿಗೆ ಸಹ ಅನ್ವಯವಾಗುತ್ತಿದೆ.
ಹೌದು, ಮೀನು ರಹೇಜಾ ಅವರು ಕೇವಲ 2 ಅಡಿ 9 ಇಂಚು ಇದ್ದಾರೆ. ಅವರು ಕಂಡ ತಮ್ಮ ಕನಸಿಗೆ ತಮ್ಮ ಅಂಗವೈಕಲ್ಯ ಎಂದಿಗೂ ಅಡ್ಡಿಯಾಗಿಲ್ಲ. ವಿಕಲಚೇತನರ ಸಹಾಯಕ್ಕಾಗಿ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದಾರೆ. ಎನ್‌ಜಿಒ ಮೂಲಕ ದಿವ್ಯಾಂಗರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುತ್ತಾ ತಮ್ಮ ಸೇವೆ ಮುಂದುವರೆಸಿದ್ದಾರೆ.
ಮಕ್ಕಳು, ಮಹಿಳೆಯರ ಯೋಗ ಕ್ಷೇಮ ವಿಚಾರಿಸುತ್ತಿರುವ ಮೀನು ರಹೇಜಾ ವಕೀಲೆ ಮೀನು ರಹೇಜಾ ಹಿಸಾರ್ ಅವರ ನಿಲುವು ಚಿಕ್ಕದಾಗಿದೆ. ಆದರೆ, ಆಲೋಚನೆ ತುಂಬಾ ದೊಡ್ಡದು. ಹಿಸಾರ್ ನ್ಯಾಯಾಲಯದಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ರಹೇಜಾ, ತಮ್ಮ ಗಳಿಕೆಯನ್ನು ವಿಕಲಾಂಗರಿಗಾಗಿ ಮೀಸಲಿಟ್ಟಿದ್ದಾರೆ. ಕೇವಲ 2 ಅಡಿ ಇರುವ ಇವರು ಬಾಲ್ಯದಿಂದಲೂ ಸಾಕಷ್ಟು ಸವಾಲು, ಅವಮಾನವನ್ನು ಅನುಭವಿಸಿದ್ದಾರೆ.
ಆದರೆ, ಇದನ್ನೆಲ್ಲವನ್ನು ಮೆಟ್ಟಿನಿಂತ ಮೀನು, ತನ್ನನ್ನು ತಾನು ಸಮರ್ಥಳನ್ನಾಗಿ ಮಾಡಿಕೊಂಡು ಇಂದು ದೇಶದ ಅತ್ಯಂತ ಕಡಿಮೆ ಎತ್ತರದ ಮಹಿಳಾ ವಕೀಲೆ ಎಂಬ ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ರಹೇಜಾ ಅವರ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲಾಗಿದೆ. ಜೊತೆಗೆ ಕಲಾಂ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸಹ ಸೇರಿಸಲಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಮೀನು ರಹೇಜಾ, ಐಎಎಸ್ ಅಧಿಕಾರಿಯಾಗುವ ಮೂಲಕ ಸಮಾಜ ಸೇವೆ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು, ಆದರೆ, ಕಡಿಮೆ ಎತ್ತರವಿರುವ ಹಿನ್ನೆಲೆ ಐಎಎಸ್ ಆಗುವ ಕನಸು ಭಗ್ನಗೊಂಡಿತು. ಸದ್ಯಕ್ಕೆ ತಂದೆ - ತಾಯಿಯ ಸ್ಫೂರ್ತಿ ಪಡೆದು ಹಿಸಾರ್ ನ್ಯಾಯಾಲಯದಲ್ಲಿ ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ. ವೃತ್ತಿಪರ ಕೆಲಸದ ಜೊತೆಗೆ ಅಂಗವಿಕಲ ಮತ್ತು ನಿರ್ಗತಿಕ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು.
ಕಲಾಂ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ವಿಕಲಚೇತನ ಮತ್ತು ನಿರ್ಗತಿಕ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ರಹೇಜಾ ತಮ್ಮ ತಾಯಿ ಕೃಷ್ಣಾ ದೇವಿ ಹೆಸರಿನಲ್ಲಿ ಕೃಷ್ಣಾ ದಿವ್ಯಾಂಗ್ ಎನ್‌ಜಿಒ ಅನ್ನು ಹಿಸಾರ್‌ನಲ್ಲಿ ಸ್ಥಾಪಿಸಿದ್ದಾರೆ. ಇವರ ಈ ಕಾರ್ಯ ಹೀಗೆ ಮುಂದುವರೆಯಲಿ ಎಂಬುದು ನಮ್ಮ ಆಶಯ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ