ಕರ್ನಾಟಕ

karnataka

ETV Bharat / bharat

ಲಂಚ ಸ್ವೀಕಾರಕ್ಕೂ GPay ಬಳಕೆ ಆರೋಪ.. ಇನ್ಸ್‌ಪೆಕ್ಟರ್, ಇಬ್ಬರು ಕಾನ್ಸ್​ಟೇಬಲ್​ ಅಮಾನತು

ಗೂಗಲ್​ ಪೇ ಮೂಲಕ 10 ಸಾವಿರ ರೂಪಾಯಿ ಲಂಚ ಪಡೆದಿದ್ದ ಆರೋಪದಡಿ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

google
ಗೂಗಲ್​ ಪೇ ಮೂಲಕ ಲಂಚ ಸ್ವೀಕಾರ

By

Published : Jul 3, 2021, 11:27 AM IST

ಉತ್ತರಪ್ರದೇಶ: ಡಿಯೋರಿಯಾ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಿಂದ ಗೂಗಲ್​ ಪೇ ಮೂಲಕ 10 ಸಾವಿರ ರೂಪಾಯಿ ಲಂಚ ಪಡೆದಿದ್ದ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.

ಎಫ್​ಐಆರ್

ಡಿಯೋರಿಯಾದ ಭಾಗಲ್ಪುರ್ ಚೆಕ್​​ಪೋಸ್ಟ್‌ನ ಉಸ್ತುವಾರಿ ವಹಿಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಅಮಿತ್ ಪಾಂಡೆ ಗೂಗಲ್ ಪೇ ಮೂಲಕ ವ್ಯಕ್ತಿಯೊಬ್ಬರಿಂದ 10 ಸಾವಿರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಅವರ ಜತೆಗೆ ಇಬ್ಬರೂ ಹೆಡ್​ ಕಾನ್ಸ್​ಟೇಬಲ್​ಗಳನ್ನು ಸಹ ಸಸ್ಪೆಂಡ್​ ಮಾಡಲಾಗಿದೆ.

ವಾರಣಾಸಿ ಜಿಲ್ಲೆಯ ಖೋಜ್ವಾ ಬಜಾರ್ ನಿವಾಸಿ ರಜತ್ ಕುಮಾರ್ ರಜತ್ ಕುಮಾರ್ ಅವರು ಮೇ 30 ರಂದು ಕಾರಿನಲ್ಲಿ ಭಾಗಲ್ಪುರ್ ಮೂಲಕ ಬಿಹಾರ ರಾಜ್ಯದ ಚಂಪಾರಣ್​ಗೆ ತೆರಳುತ್ತಿದ್ದ ವೇಳೆ ಭಾಗಲ್ಪುರ್ ಸೇತುವೆ ಬಳಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ನಂತರ, ಟ್ರಕ್ ಚಾಲಕ ಓಡಿಹೋಗಲು ಪ್ರಯತ್ನಿಸಿದ್ದು, ರಜತ್ ಕುಮಾರ್ ಟ್ರಕ್ ಚಾಲಕನನ್ನು ಹಿಡಿದಿದ್ದಾರೆ. ಈ ವೇಳೆ ಟ್ರಕ್ ಚಾಲಕ ಮತ್ತು ರಜತ್ ಕುಮಾರ್ ನಡುವೆ ಗಲಾಟೆ ನಡೆದಿತ್ತು. ಅದೇ ಸಮಯದಲ್ಲಿ, ಇಬ್ಬರು ಕಾನ್ಸ್​ಟೇಬಲ್​​ ಜೊತೆ ಸ್ಥಳದಲ್ಲಿದ್ದ ಇನ್ಸ್​ಪೆಕ್ಟರ್​ ಅಮಿತ್ ಪಾಂಡೆ ರಜತ್​ ಕುಮಾರ್​ ಹಾಗೂ ಟ್ರಕ್ ಚಾಲಕನ ಬಳಿ ಬಂದು ತಮ್ಮ ಪರ್ಸ್​ ವಶಪಡಿಸಿಕೊಂಡಿದ್ದಾಗಿ ರಜತ್​ ಹೇಳಿದ್ದಾರೆ. ಅಲ್ಲದೇ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, ಹಣವನ್ನು ಗೂಗಲ್​ ಪೇ ಮಾಡುವಂತೆ ನಂಬರ್​ ಕೊಟ್ಟಿದ್ದಾಗಿ ರಜತ್​ ತಿಳಿಸಿದ್ದಾರೆ. 10 ಸಾವಿರ ಹಣವನ್ನು ಗೂಗಲ್​ ಪೇ ಮಾಡಿದ ಬಳಿಕ ತಮ್ಮನ್ನು ಅಲ್ಲಿಂದ ಹೋಗಲು ಬಿಟ್ಟರು ಎಂದು ರಜತ್​ ಹೇಳಿದ್ದಾರೆ. ಅಲ್ಲದೇ ಕೇಳಿದಷ್ಟೂ ಲಂಚ ಕೊಡದ ಕಾರಣ, ಇನ್ಸ್‌ಪೆಕ್ಟರ್ ಆತನ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ರಜತ್ ಕುಮಾರ್ ಈ ಬಗ್ಗೆ ಎಸ್​ಪಿ ಅವರಿಗೆ ಕಂಪ್ಲೆಂಟ್​ ಮಾಡಿದ್ದು, ತನಿಖೆ ನಡೆಸಿದಾಗ ರಜತ್ ಮಾಡಿದ​ ಆರೋಪ ನಿಜ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಮಿತ್ ಪಾಂಡೆ ಮತ್ತು ಹೆಡ್​ ಕಾನ್‌ಸ್ಟೆಬಲ್‌ಗಳಾದ ಕಮಲೇಶ್ ಯಾದವ್ ಮತ್ತು ಉದಯ್ ಪ್ರತಾಪ್ ರೈ ಅವರನ್ನು ಅಮಾನತುಗೊಳಿಸಿ ಆದೇಶ ಹೊರಹಾಕಿದ್ದಾರೆ.ಅಲ್ಲದೇ ಇವರ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details